ಕೆಜಿಎಫ್ ಚಾಪ್ಟರ್ 2
ಯಶ್ (Yash) ಅಭಿನಯದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಬಾಕ್ಸಾಫೀಸ್ ಧೂಳೀಪಟ ಮಾಡುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಯ್ಮಾತಿನ ಪ್ರಚಾರ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ. ಇದರ ಪರಿಣಾಮ ಈಗಾಗಲೇ ಭಾನುವಾರದವರೆಗಿನ ಶೋಗಳು ಬಹುತೇಕ್ ಬುಕ್ ಆಗಿವೆ. ಕನ್ನಡ ಚಿತ್ರಗಳಿಗೆ ಹೆಚ್ಚಾಗಿ ವೀಕ್ಷಕರು ಇರದ ತಮಿಳುನಾಡಿನಲ್ಲಿ ತೆರೆ ಕಂಡ ಎರಡು, ಮೂರನೇ ದಿನವೂ ಮುಂಜಾನೆಯ ಶೋಗಳನ್ನು ಏರ್ಪಡಿಸಲಾಗಿದೆ. ವಿದೇಶಗಳಲ್ಲೂ ಚಿತ್ರದ ಸ್ಕ್ರೀನ್ಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಚಿತ್ರದ ಶೋಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಬಾಕ್ಸಾಫೀಸ್ನಲ್ಲಿ (KGF Chapter 2 Box Office Collection) ಹಲವು ದಾಖಲೆಗಳನ್ನು ಬರೆಯುತ್ತಿದೆ ‘ಕೆಜಿಎಫ್ ಚಾಪ್ಟರ್ 2’. ಇದೀಗ ಚಿತ್ರತಂಡ ಭಾರತದಲ್ಲಿ ಯಶ್ ನಟನೆಯ ಚಿತ್ರವು ಎರಡು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಹಿರಂಗಗೊಳಿಸಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಸೇರಿಸಿ ‘ಕೆಜಿಎಫ್ 2’ ಚಿತ್ರವು 240 ಕೋಟಿ ರೂ ಬಾಚಿಕೊಂಡಿದೆ.
ಬಾಕ್ಸಾಫೀಸ್ ಲೆಕ್ಕಾಚಾರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’, ‘ಕೆಜಿಎಫ್ ಚಾಪ್ಟರ್ 2’ ಎರಡು ದಿನಗಳಲ್ಲಿ ಭಾರತದಲ್ಲಿ ಒಟ್ಟು 240 ಕೋಟಿ ರೂಗಳನ್ನು ಗಳಿಸಿದೆ’ ಎಂದು ಬರೆದಿದೆ.
ಚಿತ್ರತಂಡ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಹಂಚಿಕೊಂಡ ಟ್ವೀಟ್:
Thu kya main kya Hatja Hatja 🔥
𝐓𝐨𝐨𝐟𝐚𝐧 𝐓𝐨𝐨𝐟𝐚𝐧 ⚡#KGFChapter2 @Thenameisyash @prashanth_neel @VKiragandur @hombalefilms @duttsanjay @TandonRaveena @SrinidhiShetty7 @excelmovies @AAFilmsIndia @VaaraahiCC @DreamWarriorpic @PrithvirajProd #KGF2BoxOfficeMonster pic.twitter.com/QHYZBLlpmD— Hombale Films (@hombalefilms) April 16, 2022