KGF Chapter 2: ರಾಕಿ ಸಾಮ್ರಾಜ್ಯ ವೀಕ್ಷಿಸುತ್ತಿರುವ ಬೆಂಗಳೂರು ಬಾಯ್ಸ್; ಆರ್​ಸಿಬಿ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ | Yash starring KGF Chapter 2 special screening for RCB Players within IPL 2022 bio bubble


KGF Chapter 2: ರಾಕಿ ಸಾಮ್ರಾಜ್ಯ ವೀಕ್ಷಿಸುತ್ತಿರುವ ಬೆಂಗಳೂರು ಬಾಯ್ಸ್; ಆರ್​ಸಿಬಿ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ

ಆರ್​ಸಿಬಿ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​​ವೆಲ್, ಫಾಫ್​ಡು ಪ್ಲೆಸಿಸ್ (ಎಡ ಚಿತ್ರ), ‘ಕೆಜಿಎಫ್ 2’ ಚಿತ್ರದಲ್ಲಿ ಯಶ್ (ಬಲ ಚಿತ್ರ)

ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಹವಾ ಜೋರಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮೊದಲಾದ ತಾರೆಯರು ಬಣ್ಣಹಚ್ಚಿರುವ ಚಿತ್ರ ಬಾಕ್ಸಾಫೀಸ್​ನಲ್ಲಿ ಜಯಭೇರಿ ಬಾರಿಸಿದ್ದು, ಈಗಾಗಲೇ ಚಿತ್ರದ ಗಳಿಕೆ 400 ಕೋಟಿ ರೂ ದಾಟಿದೆ. ಇತ್ತೀಚೆಗಷ್ಟೇ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಹೊಸ ಒಪ್ಪಂದ ಮಾಡಿಕೊಂಡಿದ್ದವು. ಕ್ರೀಡೆ ಹಾಗೂ ಮನರಂಜನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಜತೆಯಾಗಿ ಸಾಗುವುದಾಗಿ ಎರಡೂ ಸಂಸ್ಥೆಗಳು ಘೋಷಿಸಿದ್ದವು. ಎಲ್ಲೆಡೆ ‘ಕೆಜಿಎಫ್’ ಟ್ರೆಂಡ್ ಜೋರಾಗಿರುವಂತೆಯೇ ಐಪಿಎಲ್ ಬಯೋಬಬಲ್ ಒಳಗಡೆಯೇ ಆರ್​ಸಿಬಿ ಆಟಗಾರರು ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸುತ್ತಿದ್ದಾರೆ. ಹೌದು. ಇಂದು (ಏ.17) ಆರ್​ಸಿಬಿ ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದು, ಶೋ ಆರಂಭಗೊಂಡಿದೆ ಎಂದು ಬರೆದುಕೊಂಡಿದೆ.

‘ಆರ್​ಸಿಬಿ ಬಯೋಬಬಲ್​ನಲ್ಲಿ ಕೆಜಿಎಫ್ ಚಾಪ್ಟರ್ 2 ವಿಶೇಷ ಪ್ರದರ್ಶನ. ಬ್ಲಾಕ್​ಬಸ್ಟರ್ ಚಿತ್ರವನ್ನು ವೀಕ್ಷಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಆರ್​ಸಿಬಿ ಟ್ವೀಟ್ ಮಾಡಿದೆ. ನಟ, ನಿರೂಪಕ ದಾನಿಶ್ ಸೇಠ್ ಚಿತ್ರ ಪ್ರದರ್ಶನದ ಫೋಟೋ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ನಟ, ನಿರೂಪಕ ದಾನಿಶ್ ಸೇಠ್ ಹಂಚಿಕೊಂಡ ಟ್ವೀಟ್:

TV9 Kannada


Leave a Reply

Your email address will not be published.