KGF2: ನಿಮ್ಮ ಟೈಮ್​ಲೈನ್; ಯೂಟ್ಯೂಬ್​ನ ಮಿಲಿಯಗಟ್ಟಲೆ ವ್ಯೂವ್ಸ್, ಕಮೆಂಟ್ಸ್ ಸ್ವಯಂಪ್ರೇರಿತವೆ? | Nimma Timeline What is entertainment KGF 2 by BH


KGF2: ನಿಮ್ಮ ಟೈಮ್​ಲೈನ್; ಯೂಟ್ಯೂಬ್​ನ ಮಿಲಿಯಗಟ್ಟಲೆ ವ್ಯೂವ್ಸ್, ಕಮೆಂಟ್ಸ್ ಸ್ವಯಂಪ್ರೇರಿತವೆ?

ನಿಮ್ಮ ಟೈಮ್​ಲೈನ್ | Nimma Timeline : ಕೆಜಿಎಫ್ ಅಭೂತಪೂರ್ವ ಯಶಸ್ಸು ಕಂಡಿದೆ. ನಮ್ಮ ಅನಿಸಿಕೆಗಳು… it hardly matters. ಜನ ಚಿತ್ರಮಂದಿರದ ಕಡೆನುಗ್ಗುತ್ತಲೇ ಇದ್ದಾರೆ. ಇದೊಂದು ಪ್ಯಾನ್ ಇಂಡಿಯನ್ ಹಿಟ್ ಅನ್ನೋದ್ರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ನನ್ನ ಗೆಳೆಯರು ಚಿತ್ರದ ದಿನ ದಿನದ ಗಳಿಕೆಯನ್ನ update ಮಾಡುತ್ತಲೇ ಇದ್ದಾರೆ. They take lot of pride in it and that’s fine. ಎಲ್ಲರ ಗಮನ ಗಳಿಕೆಯ ಮೇಲಿರುವಾಗ ನನಗೆ ಕುತೂಹಲ ಹುಟ್ಟಿಸಿರುವ ವಿಷಯ ನಿರ್ಮಾಪಕ ಚಿತ್ರದ ಪ್ರಮೋಷನ್​ಗೆ ಖರ್ಚು ಮಾಡಿರುವ ಮೊತ್ತವೆಷ್ಟು ಎಂಬುದು. ಮೊದಲೆಲ್ಲ ಒಂದು ಚಲನಚಿತ್ರ ಗೆಲ್ಲಬೇಕಾದರೆ ಬಾಯಿಂದ ಬಾಯಿಗೆ ಸುದ್ದಿ ಹರಡಬೇಕಿತ್ತು. ಕೆಲವು ಚಿತ್ರಗಳು ಒಂದು ವಾರವಾದ ಮೇಲೆ ಸುಧಾರಿಸಿಕೊಂಡು ಹಣ ಮಾಡುತ್ತಿದ್ದವು. ನಾನು ಸುಪ್ರಭಾತ, ಅಮೃತವರ್ಷಿಣಿ, ನಿಷ್ಕರ್ಷ, ಬೆಳದಿಂಗಳ ಬಾಲೆ, ಓಂ ಚಿತ್ರಗಳನ್ನ ನೋಡಿದ್ದು ನನ್ನ ಗೆಳೆಯರು, ಅಕ್ಕಪಕ್ಕದ ಮನೆಯವರು ಈ ಚಿತ್ರಗಳ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ ಮೇಲೆಯೇ. ಚಿತ್ರಮಂದಿರಕ್ಕೆ ಹೋಗಿ, ಕಂಟೆಂಟ್ ನೋಡಿದ ಜನರ “ವರ್ಡ್ ಆಫ್ ಮೌತ್” ನಿಂದ ಚಿತ್ರ ಗೆಲ್ಲುತ್ತಿದ್ದವು.
ಎಚ್​ ಜಿ

ಸಿನೆಮಾ ಬರಿಯ ಮನೋರಂಜನೆಗೆ ಮಾತ್ರವೇ? ಹಾಗಾದರೆ ಮನೋರಂಜನೆ ಎಂದರೇನು? It is a cliché. Merely a way to legitimize a particular form of laziness and ethical irresponsibility – ಸುಂದರ್ ಸರುಕ್ಕೈ.

ನನಗೆ ಚನ್ನಾಗಿ ನೆನಪಿದೆ ಮಂಡ್ಯದಲ್ಲಿ ನಾನು ಹೈಸ್ಕೂಲ್ ಓದುವಾಗ “ಮಂಡ್ಯದ ಗಂಡು” ಅಂತ ಚಿತ್ರವೊಂದು ಬಂದಿತ್ತು, ಅಂಬರೀಶ್ ನಾಯಕ, ಕಂಟೆಂಟ್, ಮೇಕಿಂಗ್ ಎರಡು ಕಳಪೆ ಇದ್ದಿದ್ದರಿಂದ ಚಿತ್ರ ಎಷ್ಟೇ ಪ್ರಮೋಟ್ ಮಾಡಿದರು ತೋಪಾಯಿತು. ಆ ಕಾಲಕ್ಕೆ ಅದ್ದೂರಿ ಮೇಕಿಂಗ್ ಇದ್ದ ಬಹು ಭಾಷಾ ಚಿತ್ರ “ಶಾಂತಿ ಕ್ರಾಂತಿ” ಕೂಡ ತನ್ನ ಸವಕಲು ಕತೆ ಮತ್ತು ಪೂರ್ ಕಂಟೆಂಟ್ನಿಂದ ನೆಲಕಚ್ಚಿತು. ರಜನಿಕಾಂತ್ ಕೂಡ ಆ ಚಿತ್ರವನ್ನ ಉಳಿಸಲಾಗಿರಲಿಲ್ಲ. (ಅದು ಬರಿಯ ಪ್ರಿಂಟ್ ಮೀಡಿಯಾ ಜಮಾನ) ಫಾಸ್ಟ್ ಫಾರ್ವರ್ಡ್ 30 years, ಕೆಜಿಎಫ್ 2 ಥೀಯೇಟರ್ಗೆ ಬರುವ ಮುನ್ನವೇ ಗೆದ್ದುಬಿಟ್ಟಿತ್ತು ಅನ್ನೋದು ನನ್ನ ಅನಿಸಿಕೆ! Everybody knew KGF-2 would be a phenomenal hit. ಚಿತ್ರದ ಪ್ರೊಮೋಷನ್ ಆ ಮಟ್ಟಕಿತ್ತು. Youtube, ಸೋಶಿಯಲ್ ಮೀಡಿಯಾಗಳಲ್ಲಿ ಅದರದೇ ಹವಾ. ಯಶ್ ಮತ್ತು ಚಿತ್ರದ ತಂಡ ಬಹುತೇಕ ಪ್ರಾಂತೀಯ ಹಾಗೂ ರಾಷ್ಟ್ರೀಯ ಚಾನೆಲ್​ಗಳಲ್ಲಿ ಸಂದರ್ಶನ ನೀಡಿದ್ದರು. ಥೀಯೇಟರ್​ಗೆ ಬರುವ ಮುನ್ನವೇ ಚಿತ್ರ ಜನರ ತಲೆಯನ್ನ ಆವರಿಸಿಬಿಟ್ಟಿತ್ತು. There was so much of buzz around the movie. ಈ buzz ಸೃಷ್ಟಿ ಮಾಡಲಿಕ್ಕೆ ತಂಡ ಮೀಸಲಿಟ್ಟ ಹಣವೆಷ್ಟು, ಫಾರ್ favorable ಅಲ್ಗಾರಿಥಂಸ್ youtube ಮತ್ತು ಸೋಶಿಯಲ್ ಮೀಡಿಯಾಗಳಿಗೆ ಎಷ್ಟು ಹಣ ಸುರಿಯಲಾಯಿತು? ಈ ಪ್ರಶ್ನೆಗಳಲ್ಲದೆ ನನ್ನಲ್ಲಿ ಮೂಡಿರುವ ಪ್ರಶ್ನೆಗಳು ಹಲವಾರು…

1. ಮೊದಲಿಗೆ youtube trailer ಅನ್ನ ಕೋಟ್ಯಂತರ ಜನ ಸ್ವಯಂಪ್ರೇರಿತರಾಗಿಯೇ ನೋಡಿದ್ರ ಅಥವಾ 10M views ಅಂತ ತೋರಿಸುವ youtube ಚಾನೆಲ್ manipulation ನಿಂದ ಇನ್ನಷ್ಟು ಜನ ನೋಡಿದ್ರ?

2. ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದ ಕಾಮೆಂಟ್​ಗಳು ಜನರೇ volunteer ಆಗಿ ಬರೆದಿದ್ದ ಅಥವಾ youtube ನವರಿಗೆ ಇಂತಿಷ್ಟು ಅಂತ ದುಡ್ಡು ಕೊಟ್ಟರೆ ಅವರೇ ಕಾಮೆಂಟ್ಸ್ ಬರೆಯುತ್ತಾರ?

3. ಲೋ ಬಜೆಟ್ ಚಿತ್ರಗಳನ್ನ ತುಂಬ ಅಳೆದು, ತೂಕ ಹಾಕಿ ವಿಮರ್ಶೆ ಮಾಡುವ ಭಾರದ್ವಜ್ ರಂಗನ್, ಅನುಪಮ ಚೋಪ್ರ, ತರಣ್ ಆದರ್ಶ ನಂತಹ ಫಿಲಂ ಕ್ರಿಟಿಕ್ಸ್ ಕೆಜಿಎಫ್ ಚಿತ್ರದ ವಸ್ತುನಿಷ್ಠ ವಿಮರ್ಶೆ ಮಾಡಿದ್ದಾರೆಯೇ? ಮಾಡದಿರುವುದಕ್ಕೆ ಅವರಿಗೆ ಸಿಕ್ಕ ಹಣವೇಷ್ಟು? ಅದು ಹೋಗ್ಲಿ ಭಾರದ್ವಾಜ್ ರಂಗನ್ ಮಾಡಿದ ನಟೇಶ್ ಹೆಗಡೆಯವರ “ಪೆದ್ರೋ” ಚಿತ್ರದ ವಿಮರ್ಶೆಯನ್ನ ನಾವೆಷ್ಟು ಜನ ನೋಡಿದ್ದೇವೆ? ಹಲವಾರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾರಿ ಸುದ್ದು ಮಾಡಿದ, ಎಲ್ಲರ ಪ್ರಶಂಸೆಗೆ ಪಾತ್ರವಾದ “ಪೆದ್ರೋ”ದಂತಹ ಚಿತ್ರಗಳಿಗೆ ಕೆಜಿಎಫ್ 2ಗೆ ಸಿಗುವ ಉತ್ತೇಜನ, ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಸಿಗುವುದಿಲ್ಲವೇಕೆ?

TV9 Kannada


Leave a Reply

Your email address will not be published.