Khushbu: ಬೆಂಗಳೂರಿಗೆ ಆಗಮಿಸಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದ ಖುಷ್ಬೂ | Actress And Politician Khushbu Visits Ashwini Puneeth Rajkumar House At Bengaluru


Khushbu: ಬೆಂಗಳೂರಿಗೆ ಆಗಮಿಸಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದ ಖುಷ್ಬೂ

ಖುಷ್ಬೂ

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅವರು ಹೆಚ್ಚಾಗಿ ಸಕ್ರಿಯರಾಗಿಲ್ಲ. ಆದಾಗ್ಯೂ ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ಇಲ್ಲಿನ ಕಲಾವಿದರ ಬಗ್ಗೆ ಇರುವ ಗೌರವ ಅವರಿಗೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಾಕಷ್ಟು ಕಡೆಗಳಲ್ಲಿ ಅವರು ಸ್ಯಾಂಡಲ್​ವುಡ್​ ಹಾಗೂ ಸ್ಯಾಂಡಲ್​ವುಡ್​ ಕಲಾವಿದರ ಬಗ್ಗೆ ಮಾತನಾಡಿದ್ದಿದೆ. ಇಂದು (ನವೆಂಬರ್​ 9) ಖುಷ್ಬೂ ಬೆಂಗಳೂರಿನಲ್ಲಿರುವ ಪುನೀತ್​ ರಾಜ್​ಕುಮಾರ್​ ಮನೆಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಶಿವರಾಜ್​ಕುಮಾರ್​ ಕೂಡ ಇದ್ದರು.

ಖುಷ್ಬೂ ಅವರು ಸಂಜೆ ವೇಳೆಗೆ ಪುನೀತ್​ ನಿವಾಸಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ಅವರು ಸದಾಶಿವ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಅಶ್ವಿನಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಅವರು. ಇದರ ಜತೆಗೆ ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೊದಲು ಸಾಕಷ್ಟು ಪರಭಾಷೆಯ ನಟರು ಶಿವಣ್ಣ, ಪುನೀತ್​ ಮನೆಗೆ ಬಂದು  ಸಾಂತ್ವನ ಹೇಳುವ ಕೆಲಸ ಮಾಡಿದ್ದರು.

ಫಿಟ್​ನೆಸ್​ಗೆ ಖುಷ್ಬೂ ಪ್ರಾಮುಖ್ಯತೆ

ರಣಧೀರ, ಅಂಜದ ಗಂಡು, ಯುಗಪುರುಷ, ಶಾಂತಿ ಕ್ರಾಂತಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈಗ ಅವರು ಈ ಮೊದಲಿನ ಹಾಗೂ ಈಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬರೋಬ್ಬರಿ 15 ಕೆಜಿ ದೇಹತೂಕ ಇಳಿಸಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಅವರಿಗೆ ಮದುವೆ ಪ್ರಪೋಸಲ್​ ಬಂದಿತ್ತು. ‘ಪರಿಶ್ರಮಕ್ಕೆ ಫಲ ಸಿಕ್ಕಾಗ, ಖುಷಿಯನ್ನು ವಿವರಿಸಲು ಆಗದು’ ಎಂಬ ಕ್ಯಾಪ್ಷನ್​ನೊಂದಿಗೆ ಖುಷ್ಬೂ ಫೋಟೋಗಳನ್ನು ಈ ಮೊದಲು ಹಂಚಿಕೊಂಡಿದ್ದರು. ಅದಕ್ಕೆ ಕಮೆಂಟ್​ ಮಾಡಿದ ಯುವಕನೊಬ್ಬ, ‘ನಾನು ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ ಮೇಡಂ’ ಎಂದು ನೇರವಾಗಿ ಮದುವೆ ಪ್ರಪೋಸ್​ ಮಾಡಿದ್ದ. ಅದಕ್ಕೆ ಉತ್ತರಿಸಿದ್ದ ಖುಷ್ಬೂ, ‘ಓಹ್​ ಕ್ಷಮಿಸಿ, ನೀವು ತಡವಾಗಿ ಕೇಳುತ್ತಿದ್ದೀರಿ. ಆದರೂ ಒಮ್ಮೆ ನನ್ನ ಗಂಡನನ್ನು ವಿಚಾರಿಸಿ ಹೇಳುತ್ತೇನೆ’ ಎಂದು ಕಮೆಂಟ್​ ಮಾಡಿದ್ದರು.

ಬಾಲನಟಿ ಆಗಿಯೇ ಖುಷ್ಬೂ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗಲೂ ಅವರು ಬಣ್ಣದ ಲೋಕದ ನಂಟು ತೊರೆದಿಲ್ಲ. ಅತಿಥಿ ಪಾತ್ರಗಳ ಮೂಲಕ ಅಪರೂಪಕ್ಕೆ ನಟಿಸುತ್ತಿದ್ದಾರೆ. ರಜನಿಕಾಂತ್​ ನಟನೆಯ ‘ಅಣ್ಣಾತೆ’ ಸಿನಿಮಾದಲ್ಲಿ ಅವರಿಗೊಂದು ಪಾತ್ರವಿದೆ. ಆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು ಪುನೀತ್​

ದೊಡ್ಮನೆಯಿಂದ ಅನ್ನಸಂತರ್ಪಣೆ; ಪುನೀತ್​ ಹೆಸರಲ್ಲಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ

TV9 Kannada


Leave a Reply

Your email address will not be published. Required fields are marked *