Kia EV6: ಇವಿ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಿಯಾ ಇವಿ6 – Kia EV6 Electric Crossover Delivered 200 units In India check about mileage, specifications and more details


ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಕಿಯಾ ಇಂಡಿಯಾ ಕಂಪನಿಯು ಹೊಸ ದಾಖಲೆ ನಿರ್ಮಿಸಿದೆ. ದುಬಾರಿ ಬೆಲೆ ನಡುವೆಯೂ ಇವಿ6 ಕಾರು ಮಾರಾಟದಲ್ಲಿ ಪ್ರತಿಸ್ಪರ್ಧಿ ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

Kia EV6: ಇವಿ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಿಯಾ ಇವಿ6

ಇವಿ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಿಯಾ ಇವಿ6

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ(Electric Car) ಬೇಡಿಕೆ ಹೆಚ್ಚುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಕಂಪನಿಗಳು ಭರ್ಜರಿ ಮೈಲೇಜ್ ಪ್ರೇರಿತ ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಕಿಯಾ ಇಂಡಿಯಾ(Kia India) ಕಂಪನಿಯು ಕೂಡಾ ತನ್ನ ಹೊಸ ಇವಿ6(EV6) ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಹೊಸ ಇವಿ6 ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಪ್ರಮುಖ ಐಷಾರಾಮಿ ಇವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ಮೂಲಕ ಹೊಸ ಸಂಚಲನ ಮೂಡಿಸಿದೆ.

ಕಿಯಾ ಹೊಸ ಇವಿ6 ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಕೇವಲ 5 ತಿಂಗಳಿನಲ್ಲಿ ಸುಮಾರು 200 ಯುನಿಟ್ ಮಾರಾಟಗೊಂಡಿದೆ. ಹೊಸ ಕಾರು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಐಷಾರಾಮಿ ಕಾರುಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ. ಭಾರತದಲ್ಲಿ ಸದ್ಯ ಹೊಸ ಕಾರಿಗೆ ಸುಮಾರು 355 ಗ್ರಾಹಕರು ಮುಂಗಡ ಹಣ ಪಾವತಿಸಿ ಬುಕಿಂಗ್ ದಾಖಲಿಸಿದ್ದು, ಇದರಲ್ಲಿ ಇದುವರೆಗೆ 200 ಯುನಿಟ್ ವಿತರಣೆ ಮಾಡಲಾಗಿದೆ.

TV9 Kannada


Leave a Reply

Your email address will not be published.