Kichcha Sudeep Gave Details about Karnataka Chalanachitra Cup 3rd season schedule details | ‘ಚಿತ್ರರಂಗ ನನ್ನ ಸ್ವತ್ತಲ್ಲ, ಎಲ್ಲರಿಗೂ ಆಹ್ವಾನ ಕೊಡ್ತೀವಿ’; ಕೆಸಿಸಿ 3ನೇ ಆವೃತ್ತಿ ಬಗ್ಗೆ ಸುದೀಪ್ ಮಾತು


KCC 3rd Season: ಈಗ ಕೆಸಿಸಿಯ ಮೂರನೇ ಸೀಸನ್​ಗೆ ಚಾಲನೆ ನೀಡಲಾಗುತ್ತಿದೆ. ಈ ವರ್ಷ ನಡೆಯಲಿರುವ ಕೆಸಿಸಿ 3ನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸುದೀಪ್ ಅವರು ಮಾಹಿತಿ ನೀಡಿದ್ದಾರೆ.

ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡು ಚಿತ್ರರಂಗದವರು ಎಲ್ಲರೂ ಒಂದೆಡೆ ಸೇರಿ ಕ್ರಿಕೆಟ್ ಆಡೋಕೆ ಅವಕಾಶ ಸಿಕ್ಕಿದ್ದು ‘ಕರ್ನಾಟಕ ಚಲನಚಿತ್ರ ಕಪ್’ನಿಂದ (KCC). ಈಗಾಗಲೇ ಎರಡೂ ಸೀಸನ್ ಯಶಸ್ವಿ ಆಗಿದ್ದು, ಈಗ ಮೂರನೇ ಸೀಸನ್​ಗೆ ಚಾಲನೆ ನೀಡಲಾಗುತ್ತಿದೆ. ಈ ವರ್ಷ ನಡೆಯಲಿರುವ ಕೆಸಿಸಿ 3ನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸುದೀಪ್ (Sudeep) ಅವರು ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಆಹ್ವಾನ ಕೊಡ್ತೀವಿ

ಕಳೆದ ಎರಡು ಸೀಸನ್​ಗಳಲ್ಲಿ ಅನೇಕರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ.‘ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ’ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಸುದೀಪ್ ಈ ವರ್ಷ ಆರಂಭದಲ್ಲೇ ಉತ್ತರ ನೀಡಿದ್ದಾರೆ. ‘ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ’ ಎಂದಿದ್ದಾರೆ ಸುದೀಪ್.

ತಾಜಾ ಸುದ್ದಿ

ಯಾರಿಗೆಲ್ಲ ಅವಕಾಶ?

ಕಳೆದ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯಮಟ್ಟದಲ್ಲಿ ಆಡಿದ ಕ್ರಿಕೆಟ್ ಆಟಗಾರರು ಇರಲಿದ್ದಾರೆ. ಈ ಬಗ್ಗೆ ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ‘ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ. ಸಿನಿಮಾ ರಂಗದವರು ಇರುತ್ತಾರೆ. ಬೇರೆ ಚಿತ್ರರಂಗದವರೂ ಆಡೋಕೆ ಬರಬಹುದು. ರಾಜಕೀಯ ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು’ ಎಂದು ಸುದೀಪ್ ಹೇಳಿದ್ದಾರೆ.

ಕ್ಯಾಪ್ಟನ್ ಆಯ್ಕೆ ಹೇಗೆ?

‘ಎಲ್ಲ ತಂಡ ರಚನೆ ಆದ ನಂತರದಲ್ಲಿ ಕ್ಯಾಪ್ಟನ್ ಆಯ್ಕೆ ಆಗುತ್ತದೆ. ಅವರವರ ತಂಡದ ಕ್ಯಾಪ್ಟನ್​ನ ಅವರೇ ಆಯ್ಕೆ ಮಾಡಿಕೊಳ್ಳಬೇಕು. ಒಮ್ಮತದಿಂದ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಒತ್ತಾಯ ಪೂರ್ವಕವಾಗಿ ಯಾರೂ ಇಲ್ಲಿ ನಾಯಕ ಆಗೋಕೆ ಆಗಲ್ಲ’ ಎಂದಿದ್ದಾರೆ ಸುದೀಪ್.

ಅದ್ದೂರಿ ಚಾಲನೆ

‘ಕೆಸಿಸಿ 3ನೇ ಸೀಸನ್​​’ಗೆ ಅದ್ದೂರಿ ಚಾಲನೆ ನೀಡಲು ಸುದೀಪ್ ನಿರ್ಧರಿಸಿದ್ದಾರೆ. ಸಾಕಷ್ಟು ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲು ಅವರು ಪ್ಲ್ಯಾನ್ ಮಾಡಿದ್ದಾರೆ. ಅನೇಕ ಗಾಯಕರು​ ಇದರಲ್ಲಿ ಭಾಗಿ ಆಗಲಿದ್ದಾರೆ.

ಕೆಸಿಸಿ ಲೈವ್​ ಇರುತ್ತೆ

‘ಕೆಸಿಸಿ ಟಿವಿಯಲ್ಲಿ ಲೈವ್ ಇರುತ್ತದೆ. ವೃತ್ತಿಪರ ಕ್ಯಾಮೆರಾಮೆನ್​​ಗಳು ಬರುತ್ತವೆ. ಎರಡು ದಿನ ಮ್ಯಾಚ್ ಇರುತ್ತದೆ. ಫೆಬ್ರವರಿ 11 ಹಾಗೂ 12ರಂದು ಮ್ಯಾಚ್​​ಗಳು ಮೈಸೂರಿನಲ್ಲಿ ನಡೆಯಲಿದೆ’ ಎಂದು ಸುದೀಪ್ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *