ಬೆಳ್ಳುಳ್ಳಿಯನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ಬೆಳ್ಳುಳ್ಳಿಯ ಎಸಳನ್ನು, ಅದರ ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆದರೆ, ಅದಕ್ಕೆ ನೀರು ಸೇರಿಸಬೇಡಿ.

ಬೆಳ್ಳುಳ್ಳಿ
ಬೆಳ್ಳುಳ್ಳಿ ನೈಸರ್ಗಿಕ ಉತ್ಪನ್ನವಾಗಿದ್ದು, ಇದು ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಊಟದ ಸುವಾಸನೆಯನ್ನು ಹೆಚ್ಚಿಸುವ ಬೆಳ್ಳುಳ್ಳಿಯನ್ನು (Garlic) ವಿವಿಧ ರೀತಿಯ ಉಪ್ಪಿನಕಾಯಿ, ಅಡುಗೆಯಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ವಿಟಮಿನ್ ಸಿ, ಕೆ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್ನ ಉತ್ತಮ ಮೂಲವಾಗಿದೆ. ಬೆಳ್ಳುಳ್ಳಿ ಬೇಗ ಒಣಗಿ, ಕೊಳೆತು ಹಾಳಾಗುವುದನ್ನು ತಡೆಯಲು ಕೆಲವು ಉಪಾಯಗಳು ಇಲ್ಲಿವೆ.
ಬೆಳ್ಳುಳ್ಳಿಯನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ಬೆಳ್ಳುಳ್ಳಿಯ ಎಸಳನ್ನು, ಅದರ ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆದರೆ, ಅದಕ್ಕೆ ನೀರು ಸೇರಿಸಬೇಡಿ. ಆ ಪೇಸ್ಟ್ ಅನ್ನು ಫ್ರಿಡ್ಜ್ನಲ್ಲಿಡಿ. ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡುವಾಗ ನೀವು ತಾಜಾ ಗಿಡಮೂಲಿಕೆಗಳನ್ನು ಸಹ ಬಳಸಬಹುದು.
ತಾಜಾ ಸುದ್ದಿ