ಕೇವಲ ಒಂದು ಕಿವಿ ಹಣ್ಣು ಸೇವನೆಯಿಂದ ಪ್ರತಿದಿನ 117 ಪ್ರತಿಶತ ವಿಟಮಿನ್ ಸಿ ಮತ್ತು 21 ಪ್ರತಿಶತ ಆಹಾರದ ಫೈಬರ್ನ್ನು ಒದಗಿಸುತ್ತದೆ. ಅದೂ ಅಲ್ಲದೆ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ರೀತಿಯ ಪೋಷಕಾಂಶಗಳು ದೊರೆಯುತ್ತವೆ.

ಕಿವಿ ಹಣ್ಣು (ಸಂಗ್ರಹ ಚಿತ್ರ)
ಬಿಡುವಿಲ್ಲದ ಜೀವನದಲ್ಲಿ ಮಧುಮೇಹವು ಸಾಮಾನ್ಯ ಕಾಯಿಲೆಯಾಗಿದೆ. ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ದೇಹದ ಪ್ರತಿಯೊಂದು ಅಂಗವನ್ನೂ ನಾಶಪಡಿಸಬಹುದು. ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸುವುದರೊಂದಿಗೆ, ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಆದರೆ ಕಿವಿ ಹಣ್ಣು (Kiwi Fruit) ಮಧುಮೇಹಿಗಳಿಗೆ ಉತ್ತಮ ಎಂದು ಹೇಳಲಾಗುತ್ತಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಈ ಹಣ್ಣಿನಲ್ಲಿ ಕಿತ್ತಳೆ ಮತ್ತು ನಿಂಬೆಹಣ್ಣುಗಳಿಗಿಂತ ಎರಡು ಪಟ್ಟು ಹೆಚ್ಚು ವಿಟಮಿನ್ ಸಿ ಇದೆ. ಕೇವಲ ಒಂದು ಕಿವಿ ಹಣ್ಣು ಸೇವನೆಯಿಂದ ಪ್ರತಿದಿನ 117 ಪ್ರತಿಶತ ವಿಟಮಿನ್ ಸಿ ಮತ್ತು 21 ಪ್ರತಿಶತ ಆಹಾರದ ಫೈಬರ್ನ್ನು ಒದಗಿಸುತ್ತದೆ. ಅದೂ ಅಲ್ಲದೆ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ರೀತಿಯ ಪೋಷಕಾಂಶಗಳು ದೊರೆಯುತ್ತವೆ.