KKR​ಗೆ ಗೆಲುವು ತಂದುಕೊಟ್ಟ ತ್ರಿಪಾಠಿ.. ಕೊನೆಯ ಓವರ್​ನ ರೋಚಕ ಕ್ಷಣ ಹೇಗಿತ್ತು..?

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್​​ ತಂಡಕ್ಕೆ ಶಿಖರ್​​ ಧವನ್​, ಪೃಥ್ವಿ ಶಾ ಜೋಡಿ ಉತ್ತಮ ಆರಂಭ ನೀಡೋ ಸೂಚನೆ ನೀಡಿದ್ರು. ಏಕೆಂದ್ರೆ ಶಕಿಬ್​ ಆಲ್​ ಹಸನ್​ ಮೇಲೆ ಪೃಥ್ವಿ ಶಾ ಮಾಡಿದ ಸವಾರಿ ಮತ್ತು ಸುನಿಲ್​ ನರೇನ್​ ಬೌಲಿಂಗ್​ನಲ್ಲಿ ಶಿಖರ್​ ಧವನ್​ ಅಬ್ಬರಿಸಿದ ರೀತಿ ಹಾಗಿತ್ತು. ಆದ್ರೆ, ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಪೃಥ್ವಿ ಅಬ್ಬರಕ್ಕೆ ಬ್ರೇಕ್​ ಹಾಕಿದ ವರುಣ್​ ಚಕ್ರವರ್ತಿ, ಡೆಲ್ಲಿಯ ರನ್​ ವೇಗವನ್ನೂ ಕಡಿಮೆ ಮಾಡಿದ್ರು. ಪರಿಣಾಮ 10 ಓವರ್​ಗಳ ಅಂತ್ಯಕ್ಕೆ 1 ವಿಕೆಟ್​ ಕಳೆದುಕೊಂಡ ಪಂತ್​ ಪಡೆ ಕಲೆ ಹಾಕಿದ್ದು ಕೇವಲ 65 ರನ್​ ಮಾತ್ರ.

Image

ನಂತರದಲ್ಲೂ ಕೆಕೆಆರ್​ ಬೌಲರ್​ಗಳು ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ್ರು. ಕಮ್​ಬ್ಯಾಕ್​ ಮಾಡಿದ ಪಂದ್ಯದಲ್ಲಿ ನಿಧಾನಗತಿಯ ಆರಂಭ ಪಡೆದುಕೊಂಡ ಮಾರ್ಕಸ್​ ಸ್ಟೋಯಿನಿಸ್​​ ಬಿಗ್​ ಸ್ಕೋರ್​​ ಕಲೆ ಹಾಕುವಲ್ಲಿ ವಿಫಲರಾದ್ರು. 18 ರನ್​ಗಳಿಸಿ ಸ್ಟೋಯಿನಿಸ್​ ಔಟಾದ್ರೆ, 36 ರನ್​ಗಳಿಗೆ ಧವನ್​ ಇನ್ನಿಂಗ್ಸ್​ ಅಂತ್ಯ ಕಾಣ್ತು. ನಾಯಕ ಪಂತ್​​ ಬ್ಯಾಟ್​​ ಸದ್ದೇ ಮಾಡಲಿಲ್ಲ. ಒಂದು ಜೀವದಾನ ಪಡೆದುಕೊಂಡು 2 ಸಿಕ್ಸರ್​ ಸಿಡಿಸಿದ ಶಿಮ್ರಾನ್​ ಹೆಟ್ಮೆಯರ್​​, ರನ್​ ಕದಿಯೋ ಭರದಲ್ಲಿ ವಿಕೆಟ್​ ಒಪ್ಪಿಸಿದ್ರೆ, ಕೊನೆಯ ಎಸೆತದವರೆಗೂ ಹೋರಾಡಿದ ಶ್ರೇಯಸ್​​ ಅಯ್ಯರ್​​ 30 ರನ್​ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 20 ಓವರ್​ಗಳ ಅಂತ್ಯಕ್ಕೆ ಡೆಲ್ಲಿ 5 ವಿಕೆಟ್​​ ಕಳೆದುಕೊಂಡು 135 ರನ್​ಗಳಿಸಿತಷ್ಟೇ.

ಇದನ್ನೂ ಓದಿ: KKR​ಗೆ ಗೆಲುವು ತಂದುಕೊಟ್ಟ ತ್ರಿಪಾಠಿ.. ಕೊನೆಯ ಓವರ್​ನ ರೋಚಕ ಕ್ಷಣ ಹೇಗಿತ್ತು..?

Image

ಡೆಲ್ಲಿ ನೀಡಿದ 135 ರನ್​ಗಳ ಗುರಿ ಬೆನ್ನತ್ತಿದ ಕೆಕೆಆರ್​​ ಪಾಳೆಯ ಸಾಲಿಡ್​​ ಓಪನಿಂಗ್​ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​, ಶುಭ್​ಮನ್​ ಗಿಲ್ ಬಲಿಷ್ಠ ಡೆಲ್ಲಿ ಬೌಲಿಂಗ್​ ಯುನಿಟ್​​ ಅನ್ನ ಸಮರ್ಥವಾಗಿ ಎದುರಿಸಿದ್ರು. ರಬಾಡ, ನೋಕಿಯಾ, ಅಶ್ವಿನ್​ ರಂಥ ಅನುಭವಿ ಬೌಲರ್​ಗಳ ಎದುರು ಲೀಲಾಜಾಲವಾಗಿ ಬ್ಯಾಟ್​ ಬೀಸಿದ ಈ ಯುವ ಜೋಡಿ ಮೊದಲ ವಿಕೆಟ್​​ಗೆ 96 ರನ್​ ಕಲೆ ಹಾಕಿತು. ಆದ್ರೆ, ವೆಂಕಟೇಶ್​ ಅಯ್ಯರ್​, ಶುಭ್​​ಮನ್​ ಗಿಲ್​ ಪತನದ ಬಳಿಕ ಇಡೀ ಪಂದ್ಯಕ್ಕೆ ಟ್ವಿಸ್ಟ್​ ಸಿಗ್ತು.

ರೋಚಕ ಘಟ್ಟ ತಲುಪಿದ ಪಂದ್ಯ ವೆಂಕಟೇಶ್​​ ಅಯ್ಯರ್​ 55 ರನ್​ ಗಳಿಸಿ ನಿರ್ಗಮಿಸಿದ್ರೆ, ಗಿಲ್​ ಆಟ 46 ರನ್​ಗಳಿಗೆ ಅಂತ್ಯವಾಯ್ತು. ನಿತೀಶ್​​ ರಾಣಾ 13 ರನ್​ ಕಲೆ ಹಾಕಿದ್ದು ಬಿಟ್ರೆ, ಬಳಿಕ ಕಣಕ್ಕಿಳಿದ ಕಾರ್ತಿಕ್​, ಮಾರ್ಗನ್​, ಶಕೀಬ್​ ಹಾಗೂ ನರೇನ್​ ಡಕೌಟ್​​ ಆದ್ರು. ಪರಿಣಾಮ ಪಂದ್ಯ ರೋಚಕ ಘಟ್ಟ ತಲುಪಿತ್ತು. ಅಂತಿಮವಾಗಿ 20ನೇ ಓವರ್​ನ 5ನೇ ಎಸೆತವನ್ನ ಸಿಕ್ಸರ್​ ಗಟ್ಟಿದ ರಾಹುಲ್​ ತ್ರಿಪಾಠಿ ಕೆಕೆಆರ್​ಗೆ ಗೆಲುವಿನ ಗಿಫ್ಟ್​ ನೀಡಿದ್ರು. ಆ ಮೂಲಕ 3ನೇ ಬಾರಿಗೆ ಐಪಿಎಲ್​ ಫೈನಲ್​​ಗೇರಿತು.

News First Live Kannada

Leave a comment

Your email address will not be published. Required fields are marked *