ಕಂಪ್ಲೀಟ್ ಫ್ರೀಡಂ ಕೊಟ್ರೂ ಕೆ.ಎಲ್ ರಾಹುಲ್ ಟೀಮ್ನಿಂದ ಹೊರಗೆ ಹೋದರು ಎಂದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬೇಸರ ವ್ಯಕ್ತಪಡಿಸಿದೆ. ಈ ಸಂಬಂಧ ಮಾಹಿತಿ ನೀಡಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ನಾವು ರಿಟೈನ್ ಮುನ್ನ ಕೆ.ಎಲ್ ರಾಹುಲ್ ಅವರನ್ನು ಸಂಪರ್ಕ ಮಾಡಿದ್ದೆವು. ಆದರೆ, ತಂಡದಲ್ಲಿ ಉಳಿಯುವ ಮನಸ್ಸು ಮಾಡಲಿಲ್ಲ ಎಂದಿದೆ.
ನಾವು ರಾಹುಲ್ರನ್ನು ರಿಟೈನ್ ಮಾಡಿಕೊಳ್ಳುವುದಕ್ಕೆ ಬಯಸಿದ್ದೆವು. ಆದರೆ ಅವರು ಹರಾಜಿಗೆ ಹೋಗುವುದಕ್ಕೆ ಬಯಸಿದರು. ಒಂದು ವೇಳೆ ಇದೆಲ್ಲಾ ಮುಗಿಯುವ ಮುನ್ನವೇ ಅವರನ್ನು ಬೇರೆ ಫ್ರಾಂಚೈಸಿ ಸಂಪರ್ಕಿಸಿದ್ದರೆ, ಅದು ಅನೈತಿಕ ಎಂದು ಪಂಜಾಬ್ ಕಿಂಗ್ಸ್ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.