KL Rahul: ಅನುಮಾನ ಹುಟ್ಟುಹಾಕಿದ ಕೆಎಲ್ ರಾಹುಲ್ ಟ್ವೀಟ್: ಪಂಜಾಬ್ ಬಿಟ್ಟು ಆರ್​ಸಿಬಿ ಸೇರುವುದು ಖಚಿತ? | KL Rahul Tweet hints at he joins RCB Royal Challengers Bangalore after Pubjab Kings crash out of IPL 2021

KL Rahul: ಅನುಮಾನ ಹುಟ್ಟುಹಾಕಿದ ಕೆಎಲ್ ರಾಹುಲ್ ಟ್ವೀಟ್: ಪಂಜಾಬ್ ಬಿಟ್ಟು ಆರ್​ಸಿಬಿ ಸೇರುವುದು ಖಚಿತ?

KL Rahul IPL 2021

ಐಪಿಎಲ್ 2021 (IPL 2021) ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮುಂದಿನ 15ನೇ ಆವೃತ್ತಿಯ ಐಪಿಎಲ್​ಗೂ (IPL 2022) ಮುನ್ನ ಬಹುದೊಡ್ಡ ಹರಾಜು ಪ್ರಕ್ರಿಯೆ ಮೆಗಾ ಆಕ್ಷನ್ (IPl Mega Auction) ನಡೆಯಲಿದೆ. ಈಗಿರುವ ಎಂಟು ತಂಡಗಳ ಜೊತೆ ಮತ್ತೆರಡು ಹೊಸ ಟೀಮ್ ಸೇರ್ಪಡೆಯಾಗಲಿದ್ದು,ಈಗ ತಂಡದಲ್ಲಿರುವ ಆಟಗಾರರು ಸಂಪೂರ್ಣ ಬದಲಾಗಲಿದ್ದಾರೆ. ಈ ಬಾರಿ ಕಪ್ ಗೆಲ್ಲುವ ಪಣತೊಟ್ಟು ಪ್ಲೇ ಆಫ್ (Playoffs) ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲೂ ಮುಂದಿನ ಸೀಸನ್​ಗೆ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ. ಇದರ ಒಂದು ಭಾಗ ಈಗಾಗಲೇ ಬಹಿರಂಗವಾಗಿದ್ದು, ವಿರಾಟ್ ಕೊಹ್ಲಿ (Virat Kohli) ಐಪಿಎಲ್ 2022 ರಲ್ಲಿ ಆರ್​ಸಿಬಿ ನಾಯಕನ (RCB Captain) ಸ್ಥಾನದಲ್ಲಿ ಇರುವುದಿಲ್ಲ. ಈ ಬಗ್ಗೆ ಕೊಹ್ಲಿಯೇ ತಿಳಿಸಿದ್ದರು. ಹೀಗಾಗಿ ಆರ್​ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಅನೇಕ ಹೆಸರುಗಳು ಕೇಳಿಬಂದಿದ್ದರೂ, ಕನ್ನಡಿಗನೇ ನಾಯಕ ಆಗಬೇಕು, ಅದು ಕೆ. ಎಲ್ ರಾಹುಲ್ (KL Rahul) ಆದರೆ ಒಳ್ಳೆಯದು ಎಂಬುದು ಅಭಿಮಾನಿಗಳ ಆಸೆ. ಇದಕ್ಕೆ ಪುಷ್ಠಿ ನೀಡುವಂತಹ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

ಹೌದು, ಕೆ. ಎಲ್ ರಾಹುಲ್ ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದರು. ಆದರೆ, ರಾಹುಲ್ ಏಕಾಂಗಿ ಹೋರಾಟದ ಹೊರತಾಗಿಯೂ ಪಂಜಾಬ್ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. 14 ಪಂದ್ಯಗಳಲ್ಲಿ ಎಂಟರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಾಗಿದೆ. ಇದರ ಬೆನ್ನಲ್ಲೇ ರಾಹುಲ್ ತಮ್ಮ ಟ್ವಿಟ್ಟರ್​ನಲ್ಲಿ ಮಾಡಿರುವ ಒಂದು ಟ್ವೀಟ್ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

“ಇಲ್ಲಿ ಕಲಿಯಲು ಸಾಕಷ್ಟಿದೆ. ಮತ್ತು ನಮ್ಮ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಒಟ್ಟಾಗಿ ಒಂದು ತಂಡವಾಗಿ ನಾವು ಹೋರಾಡಿದೆವು, ನಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿದ್ದೇವೆ. ತಂಡವನ್ನು ಮುನ್ನಡೆಸಿದ್ದು ನನಗೆ ಗೌರವವಿದೆ. ಇದುವರೆಗೆ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ” ಎಂದು ರಾಹುಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯನ್ನ ಮೆನ್ಶನ್ ಮಾಡಿ ಟ್ವೀಟ್ ಮಾಡಿದ್ದಾರೆ.

 

ಪಂಜಾಬ್ ಕಿಂಗ್ಸ್ ಐಪಿಎಲ್ 2021 ರಿಂದ ಹೊರಬಿದ್ದ ಬೆನ್ನಲ್ಲೇ ರಾಹುಲ್ ತಮ್ಮ ಟ್ವಿಟ್ಟರ್​ನಲ್ಲಿ ಈರೀತಿ ಬರೆದುಕೊಂಡಿರುವುದು  ಸದ್ಯ ಚರ್ಚೆಗೆ ಗ್ರಾಸವಾಗಿದೆ. ಇದನ್ನ ಗಮನಿಸಿದ ಅನೇಕರು, ರಾಹುಲ್ ಪಂಜಾಬ್ ಪರ ಇನ್ನುಂದೆ ಕಣಕ್ಕಿಳಿಯುವುದಿಲ್ಲ. ಮೆಗಾ ಆಕ್ಷನ್​ಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ರಾಹುಲ್ ಪಂಜಾಬ್ ತಂಡವನ್ನು ತೊರೆಯಲಿದ್ದಾರೆ. ಹರಾಜಿನಲ್ಲಿ ಆರ್​ಸಿಬಿ ಇವರನ್ನು ಖರೀದಿಸಿ ನಾಯಕನ ಸ್ಥಾನ ನೀಡಲಿದೆ ಎಂದು ಹೇಳುತ್ತಿದ್ದಾರೆ.

ರಾಹುಲ್ ಈ ಹಿಂದ ಆರ್​ಸಿಬಿ ಪರ ಕಣಕ್ಕಿಳಿದಿದ್ದರು. ಇಂಜುರಿ ಸಮಸ್ಯೆಯಿಂದಾಗಿ 2017ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣ ಹೊರಬಿದ್ದ ಬಳಿಕ ಇವರನ್ನು 2018ರ ಐಪಿಎಲ್ ವೇಳೆಗೆ ಆರ್​ಸಿಬಿ ಅಚ್ಚರಿ ಎಂಬಂತೆ ತಂಡದಿಂದ ಕೈಬಿಟ್ಟಿತ್ತು. ಈ ಸಂದರ್ಭ ಹರಾಜಿನಲ್ಲಿ ಪಂಜಾಬ್ ಇವರನ್ನು 11 ಕೋಟಿಕೊಟ್ಟು ಖರೀದಿ ಮಾಡಿತ್ತು. 2020 ರಲ್ಲಿ ಪಂಜಾಬ್ ರಾಹುಲ್​ರನ್ನು ನಾಯಕನಾಗಿ ಆಯ್ಕೆ ಮಾಡಿತ್ತು.

ಒಟ್ಟಾರೆ ಐಪಿಎಲ್ 2021 ಮುಗಿಯುವ ಹೊತ್ತಿಗೆ ರಾಯಲ್ ಚಾಲೆಂಜರ್ಸ್​ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಜೋರಾಗಿ ಎದ್ದಿದೆ. ಹಾಗೊಂದುವೇಳೆ ಪಂಜಾಬ್ ಕಿಂಗ್ಸ್ ರಾಹುಲ್​ರನ್ನು ತಂಡದಿಂದ ರಿಲೀಸ್ ಮಾಡಿ ಮೆಗಾ ಆಕ್ಷನ್​ಗೆ ಲಭ್ಯರಾದರೆ, ಆರ್​ಸಿಬಿ ಇವರನ್ನು ದೊಡ್ಡ ಮೊತ್ತಕ್ಕೆ ಖರೀದಿಸುವುದರಲ್ಲಿ ಅನುಮಾನವಿಲ್ಲ. ತಂಡಕ್ಕೆ ಸೇರಿಸಿಕೊಂಡ ಬಳಿಕ ನಾಯಕನ ಜವಾಬ್ದಾರಿ ನೀಡುವುದಂತು ಖಚಿತ.

IPL 2021 Qualifier 1: ದಾಖಲೆಯ 23ನೇ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾದ ಸಿಎಸ್​ಕೆ: ಪ್ಲೇಯಿಂಗ್ XI ನಲ್ಲಿ ಪ್ರಮುಖ ಬದಲಾವಣೆ?

Shikha Pandey: ಸ್ಪಿನ್ನರ್​ಗಳಿಗೂ ಕಷ್ಟ: ವೇಗಿ ಶಿಖಾ ಪಾಂಡೆ ಎಸೆದ ಬಾಲ್ ಟರ್ನ್ ಆದ ಪರಿ ನೋಡಿ: ಕ್ಲೀನ್ ಬೌಲ್ಡ್

(KL Rahul Tweet hints at he joins RCB Royal Challengers Bangalore after Pubjab Kings crash out of IPL 2021)

TV9 Kannada

Leave a comment

Your email address will not be published. Required fields are marked *