KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್ | KL Rahul becomes first batter to cross 500 run mark for fifth straight IPL season

IPL 2022: ಶಿಖರ್ ಧವನ್ 2012, 2016, 2019, 2020 ಮತ್ತು 2021 ರಲ್ಲಿ ಐಪಿಎಲ್‌ನಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಶಿಖರ್ 421 ರನ್ ಕಲೆಹಾಕಿದ್ದಾರೆ.

May 19, 2022 | 3:29 PM

TV9kannada Web Team

| Edited By: Zahir PY

May 19, 2022 | 3:29 PM
ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಐಪಿಎಲ್ ನ 66ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಜೇಯ 68 ರನ್ ಗಳಿಸಿ ಮಿಂಚಿದ್ದರು. ವಿಶೇಷ ಎಂದರೆ ಈ 68 ರನ್​ಗಳೊಂದಿಗೆ ಕೆಎಲ್ ರಾಹುಲ್ ಪ್ರಸಕ್ತ ಐಪಿಎಲ್ ಸೀಸನ್​ನಲ್ಲಿ 500 ರನ್ ಪೂರೈಸಿದ್ದಾರೆ. ಈ ಮೂಲಕ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೌದು, ಕೆಎಲ್ ರಾಹುಲ್ ಐಪಿಎಲ್​ನಲ್ಲಿ ಸತತವಾಗಿ ಐದನೇ ಬಾರಿಗೆ 500+ ರನ್ ಕಲೆಹಾಕಿದ್ದಾರೆ. ಅಂದರೆ ಕಳೆದ ಐದು ಸೀಸನ್​ ಐಪಿಎಲ್​ನಲ್ಲೂ ರಾಹುಲ್ ಐನೂರಕ್ಕಿಂತ ಹೆಚ್ಚು ರನ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಬಿಡುಗಡೆಯಾದ ನಂತರ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.  ಪಂಜಾಬ್ ಕಿಂಗ್ಸ್ (2018) ಪರ ಮೊದಲ ಸೀಸನ್​ನಲ್ಲಿ 659 ರನ್ ಕಲೆಹಾಕಿದ್ದ ರಾಹುಲ್, ಮರು ವರ್ಷ (2019) 593 ರನ್ ಬಾರಿಸಿದ್ದರು. 2020ರಲ್ಲಿ ರಾಹುಲ್ ಬ್ಯಾಟ್​ನಿಂದ 670 ರನ್ ಮೂಡಿಬಂದಿತ್ತು. ಹಾಗೆಯೇ 2021ರಲ್ಲಿ 626 ರನ್ ಗಳಿಸಿ ಮಿಂಚಿದ್ದರು. ಇದೀಗ ಲಕ್ನೋ ಪರ 14 ಪಂದ್ಯಗಳಿಂದ 537 ರನ್​ ಕಲೆಹಾಕಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ, 2011 ರಲ್ಲಿ ಮೊದಲ ಬಾರಿಗೆ 500 ರ ಗಡಿ ದಾಟಿದರು. ಕೊಹ್ಲಿ 2013ರಲ್ಲಿ 634 ರನ್ ಹಾಗೂ 2015ರಲ್ಲಿ 505 ರನ್ ಗಳಿಸಿದ್ದರು. 2016ರಲ್ಲಿ ಅವರು 973 ರನ್‌ಗಳನ್ನು ಸಿಡಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದ್ದರು. ಎರಡು ವರ್ಷಗಳ ನಂತರ 2018 ರಲ್ಲಿ ಅವರು 14 ಪಂದ್ಯಗಳಲ್ಲಿ 530 ರನ್ ಗಳಿಸಿದರು. ಇದಾಗ್ಯೂ ಸತತವಾಗಿ ಐಪಿಎಲ್​ನಲ್ಲಿ 500+ ರನ್​ಗಳಿಸಲು ಕೊಹ್ಲಿಗೆ ಸಾಧ್ಯವಾಗಿರಲಿಲ್ಲ.

ಇನ್ನು ಶಿಖರ್ ಧವನ್ 2012, 2016, 2019, 2020 ಮತ್ತು 2021 ರಲ್ಲಿ ಐಪಿಎಲ್‌ನಲ್ಲಿ  500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಶಿಖರ್ 421 ರನ್ ಗಳಿಸಿದ್ದಾರೆ. ಇದಾಗ್ಯೂ ಶಿಖರ್ ಧವನ್ ಕೂಡ ಸತತ ಐದು ಸೀಸನ್​ನಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ 500+ ರನ್​ ಬಾರಿಸಿರಲಿಲ್ಲ.

ಆದರೆ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಮಾತ್ರ ಐಪಿಎಲ್​ನಲ್ಲಿ ಸತತ 500+ ರನ್​ ಗಳಿಸಿದ ದಾಖಲೆ ಹೊಂದಿದ್ದಾರೆ. 2014 ರಿಂದ 2020ರವರೆಗೆ ಎಸ್​ಆರ್​ಹೆಚ್​ ಪರ ಬ್ಯಾಟ್ ಬೀಸಿದ್ದ ವಾರ್ನರ್ ಪ್ರತಿ ಸೀಸನ್​ನಲ್ಲೂ ಕ್ರಮವಾಗಿ 528, 562, 848, 641, 692 ಮತ್ತು 548 ರನ್ ಗಳಿಸಿದ್ದಾರೆ. ಅಂದರೆ ಐಪಿಎಲ್​ನಲ್ಲಿ 6 ಸೀಸನ್​ನಲ್ಲಿ 500+ ರನ್​ ಬಾರಿಸಿದ ದಾಖಲೆ ವಾರ್ನರ್ ಹೆಸರಿನಲ್ಲಿದೆ. ಇದೀಗ ಸತತ 5 ಸೀಸನ್​ನಲ್ಲಿ ಐನೂರಕ್ಕೂ ಅಧಿಕ ರನ್ ಬಾರಿಸಿರುವ ಕೆಎಲ್ ರಾಹುಲ್ ಮುಂದಿನ ಸೀಸನ್​ ಮೂಲಕ ವಾರ್ನರ್ ಅವರ ದಾಖಲೆಯನ್ನು ಸರಿಗಟ್ಟಬಹುದು.

Most Read Stories

TV9 Kannada

Leave a Reply

Your email address will not be published. Required fields are marked *