KL Rahul: ಪಂದ್ಯ ಸೋತ ಬೆನ್ನಲ್ಲೇ ಕೆಎಲ್ ರಾಹುಲ್​ಗೆ ದಂಡ..! | IPL 2022: KL Rahul Fined For Breaching Code Of Conduct


KL Rahul: ಪಂದ್ಯ ಸೋತ ಬೆನ್ನಲ್ಲೇ ಕೆಎಲ್ ರಾಹುಲ್​ಗೆ ದಂಡ..!

KL Rahul

IPL 2022: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್​ಗೆ (KL Rahul) ಸೋಲಿನ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಐಪಿಎಲ್​ನ 31ನೇ ಪಂದ್ಯದಲ್ಲಿ ಲಕ್ನೋ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್‌ಗಳಿಂದ ಸೋಲಿಸಿತು. ಇದಾದ ಬಳಿಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಹುಲ್​ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನ ನೀತಿ ಸಂಹಿತೆಯ ಲೆವೆಲ್-1ರ ಅಡಿಯಲ್ಲಿ ರಾಹುಲ್ ತಪ್ಪು ಒಪ್ಪಿಕೊಂಡು ತಮಗೆ ವಿಧಿಸಿದ್ದ ದಂಡವನ್ನೂ ಒಪ್ಪಿಕೊಂಡಿದ್ದಾರೆ. ಕೆಎಲ್ ರಾಹುಲ್ ಹೊರತಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕೂಡ ವಾಗ್ದಂಡನೆಗೆ ಗುರಿಯಾಗಿದ್ದಾರೆ.

ಮಾರ್ಕಸ್ ಸ್ಟೊಯಿನಿಸ್ ಕೂಡ ಲೆವೆಲ್-1ರ ಅಡಿಯಲ್ಲಿನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಪಂದ್ಯದಲ್ಲಿ, ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ಸ್ಟೊಯಿನಿಸ್ ಬೌಲ್ಡ್ ಆಗಿದ್ದರು. ಆದರೆ ಇದಕ್ಕೂ ಮುನ್ನ ವೈಡ್ ವಿಷಯವಾಗಿ ಅವರು ಅಂಪೈರ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ಮಾತುಗಳು ಸ್ಟಂಪ್ ಮೈಕ್ರೊಫೋನ್‌ನಲ್ಲಿ ದಾಖಲಾಗಿವೆ.

ಹ್ಯಾಝಲ್ ವುಡ್ ಅವರ ಹಿಂದಿನ ಬಾಲ್ ಅನ್ನು ವೈಡ್ ಎಂದು ಘೋಷಿಸದಿರುವ ಅಂಪೈರ್ ಕ್ರಿಸ್ ಗಫ್ನಿ ನಿರ್ಧಾರ ಸ್ಟೊಯಿನಿಸ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಣಿಸಿರುವ ಮ್ಯಾಚ್ ರೆಫರಿ ಸ್ಟೊಯಿನಿಸ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಿದ್ದಾರೆ. ಈ ವೇಳೆ ಮಾಡಿರುವ ತಪ್ಪನ್ನು ಮಾರ್ಕಸ್ ಸ್ಟೊಯಿನಿಸ್ ಒಪ್ಪಿಕೊಂಡಿದ್ದಾರೆ.

ಸ್ಟೊಯಿನಿಸ್ ವಿಕೆಟ್ ಸಿಗುತ್ತಿದ್ದಂತೆ ಈ ಪಂದ್ಯದಲ್ಲಿ ಆರ್​ಸಿಬಿ ಗೆಲುವನ್ನು ಖಚಿತಪಡಿಸಿತು. ಇದಾಗ್ಯೂ ಕೊನೆಯ ಓವರ್‌ನಲ್ಲಿ ಜೇಸನ್ ಹೋಲ್ಡರ್ ಎರಡು ಸಿಕ್ಸರ್‌ಗಳನ್ನು ಬಾರಿಸಿದರೂ ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು 8 ವಿಕೆಟ್‌ಗೆ 163 ರನ್‌ಗಳಿಸಷ್ಟೇ ಶಕ್ತರಾದರು. ಇದರೊಂದಿಗೆ ಆರ್​ಸಿಬಿ ತಂಡವು 18 ರನ್​ಗಳಿಂದ ಜಯ ಸಾಧಿಸಿತು.

TV9 Kannada


Leave a Reply

Your email address will not be published. Required fields are marked *