KL Rahul: ರಾಹುಲ್ ಫಿಟ್ ಆಗುತ್ತಿದ್ದಂತೆ ನಾಯಕತ್ವದಿಂದ ಧವನ್​ಗೆ ಗೇಟ್ ಪಾಸ್: ಅಭಿಮಾನಿಗಳ ಆಕ್ರೋಶ | BCCI decision to demote Shikhar Dhawan from the leadership role and make KL Rahul the captain Fans unhappy


India vs Zimbabwe: ವಾರಗಳ ಹಿಂದೆ ಬಿಸಿಸಿಐ ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟ ಮಾಡಿತ್ತು. ಕೆಎಲ್ ರಾಹುಲ್ ಆಗ ಫಿಟ್ ಆಗಿಲ್ಲದ ಕಾರಣ ಇವರ ಹೆಸರನ್ನು ಕೈಬಿಡಲಾಗಿತ್ತು. ಹೀಗಾಗಿ ಶಿಖರ್ ಧವನ್​ಗೆ ನಾಯಕನ ಪಟ್ಟ ನೀಡಿದ್ದರು.

KL Rahul: ರಾಹುಲ್ ಫಿಟ್ ಆಗುತ್ತಿದ್ದಂತೆ ನಾಯಕತ್ವದಿಂದ ಧವನ್​ಗೆ ಗೇಟ್ ಪಾಸ್: ಅಭಿಮಾನಿಗಳ ಆಕ್ರೋಶ

KL Rahul and Shikhar Dhawan

ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ತಂಡ ಇದೀಗ ಜಿಂಬಾಬ್ವೆ ನಾಡಿಗೆ ತೆರಳಲು ಸಜ್ಜಾಗುತ್ತಿದೆ. ಆಗಸ್ಟ್​ 18, 20 ಹಾಗೂ 22 ರಂದು ಭಾರತ-ಜಿಂಬಾಬ್ವೆ (India vs Zimbabwe) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿವೆ. ರೋಹಿತ್ ಶರ್ಮಾ (Rohit Sharma), ರಿಷಭ್ ಪಂತ್, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಕೆಲ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ಸುದೀರ್ಘ ಗಾಯದ ನಂತರ ದೀಪಕ್ ಚಹಾರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚು ಹರಿಸಿದ್ದ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಇಂಜುರಿಯಿಂದ ಗುಣಮುಖರಾಗಿ ಕೆಎಲ್ ರಾಹುಲ್ (KL Rahul) ಕೂಡ ಫಿಟ್ ಆಗಿದ್ದು ಜಿಂಬಾಬ್ವೆ ವಿರುದ್ಧದ ಸರಣಿಗೆ ತಡವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಬಿಸಿಸಿಐ ಇವರನ್ನು ನಾಯಕನಾಗಿ ಹೆಸರು ಘೋಷಣೆ ಮಾಡಿದೆ.

ವಾರಗಳ ಹಿಂದೆ ಬಿಸಿಸಿಐ ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟ ಮಾಡಿತ್ತು. ಕೆಎಲ್ ರಾಹುಲ್ ಆಗ ಫಿಟ್ ಆಗಿಲ್ಲದ ಕಾರಣ ಇವರ ಹೆಸರನ್ನು ಕೈಬಿಡಲಾಗಿತ್ತು. ಹೀಗಾಗಿ ಶಿಖರ್ ಧವನ್​ಗೆ ನಾಯಕನ ಪಟ್ಟ ನೀಡಿದ್ದರು. ಅಲ್ಲದೆ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್​ಸ್ವೀಪ್ ಸಾಧನೆ ಗೈದಿದ್ದ ಭಾರತದ ಬಹುತೇಕ ಆಟಗಾರರೇ ಇಲ್ಲಿಗೂ ಆಯ್ಕೆಯಾಗಿದ್ದರು. ಆದರೀಗ ರಾಹುಲ್ ತಂಡಕ್ಕೆ ಆಗಮನಿಸುತ್ತಿದ್ದಂತೆ ಧವನ್​ರನ್ನು ಏಕಾಏಕಿ ತಂಡದ ನಾಯಕತ್ವದಿಂದ ಕಿತ್ತೆಸೆಯಲಾಗಿದೆ.

ಮೊದಲು ನಾಯಕನಾಗಿ ಆಯ್ಕೆಯಾದ ಹಿರಿಯ ಅನುಭವಿ ಆಟಗಾರನನ್ನು ದಿಢೀರ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐ ನಡೆಯ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದೆ.

ಬಿಸಿಸಿಐ ವೈದ್ಯಕೀಯ ತಂಡದಿಂದ ಫಿಟ್‌ನೆಸ್‌ ಸರ್ಟಿಫಿಕೆಟ್‌ ಪಡೆದ ಕೆ.ಎಲ್‌. ರಾಹುಲ್‌ ಮರಳಿ ಭಾರತ ತಂಡದ ನಾಯಕತ್ವಕ್ಕೆ ಅಣಿಯಾಗಿದ್ದಾರೆ. ಜಿಂಬಾಬ್ವೆ ಎದುರಿನ ಸರಣಿ ವೇಳೆ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಶಿಖರ್‌ ಧವನ್‌ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಐಸಿಸಿ ಸೂಪರ್ ಲೀಗ್​ ಭಾಗವಾಗಿ ಭಾರತಜಿಂಬಾಬ್ವೆ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿವೆ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್​ 18, 20 ಹಾಗೂ 22ರಂದು ಪಂದ್ಯಗಳನ್ನು ಆಯೋಜಿಸಲಾಗಿದೆ. ಐಸಿಸಿ ಪುರುಷರ ಕ್ರಿಕೆಟ್​ ವಿಶ್ವಕಪ್​ ಸೂಪರ್ ಲೀಗ್​ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್​​​ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ. ಐಸಿಸಿ ಲೀಗ್​​​ ಶ್ರೇಯಾಂಕದಲ್ಲಿ ಜಿಂಬಾಬ್ವೆ ಪ್ರಸ್ತುತ 12ನೇ ಸ್ಥಾನದಲ್ಲಿದೆ.

TV9 Kannada


Leave a Reply

Your email address will not be published. Required fields are marked *