ಸುನೀಲ್ ಶೆಟ್ಟಿ, ಕೆಎಲ್ ರಾಹುಲ್-ಆಥಿಯಾ ಶೆಟ್ಟಿ
ಸದ್ಯ ಬಾಲಿವುಡ್ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಜೊತೆಗೆ ಇದೀಗ ಕ್ರೀಡಾ ಲೋಕದಲ್ಲಿ ಮದುವೆ ಸೀಸನ್ ಕೂಡ ಶುರುವಾಗಿದೆ. ಇತ್ತೀಚೆಗೆ, ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹವೂ ಅದ್ದೂರಿಯಾಗಿ ನಡೆಯಿತು. ಗಣ್ಯರ ಸಮ್ಮುಖದಲ್ಲಿ ನಡೆದ ಮದುವೆ, ದೇಶ ಸೇರಿದಂತೆ ಇಡೀ ದೇಶದ ಗಮನ ಸೆಳೆಯಿತು. ಅದೇ ರೀತಿ ಈಗ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಮತ್ತು ಕ್ರಿಕೆಟರ್ ಕೆಎಲ್ ರಾಹುಲ್ (Athiya Shetty and KL Rahul) ಬಗ್ಗೆ ಒಂದು ಸುದ್ದಿ ಹೊರಬಿದ್ದಿದೆ . ಈ ಇಬ್ಬರು ಕಳೆದ ಕೆಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದಯ, ಈಗ ಈ ಚರ್ಚೆಗಳು ನಿಲ್ಲದೆ ಅವರ ಮದುವೆಯತ್ತಲೂ ಹೊರಳಿವೆ. ಇತ್ತೀಚಿನ ವರದಿಯ ಪ್ರಕಾರ ಅಥಿಯಾ ಮತ್ತು ರಾಹುಲ್ ಈ ವರ್ಷದ ಚಳಿಗಾಲದ ಸಮಯದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮದುವೆ ತಯಾರಿಯೂ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಅಥಿಯಾ ಕುಟುಂಬದ ಅನುಮತಿ
ಮೂಲವೊಂದರ ಪ್ರಕಾರ, ಅಥಿಯಾ ಅವರ ತಂದೆ-ತಾಯಿ ಇಬ್ಬರೂ ರಾಹುಲ್ ಅನ್ನು ಇಷ್ಟಪಟ್ಟಿದ್ದಾರೆ ಎಂಬುದು ವರದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದೊಳಗೆ ಈ ಪ್ರೇಮಪಕ್ಷಿಗಳು ಮದುವೆಯಾಗಲಿದ್ದಾರೆ. ಆಕೆಯ ತಂದೆ ಸುನೀಲ್ ಶೆಟ್ಟಿ ಮಂಗಳೂರಿನ ಮೂಲ್ಕಿಯಲ್ಲಿ ತುಳು ಭಾಷಿಕ ಮನೆತನದವರು. ರಾಹುಲ್ ಕೂಡ ಮಂಗಳೂರಿನವರಾಗಿದ್ದು ಇದು ದಕ್ಷಿಣ ಭಾರತದ ಸಮಾರಂಭವಾಗುವ ಸಾಧ್ಯತೆ ಇದೆ.
ಜನ್ಮದಿನದ ಪೋಸ್ಟ್ ಚರ್ಚೆಯಲ್ಲಿತ್ತು
ಅಥಿಯಾ ನಟ ಸುನಿಲ್ ಶೆಟ್ಟಿ ಅವರ ಮಗಳು. ತನ್ನ ಗೆಳೆಯ ಕೆಎಲ್ ರಾಹುಲ್ ಹುಟ್ಟುಹಬ್ಬದಂದು ಮೂವರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಫೋಟೋ ಹಂಚಿಕೊಂಟಿದ್ದರು. ಈ ಫೋಟೋ ಸಹಿತ ಶೀರ್ಷಿಕೆ ಕೂಡ ಎಲ್ಲರ ಗಮನ ಸೆಳೆದಿತ್ತು. ಈ ಫೋಟೋಗೆ ನೆಟಿಜನ್‌ಗಳು ಲೈಕ್ ಮತ್ತು ಕಾಮೆಂಟ್‌ಗಳ ಸುರಿಮಳೆಗೈದಿದ್ದರು. ಉಥಿಯಾ ಶೆಟ್ಟಿ ಅವರು ಕೆಎಲ್ ರಾಹುಲ್ ಜೊತೆಗಿನ ಮೂರು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬುದು ಖಚಿತವಾಗಿತ್ತು. ಮೊದಲ ಫೋಟೋದಲ್ಲಿ ಅಥಿಯಾ ಶೆಟ್ಟಿ ಕೆಎಲ್ ರಾಹುಲ್ ಅವರನ್ನು ತಬ್ಬಿಕೊಂಡಿದ್ದರೆ, ಎರಡನೇ ಚಿತ್ರದಲ್ಲಿ, ಅಥಿಯಾ ಶೆಟ್ಟಿ ಮತ್ತು ರಾಹುಲ್ ಕೈ ಹಿಡಿದುಕೊಂಡಿದ್ದರು. ಹಾಗೆಯೇ ಮೂರನೇ ಫೋಟೋದಲ್ಲಿ, ಇಬ್ಬರೂ ವಿಮಾನದಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿರುವ ಚಿತ್ರ ಸಖತ್ ಚರ್ಚೆ ಹುಟ್ಟುಹಾಕಿತ್ತು.
ಇಂಗ್ಲೆಂಡ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು
ಅಥಿಯಾ ಮತ್ತು ಕೆಎಲ್ ರಾಹುಲ್ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಅಥಿಯಾ ಕೂಡ ಕೆಎಲ್ ರಾಹುಲ್ ಜೊತೆ ಕಾಣಿಸಿಕೊಂಡಿದ್ದರು. ಬಿಸಿಸಿಐಗೆ ಸಲ್ಲಿಸಿರುವ ದಾಖಲೆಗಳಲ್ಲಿ ಕೆಎಲ್ ರಾಹುಲ್ ಅವರು ಅಥಿಯಾ ತಮ್ಮ ಪಾಟ್ನರ್ ಎಂದು ಹೇಳಿದ್ದರು. ಅದೇ ಸಮಯದಲ್ಲಿ, ಸುನೀಲ್ ಶೆಟ್ಟಿ ಅವರ ಸಂಬಂಧದ ಬಗ್ಗೆ ಕೇಳದ್ದಾ್ ಅವರು ಈ ಪ್ರಶ್ನೆಗೆ ಉತ್ತರಿಸಿರಲಿಲ್ಲ ಆದರೆ ಇಲ್ಲ ಎಂದು ಹೇಳಲಿಲ್ಲ. ಈಗ ಕೆಎಲ್ ರಾಹುಲ್ ಮತ್ತು ಅಥಿಯಾ ನಡುವಿನ ಸಂಬಂಧವು ಜಗಜ್ಜಾಹೀರಾಗಿದೆ. ಹೀಗಾಗಿ ಸುನಿಲ್ ಶೆಟ್ಟಿ ತಮ್ಮ ಮಗಳ ಸಂಬಂಧಕ್ಕೆ ವಿರೋಧಿಸದೆ, ಈ ಇಬ್ಬರ ಮದುವೆ ಕಾರ್ಯ ನೆರವೇರಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ. ಈ ಸುದ್ದಿ ನಿಜವಾದರೆ ಟೀಂ ಇಂಡಿಯಾ ಕ್ರಿಕೆಟ್ನಲ್ಲಿ ಮತ್ತೊಬ್ಬ ಸ್ಟಾರ್ ಓಪನರ್ ಇಷ್ಟರಲ್ಲೇ ಹಸೆಮಣೆ ಏರಲಿದ್ದಾನೆ.