ಅದು ಹಲವು ವಿವಾದಗಳ ನಡುವೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಗೆಯಲ್ಲಿ ಕಳೆದ(ಮೇ.24) ರಾತ್ರಿ ಬ್ಲಾಸ್ಟಿಂಗ್ ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ. ಈ ಹಿನ್ನಲೆ 11ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಕೋಲಾರ ಕಲ್ಲು ಕ್ವಾರಿ ಸ್ಪೋಟ
ಕೋಲಾರ: ತಾಲೂಕಿನ ಕೆ.ಬಿ ಹೊಸಹಳ್ಳಿ ಗ್ರಾಮದ ಬಳಿ ಇರುವ ಕಲ್ಲುಕ್ವಾರಿಯಲ್ಲಿ ನಿನ್ನೆ(ಮೇ.24) ನಡೆದಿದ್ದ ಬ್ಲಾಸ್ಟಿಂಗ್ನಲ್ಲಿ ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ವಾರಿ ಮಾಲೀಕ ಸೇರಿ 7 ಜನರನ್ನ ಬಂಧನ ಮಾಡಲಾಗಿದ್ದು, ಜೊತೆಗೆ ಕ್ವಾರಿ ಮಾಲೀಕ ಸೇರಿ 11 ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಹೌದು ನಿನ್ನೆ ಬ್ಲಾಸ್ಟ್ವೇಳೆ ಯಾದಗಿರಿ(Yadagiri) ಮೂಲದ ಕಾರ್ಮಿಕ ಸೋಮು ಜಾದವ್ ಸಾವನ್ನಪ್ಪಿ, ಗೋಪಿ ಎಂಬುವರಿಗೆ ಗಾಯವಾಗಿತ್ತು. ಈ ಹಿನ್ನಲೆ ಕ್ವಾರಿ ಮಾಲೀಕ ಅಬ್ದುಲ್ ರೆಹಮಾನ್, ಮ್ಯಾನೇಜರ್ ದೇವರಾಜ್ ಸೇರಿ ಒಟ್ಟು 7 ಜನರನ್ನ ಬಂಧಿಸಲಾಗಿದ್ದು, ಉಳಿದವರಿಗಾಗಿ ವೇಮಗಲ್ ಪೊಲೀಸರಿಂದ ಶೋಧ ನಡೆಸಿದ್ದಾರೆ.
ಇನ್ನು ಮುಜೀಬ್, ಬೈಯಣ್ಣ, ನಂದೀಶ್ಗೌಡ, ಎಂಬ ಮೂರು ಜನರಿಗೆ ಕೆ.ಬಿ.ಹೊಸಹಳ್ಳಿ ಗ್ರಾಮದ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಲ್ಲುಗಣಿ ಗುತ್ತಿಗೆ ನೀಡಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಕಾರಣ ಮಾರಕವಾಗಿದೆ. ಇಲ್ಲಿ ಗಣಿಗಾರಿಕೆ ನಡೆಯದಂತೆ ಹಲವು ವಿರೋಧ ವ್ಯಕ್ತವಾಗುತ್ತಲೇ ಇದೆ. ಇದರ ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ ಅನ್ನೋ ಆರೋಪ ಗ್ರಾಮಸ್ಥರದ್ದು. ಈ ನಡುವೆ ಕಳೆದ ರಾತ್ರಿ ಇಲ್ಲಿನ ಮುಜೀಬ್ ಎಂಬುವರಿಗೆ ಸೇರಿದ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಬ್ಲಾಸ್ಟಿಂಗ್ ವೇಳೆಯಲ್ಲಿ ಕಲ್ಲು ಸಿಡಿದು ಯಾದರಿಗಿ ಮೂಲದ ಸೋಮು ಯಾದವ್ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಗೋಪಿ ಎಂಬಾತನಿಗೆ ಗಂಭೀರ ಗಾಯಗಳಾಗಿತ್ತು.