ಮುನಿರಾಬಾದ್ ಪೊಲೀಸರ ಕಾರ್ಯಚರಣೆಯಿಂದ 8,5 ಲಕ್ಷ ಮೌಲ್ಯದ 154 ಕ್ವಿಂಟಾಲ್ ಅಕ್ಕಿ ಮತ್ತು ಕಾರು ಜಪ್ತಿ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬೂದಗುಂಪಾ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಜಪ್ತಿ ಮಾಡಲಾಗಿದೆ.

ಅಕ್ಕಿ ಮತ್ತು ಕಾರು ಜಪ್ತಿ
ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಪೊಲೀಸರ ಕಾರ್ಯಚರಣೆಯಿಂದ 8,5 ಲಕ್ಷ ಮೌಲ್ಯದ 154 ಕ್ವಿಂಟಾಲ್ ಅಕ್ಕಿ ಮತ್ತು ಕಾರು ಜಪ್ತಿ (seize) ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬೂದಗುಂಪಾ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಜಪ್ತಿ ಮಾಡಲಾಗಿದೆ. ಪ್ರಕಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಪ್ರಶಾಂತ ಮಣ್ಣೂರು, ಗೌತಮ ಬಳಗಾನೂರ, ಮೂಕಪ್ಪ ಹೊಗಾರ ಬಂಧಿತರು. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯ ಭಾವಚಿತ್ರ ಹೊಂದಿದ ದಿನಸಿ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆ ಆಗಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆಂಪರಾಜು ಭಾವಚಿತ್ರ ಹೊಂದಿದ್ದ ದಿನಸಿ ಕಿಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ದಿನಸಿ ನೀಡಲೆಂದು ಕಿಟ್ಗಳನ್ನು ಇಡಲಾಗಿದೆ ಎನ್ನಲಾಗಿದೆ. ಗೋದಿ ಹಿಟ್ಟು, ಮೈದಾ ಹಿಟ್ಟು, ಕಡಲೇ ಹಿಟ್ಟು, ರವೆ, ಉಪ್ಪು ಸೇರಿದಂತೆ ಸಾವಿರಾರು ಚೀಲಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತದಾರರಿಗೆ ಹಂಚಲು ತಯಾರಿಸಿದ್ದ 2900 ಕುಕ್ಕರ್ಗಳು ಜಪ್ತಿ
ರಾಮನಗರ: ತಾಲೂಕಿನ ಕರಿಕಲ್ ದೊಡ್ಡಿ ಬಳಿಯಿರುವ ಕುಕ್ಕರ್ ತಯಾರಿಕಾ ಕಾರ್ಖಾನೆ ಮೇಲೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ದಾಳಿ ಮಾಡಿದ್ದು, 2900 ಕುಕ್ಕರ್ಗಳನ್ನು ಜಪ್ತಿ ಮಾಡಲಾಗಿದೆ. ವಿಶ್ವಾಸ್ ವೈದ್ಯ ಎಂಬುವರಿಗೆ ಕುಕ್ಕರ್ಗಳು ಸೇರಿದ್ದು ಎನ್ನಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಮತದಾರರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಇಬ್ಬರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.