Kotigobba 3 Trailer: ಆ್ಯಕ್ಷನ್​ ಮತ್ತು ಅದ್ದೂರಿತನ; ‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಮಿಂಚಿದ ಸುದೀಪ್ | Kotigobba 3 Trailer Kichcha sudeep Get Thumbs up From Fans After Kotigobba 3 Trailer Trailer release

Kotigobba 3 Trailer: ಆ್ಯಕ್ಷನ್​ ಮತ್ತು ಅದ್ದೂರಿತನ; ‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಮಿಂಚಿದ ಸುದೀಪ್

ಸುದೀಪ್​

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಸಿನಿಮಾ ಅಕ್ಟೋಬರ್​ 14ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ‘ಕೋಟಿಗೊಬ್ಬ 3’ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ. ಟ್ರೇಲರ್​ನಲ್ಲಿ ಆ್ಯಕ್ಷನ್​, ಸ್ಟಂಟ್ಸ್​ ಹಾಗೂ ಅದ್ದೂರಿತನ ಹೈಲೈಟ್​ ಆಗಿದೆ.

ಇಂದು (ಅಕ್ಟೋಬರ್​ 7) ಸಂಜೆ ಈ ಟ್ರೇಲರ್​ ರಿಲೀಸ್​ ಆಗಿದೆ. ಸಿನಿಮಾದ ಬಹುತೇಕ ಕಥೆ ವಿದೇಶದಲ್ಲಿ ನಡೆಯಲಿದೆ ಎನ್ನುವುದಕ್ಕೆ ಟ್ರೇಲರ್​ ಸಾಕ್ಷ್ಯ ನೀಡಿದೆ. ‘ಕೋಟಿಗೊಬ್ಬ 2’ ಸಿನಿಮಾದಲ್ಲಿ ಸುದೀಪ್​ ಎರಡು ಶೇಡ್​ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಸಿನಿಮಾದ ಹೈಲೈಟ್​ ಕೂಡ ಆಗಿತ್ತು. ‘ಕೋಟಿಗೊಬ್ಬ 3’ ಸಿನಿಮಾದಲ್ಲೂ ಇದು ಮುಂದುವರಿದಿದೆ. ಇನ್ನು, ಚಿತ್ರದ ಟ್ರೇಲರ್​ನಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳನ್ನು ತೋರಿಸಲಾಗಿದೆ.

‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಆಶಿಕಾ ರಂಗನಾಥ್​ ವಿಶೇಷ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಅದರ ಒಂದು ತುಣುಕನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಮಡೋನಾ ಸಬಾಸ್ಟಿಯನ್​ ಸಖತ್​ ಗ್ಲಾರಮ್​ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಈ ಸಿನಿಮಾದ ಟ್ರೇಲರ್​ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ರಿಲೀಸ್​ ಆದ ಗಂಟೆ ಒಳಗೆ  ಟ್ರೇಲರ್​ ಲಕ್ಷ ವೀಕ್ಷಣೆ ಕಂಡಿದೆ.

ಶ್ರದ್ಧಾ ದಾಸ್​, ರವಿಶಂಕರ್​, ಅಭಿರಾಮಿ ಮುಂತಾದ ಕಲಾವಿದರು ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್​ ಈ ಚಿತ್ರದ ನಿರ್ದೇಶಕರು.

ಇದನ್ನೂ ಓದಿ: ಸುದೀಪ್​ಗಾಗಿ ಸಿದ್ಧವಾಗ್ತಿದೆ 120 ಅಡಿ ಕಟೌಟ್​

ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​

TV9 Kannada

Leave a comment

Your email address will not be published. Required fields are marked *