KPSC ಸೂಚಿಸಿದ ಆಸ್ಪತ್ರೆಯಿಂದ ತಪ್ಪು ಫಿಟ್ನೆಸ್ ಸರ್ಟಿಫಿಕೇಟ್, ಕೈತಪ್ಪಿದ ಹುದ್ದೆ! ಆದರೆ ಹೈಕೋರ್ಟ್ ನೀಡಿತು ಮಹತ್ವದ ಆದೇಶ | Due to KPSC and Designated Hospital doctor Negligence candidate loses chance to become motor vehicle inspector but high court lends helping judgement


KPSC ಸೂಚಿಸಿದ ಆಸ್ಪತ್ರೆಯಿಂದ ತಪ್ಪು ಫಿಟ್ನೆಸ್ ಸರ್ಟಿಫಿಕೇಟ್, ಕೈತಪ್ಪಿದ ಹುದ್ದೆ! ಆದರೆ ಹೈಕೋರ್ಟ್ ನೀಡಿತು ಮಹತ್ವದ ಆದೇಶ

KPSC ನಿಯೋಜಿತ ಆಸ್ಪತ್ರೆಯಿಂದ ತಪ್ಪು ಫಿಟ್ನೆಸ್ ಸರ್ಟಿಫಿಕೇಟ್, ಕೈತಪ್ಪಿದ ಹುದ್ದೆ! ಹೈಕೋರ್ಟ್ ನಿಂದ ಮಹತ್ವದ ಆದೇಶ

Karnataka High Court: ಅರ್ಹತೆಯುಳ್ಳ ಅಭ್ಯರ್ಥಿಗಳು ಮುಂದೆ ಹೀಗೆ ವಂಚಿತರಾಗಬಾರದು. ಕೆಪಿಎಸ್ಸಿ ತನ್ನಿಚ್ಛೆಯಂತೆ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ ನೀಡಬಾರದು. ಆದ್ದರಿಂದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿ ರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಬೆಂಗಳೂರು: ದೈಹಿಕ ಅರ್ಹತೆ ಇದ್ದರೂ ಬೌರಿಂಗ್ ಆಸ್ಪತ್ರೆ ನೀಡಿದ್ದ ತಪ್ಪು ವರದಿಯಿಂದಾಗಿ ಅಭ್ಯರ್ಥಿಯೊಬ್ಬರು ಹುದ್ದೆಯಿಂದ ವಂಚಿತರಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಅರ್ಜಿದಾರನನ್ನು ಮತ್ತೆ ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (KPSC) ಆದೇಶಿಸಿದೆ.

ಇದೇ ವೇಳೆ ಕೆಪಿಎಸ್ಸಿ ನಿಯೋಜಿತ ಆಸ್ಪತ್ರೆಗಳು ತಪ್ಪು ವರದಿಗಳನ್ನು ನೀಡುವುದನ್ನು ತಪ್ಪಿಸಲು ಹಾಗೂ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪ್ರಮಾಣಪತ್ರ ನೀಡುವಾಗ ಪಾದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಹಾಸನದ ಬಿ.ಎನ್. ಶಿವನಂಜೇಗೌಡ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವೀರಪ್ಪ ಹಾಗೂ ನ್ಯಾ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಹಾಸನದ ಶಿವನಂಜೇಗೌಡ ಎಂಬುವರು 2019ರಲ್ಲಿ ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ದೇಹದಾರ್ಢ್ಯ ಪರೀಕ್ಷೆ ನಡೆಸಿದ್ದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ವೈದ್ಯರು, ಶಿವನಂಜೇಗೌಡರಿಗೆ ಬಣ್ಣದ ದೃಷ್ಟಿ ದೋಷವಿದೆ. ನಿಗದಿತ ಎತ್ತರಕ್ಕಿಂತ ಅರ್ಧ ಸೆಂ.ಮೀ. ಕಡಿಮೆ ಇದ್ದಾರೆ ಎಂದು ಸರ್ಟಿಫಿಕೇಟ್ ನೀಡಿದ್ದರು. ಈ ಪ್ರಮಾಣಪತ್ರ ಪರಿಗಣಿಸಿ ಕೆಪಿಎಸ್‌ಸಿ ಶಿವನಂಜೇಗೌಡರ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ, ಶಿವನಂಜೇಗೌಡ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿ ಕೂಡ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ, ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 2022ರ ಏಪ್ರಿಲ್ 18ರಂದು ಶಿವನಂಜೇಗೌಡ ಅವರನ್ನು ಪರೀಕ್ಷಿಸಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಮಿಂಟೋ ಆಸ್ಪತ್ರೆಗೆ ನಿರ್ದೇಶಿಸಿತ್ತು. ಮಿಂಟೋ ಆಸ್ಪತ್ರೆ ವೈದ್ಯರು ಪರೀಕ್ಷೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿ ಶಿವನಂಜೇಗೌಡ ಅವರಿಗೆ ಬಣ್ಣದ ದೃಷ್ಟಿ ದೋಷವಿಲ್ಲ. ಹಾಗೆಯೇ, ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ನಿಗದಿ ಮಾಡಿರುವ ದೈಹಿಕ ಅರ್ಹತೆಯನ್ನು ಹೊಂದಿದ್ದಾರೆ ಎಂದು ಪ್ರಮಾಣಿಕರಿಸಿತ್ತು.

ಮಿಂಟೋ ವರದಿ ಪರಿಗಣಿಸಿದ ಹೈಕೋರ್ಟ್‌, ಅರ್ಹತೆ ಇದ್ದರೂ ಬೌರಿಂಗ್ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ ಅರ್ಜಿದಾರರು ಹುದ್ದೆ ಕಳೆದುಕೊಂಡಿರುವುದು ದುರಾದೃಷ್ಟಕರ. ಹೀಗಾಗಿ, ಅರ್ಜಿದಾರರನ್ನು ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ಮತ್ತೆ ಪರಿಗಣಿಸಬೇಕು ಎಂದು ಕೆಪಿಎಸ್ಸಿಗೆ ಆದೇಶಿಸಿದೆ.

ಇದೇ ವೇಳೆ, ಅರ್ಹತೆಯುಳ್ಳ ಅಭ್ಯರ್ಥಿಗಳು ಮುಂದೆ ಹೀಗೆ ವಂಚಿತರಾಗಬಾರದು. ಕೆಪಿಎಸ್ಸಿ ತನ್ನಿಚ್ಛೆಯಂತೆ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ ನೀಡಬಾರದು. ಆದ್ದರಿಂದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿ ರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

TV9 Kannada


Leave a Reply

Your email address will not be published. Required fields are marked *