
ಕೃಷ್ಣಜನ್ಮಭೂಮಿ ವಿವಾದದ ಸ್ಥಳ
ಮಥುರಾದ ಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 1ಕ್ಕೆ ಮುಂದೂಡಲಾಗಿದೆ.
ಮಥುರಾ: ಉತ್ತರ ಪ್ರದೇಶದಲ್ಲಿ ಶ್ರೀಕೃಷ್ಣ ಜನ್ಮಭೂಮಿಗೆ (Krishna Janmabhoomi Case) ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಮಥುರಾದ (Mathura) ಸಿವಿಲ್ ನ್ಯಾಯಾಧೀಶರು ಇಂದು ವಿಚಾರಣೆ ನಡೆಸಿದ್ದಾರೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾ ನ್ಯಾಯಾಲಯದ ಆದೇಶವು ಸ್ವೀಕಾರಾರ್ಹ ಎಂದು ಹೇಳಿದ ಮರುದಿನವೇ ಮೊದಲ ಬಾರಿಗೆ ಅರ್ಜಿಯನ್ನು ಆಲಿಸಲಾಯಿತು. ಈ ಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿಯ ಮುಂದಿನ ವಿಚಾರಣೆ ಜುಲೈ 1ರಂದು ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವ ಮನವಿಯನ್ನು ಮೂಲತಃ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2020ರ ಸೆಪ್ಟೆಂಬರ್ 25ರಂದು ಲಕ್ನೋ ಮೂಲದ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಈ ಕುರಿತು ಸಲ್ಲಿಸಿದ್ದರು.
ಶ್ರೀ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸೆಪ್ಟೆಂಬರ್ 2020ರಲ್ಲಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಮಥುರಾದ ನ್ಯಾಯಾಲಯದ ನ್ಯಾಯಾಧೀಶರು ಇಂದು ಮಾಡಿದ್ದಾರೆ. ಈ ಪ್ರಕರಣದ ತಾತ್ಕಾಲಿಕ ತಡೆಯಾಜ್ಞೆ ಅರ್ಜಿಗಳು ಸೇರಿದಂತೆ ಎಲ್ಲ ಬಾಕಿ ಪ್ರಕರಣಗಳನ್ನು 4 ತಿಂಗಳೊಳಗೆ ಇತ್ಯರ್ಥ ಮಾಡಬೇಕೆಂದು ಕೆಳ ನ್ಯಾಯಾಲಯಕ್ಕೆ ಮೇ 12ರಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು. ತಾನು ಶ್ರೀಕೃಷ್ಣನ ವಂಶಸ್ಥರೆಂದು ಹೇಳಿಕೊಂಡ ಲಕ್ನೋ ಮೂಲದ ಮನೀಶ್ ಯಾದವ್ ಕತ್ರಾ ಕೇಶವ ದೇವ್ ದೇವಸ್ಥಾನದ 13.37 ಎಕರೆ ಆವರಣದೊಳಗಿನ ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾದ ಮಸೀದಿಯನ್ನು ಸ್ಥಳಾಂತರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.