ಪ್ರಪಂಚದಾದ್ಯಂತದ ಭಕ್ತರು ಕೃಷ್ಣ ಜನ್ಮಾಷ್ಟಮಿಯ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಪವಿತ್ರ ಸ್ಥಳಗಳಾದ ಬೃಂದಾವನ ಮತ್ತು ಮಥುರಾದಲ್ಲಿ ಈ ದಿನದಂದು ವಿಶೇಷ ಉತ್ಸವಗಳನ್ನು ಆಚರಿಸಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿ
ಕೃಷ್ಣ ಜನ್ಮಾಷ್ಟಮಿಯು (Krishna Janmashtami) ದೇಶದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ, ಭಕ್ತರು ಹಿಂದೂ ದೇವರಾದ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಾರೆ. ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18ರಂದು ಬರುತ್ತದೆ. ಜನ್ಮಾಷ್ಟಮಿಯ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಿ, ಭಕ್ತರು ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿಯವರೆಗೆ ಉಪವಾಸವನ್ನು ಆಚರಿಸುತ್ತಾರೆ.
ಪ್ರಪಂಚದಾದ್ಯಂತದ ಭಕ್ತರು ಕೃಷ್ಣ ಜನ್ಮಾಷ್ಟಮಿಯ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಪವಿತ್ರ ಸ್ಥಳಗಳಾದ ಬೃಂದಾವನ ಮತ್ತು ಮಥುರಾದಲ್ಲಿ ಈ ದಿನದಂದು ವಿಶೇಷ ಉತ್ಸವಗಳನ್ನು ಆಚರಿಸಲಾಗುತ್ತದೆ. ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಆಗಸ್ಟ್ 18ರ ಮಧ್ಯರಾತ್ರಿ 12.04ರಿಂದ ಆಗಸ್ಟ್ 19ರ ಮಧ್ಯರಾತ್ರಿ 12.48ರವರೆಗೆ ಪೂಜೆಯ ಮುಹೂರ್ತವಿರಲಿದೆ.
ಕೃಷ್ಣ ಜನ್ಮಾಷ್ಟಮಿ ವಿಶೇಷ:
ಕೃಷ್ಣ ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ರಾಕ್ಷಸ ಪ್ರವೃತ್ತಿಯನ್ನು ಹತ್ತಿಕ್ಕುವ ಮಹಾನ್ ಶಕ್ತಿ ಹುಟ್ಟಿದ ದಿನವಿದು. ನಕಾರಾತ್ಮಕತೆಯನ್ನು ತೊಡೆದುಹಾಕಿ ಧನಾತ್ಮಕತೆಯನ್ನು ಸ್ಥಾಪಿಸುವ ದಿನ ಇದಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನನ್ನು ಅಲಂಕರಿಸುವವರು ಇಡೀ ದಿನ ಉಪವಾಸವನ್ನು ಆಚರಿಸುವ ಮೂಲಕ ಹಬ್ಬಕ್ಕೆ ಸಿದ್ಧರಾಗಬೇಕು. ಈ ದಿನ ಮನೆಯ ಬಾಗಿಲುಗಳನ್ನು ಮಾವಿನ ತೋರಣ ಅಥವಾ ಅಶೋಕ ಮರದ ಎಲೆಗಳು ಇತ್ಯಾದಿಗಳಿಂದ ಅಲಂಕರಿಸಬೇಕು ಮತ್ತು ಬಾಗಿಲಿಗೆ ಮಂಗಳ ಕಲಶವನ್ನು ಸ್ಥಾಪಿಸಬೇಕು.