KRS​ ಅಕ್ರಮ ಗಣಿಗಾರಿಕೆ; ಸಚಿವ ಮರುಗೇಶ್​​ ನಿರಾಣಿ ಭೇಟಿಯಾದ ಸುಮಲತಾ

KRS​ ಅಕ್ರಮ ಗಣಿಗಾರಿಕೆ; ಸಚಿವ ಮರುಗೇಶ್​​ ನಿರಾಣಿ ಭೇಟಿಯಾದ ಸುಮಲತಾ

ಬೆಂಗಳೂರು: ಕೆಆರ್​ಎಸ್​ ಡ್ಯಾಂ ಅಕ್ರಮ ಗಣಿಗಾರಿಕೆ ಸಂಬಂಧ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿದ ಬಳಿಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಗಣಿಗಾರಿಕೆ ಸೇರಿದಂತೆ ಸಚಿವರೊಂದಿಗೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದೇನೆ. ಸಚಿವರು ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲೇ ಈ ಅಕ್ರಮ ಗಣಿಗಾರಿಕೆ ತಡೆಗೆ ಸೂಚಿಸಿದ್ದರು. ಈಗ ನಾನು ಅದರ ಬಗ್ಗೆಯೇ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

ಅಕ್ರಮ ಗಣಿಗಾರಿಕೆ ತಡೆಗೆ ಸಚಿವರೇ ಸೂಚನೆ ನೀಡಿದ್ದರು. ಇದನ್ನು ತಡೆಯಲು ಟಾಸ್ಕ್​ ಫೋರ್ಸ್​ ಕೂಡ ರಚಿಸಿದ್ದರು. ಬಳಿಕ ಸುಮಾರು ನೂರು ಕೋಟಿ ರೂಪಾಯಿ ದಂಡವನ್ನು ವಿಧಿಸಿದ್ದರು. ಮುರುಗೇಶ್​​​ ನಿರಾಣಿ ಅವರು ಶ್ರೀರಂಗಪಟ್ಟಣಕ್ಕೆ ಭೇಟಿ ಕೊಟ್ಟಾಗ ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂಬುದು ವಿವರಿಸಿದ್ದೇನೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದುವರೆದು.. ಯಾವುದೇ ರೀತಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಸಚಿವರಿಗೆ ಹೇಳಿದ್ದೇನೆ. ಸರ್ಕಾರಕ್ಕೆ ಸರಿಯಾಗಿ ರಾಜಧನ ನೀಡದೆ ನಷ್ಟ ಮಾಡುತ್ತಿದ್ದಾರೆ. ಕೂಡಲೇ ರಾಜಧನ ವಸೂಲಿ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಹೋರಾಟ ಮಾಡೋದಿದ್ರೆ ಗಂಡಸ್ತನದಿಂದ ಮಾಡೋಣ- ಮನೆ ಮೇಲೆ ಕಲ್ಲೆಸೆದವರಿಗೆ ರಾಕ್​ಲೈನ್ ತಿರುಗೇಟು

ಸಚಿವರಿಂದ ಕ್ರಮಕೈಗೊಳ್ಳುವ ಭರವಸೆ

ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಬೇಬಿ ಬೆಟ್ಟಕ್ಕೂ ಭೇಟಿ ನೀಡುತ್ತೇನೆ ಅಂತಾ ಸಚಿವರು ಹೇಳಿದ್ದಾರೆ. ನಾನು ಕೆಆರ್‌ಎಸ್ ಜಲಾಶಯ ವೀಕ್ಷಣೆಗೆ ತೆರಳಲಿದ್ದೇನೆ. ಅದರ ಸುರಕ್ಷತೆ, ಏನೆಲ್ಲಾ ಕ್ರಮಕೊಳ್ತಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸುತ್ತೇನೆ. ಜನ ಮತ್ತು ರೈತರಿಗಿಂತ ಯಾರೂ ದೊಡ್ಡವರಲ್ಲ. ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ನನಗೆ ಜನ ಬೆಂಬಲವಿದೆ

ಬೇಬಿ ಬೆಟ್ಟದಲ್ಲಿ ಏನು ನಡೆಯುತ್ತಿದೆ ಎಂದು ನೀವೇ ಪ್ರತ್ಯಕ್ಷವಾಗಿ ನೋಡಿ. ಒಮ್ಮೆ ಭೇಟಿ ನೀಡಿದರೆ ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತದೆ. ಕೆಆರ್​ಎಸ್​ ಕುರಿತು ಸದ್ಯದಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಸರ್ಕಾರ ಮತ್ತು ಪ್ರತಿಪಕ್ಷಗಳು ನನಗೆ ಬೆಂಬಲ ನೀಡದಿದ್ದರೂ, ಜನರ ಸಪೋರ್ಟ್ ಇದೆ ಎಂದು ಸುಮಲತಾ ಸಂತೋಷ ವ್ಯಕ್ತಪಡಿಸಿದರು.

The post KRS​ ಅಕ್ರಮ ಗಣಿಗಾರಿಕೆ; ಸಚಿವ ಮರುಗೇಶ್​​ ನಿರಾಣಿ ಭೇಟಿಯಾದ ಸುಮಲತಾ appeared first on News First Kannada.

Source: newsfirstlive.com

Source link