ಮಂಡ್ಯ: ಕೆಆರ್‍ಎಸ್ ಡ್ಯಾಂನ 80 ಪ್ಲಸ್ ಅಡಿ ಗೇಟುಗಳ ಬಳಿಯಲ್ಲಿರುವ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತಗೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗಲು ಈ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲ ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಸತತ ಮಳೆಯಿಂದಾಗಿ ಕಲ್ಲುಗಳು ಕುಸಿದಿವೆ ಎನ್ನಲಾಗಿದೆ. ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಕಲ್ಲು ಕುಸಿತದಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇನ್ನೂ ಈ ಕುರಿರತು ಪ್ರತಿಕ್ರಿಯಿಸಿರುವ ನಿಗಮದ ಅಧಿಕಾರಿಗಳು, ಯಾರೂ ಆತಂಕಪಡುವ ಆತಂಕವಿಲ್ಲ. ಇದು ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗುವ ಮಾರ್ಗದ ಮೆಟ್ಟಿಲುಗಳ ಬಳಿ ಕಲ್ಲು ಕುಸಿದಿವೆ. ಇದಕ್ಕೂ ಆಣೆಕಟ್ಟೆಗೂ ಯಾವುದೇ ಸಂಬಂಧವಿಲ್ಲ. ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರೋದರಿಂದ ಕಲ್ಲುಗಳು ಕುಸಿದಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

The post KRS ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತ appeared first on Public TV.

Source: publictv.in

Source link