ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇನ್ಮುಂದೆ ‘KSRTC’ ಬ್ರ್ಯಾಂಡ್​ ನೇಮ್ ಬಳಸುವಂತಿಲ್ಲ ಎಂದು ಟ್ರೇಡ್​ ಮಾರ್ಕ್ಸ್​ ರಿಜಿಸ್ಟ್ರಿ ಆದೇಶ ನೀಡಿದೆ. ಹೀಗಾಗಿ ಕೆಎಸ್ಆರ್​​ಟಿ ಕೇರಳದ ಪಾಲಾದ ಹಿನ್ನೆಲೆಯಲ್ಲಿ ನಮ್ಮ KSRTCಗೆ ಸಂಸದೆ ಸುಮಲತಾ ಅಂಬರೀಶ್​ ಹೊಸ ಬ್ರ್ಯಾಂಡ್ ನೇಮ್ ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಅವರೇ.. ರಾಜ್ಯದ ಮೂಲೆ ಮೂಲೆಗೂ ತಲುಪಿ ಪ್ರಯಾಣಿಕರನ್ನ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಸೇವೆಯ ಟ್ರೇಡ್ ಮಾರ್ಕ್​​ 27 ವರ್ಷಗಳ ಕಾನೂನು ಹೋರಾಟದ ನಂತರ ಕೇರಳ ರಾಜ್ಯದ ಪಾಲಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸಾರಿಗೆ ನಿಗಮಕ್ಕೆ ಸಂವಿಧಾನ ಶಿಲ್ಪಿ ಡಾ.ಬಿಆರ್​ ಅಂಬೇಡ್ಕರ್​​ ಅವರ ನೆನಪಿನಾರ್ಥ ‘‘ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ’’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರವನ್ನ ಈ ಮೂಲಕ ಗೌರವಪೂರ್ವಕವಾಗಿ ಕೋರುತ್ತೇನೆ ಅಂತಾ ಮನವಿ ಮಾಡಿಕೊಂಡಿದ್ದಾರೆ.

 

The post KSRTC ಕೇರಳದ ಪಾಲು.. ರಾಜ್ಯ ಸರ್ಕಾರಕ್ಕೆ ಹೊಸ ಹೆಸರು ಸೂಚಿಸಿದ ಸುಮಲತಾ appeared first on News First Kannada.

Source: newsfirstlive.com

Source link