ಬೆಂಗಳೂರು: ಕೆಎಸ್‍ಆರ್ ಟಿಸಿ, ಲೋಗೋ ಮತ್ತು ‘ಆನವಂಡಿ'( ಆನೆ) ಎಂಬ ಸಂಕ್ಷಿಪ್ತ ರೂಪ ಈಗ ಕೇರಳ ಪಾಲಾಗಿದೆ. ಕರ್ನಾಟಕ ಮತ್ತು ಕೇರಳ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಸಾಮಾನ್ಯವಾಗಿ ಬಳಸುವ ಕೆಎಸ್‍ಆರ್ ಟಿಸಿ ಹೆಸರನ್ನು ಈಗ ಕೇರಳದಲ್ಲಿ ಮಾತ್ರ ಬಳಸಬಹುದು ಅನ್ನೊ ಆದೇಶ ಹೊರಬಿದ್ದಿದೆ.

ಎರಡೂ ರಾಜ್ಯಗಳು ಹಲವಾರು ವರ್ಷಗಳಿಂದ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಕೆಎಸ್‍ಆರ್ ಟಿಸಿ ಹೆಸರನ್ನು ಬಳಸುತ್ತಿವೆ. ಆದರೆ 2014 ರಲ್ಲಿ ಕರ್ನಾಟಕವು ಕರ್ನಾಟಕಕ್ಕೆ ಸೇರಿದ್ದು, ಅದನ್ನು ಕೇರಳ ಸಾರಿಗೆಯಿಂದ ಬಳಸಬಾರದು ಎಂದು ನೋಟಿಸ್ ನೀಡಿತ್ತು. ಆಗ ಕೇರಳ ಸಾರಿಗೆಯ ಸಿಎಂಡಿ ಆಗಿದ್ದ ದಿವಂಗತ ಆಂಥೋನಿ ಚಾಕೊ ಅವರು ಕೇರಳಕ್ಕೆ ಕೇಂದ್ರ ಸರ್ಕಾರದ ಅಡಿಯಲ್ಲಿ ಟ್ರೇಡ್‍ಮಾರ್ಕ್ ಗಳ ರಿಜಿಸ್ಟ್ರಾರ್‍ಗೆ ಅರ್ಜಿ ಸಲ್ಲಿಸಿದರು. ನಂತರ ಹಲವಾರು ವರ್ಷಗಳ ಕಾನೂನು ಹೋರಾಟಗಳು ನಡೆದವು. ಅಂತಿಮವಾಗಿ, ಟ್ರೇಡ್‍ಮಾರ್ಕ್ ಗಳ ಕಾಯ್ದೆ 1999 ರ ಅಡಿಯಲ್ಲಿ, ಕೆಎಸ್‍ಆರ್ ಟಿಸಿ ಟ್ರೇಡ್ ಮಾರ್ಕ್ ಮತ್ತು ಆನವಂಡಿ ಎಂಬ ಸಂಕ್ಷೇಪಣವನ್ನು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾ ಮಂಜೂರು ಮಾಡಿದೆ.

ಕೆಎಸ್‍ಆರ್‍ಟಿಸಿಯನ್ನು ಈಗ ಕೇರಳದಿಂದ ಮಾತ್ರ ಬಳಸಬಹುದಾಗಿದೆ ಮತ್ತು ಆದ್ದರಿಂದ ಶೀಘ್ರದಲ್ಲೇ ಕರ್ನಾಟಕಕ್ಕೆ ನೋಟಿಸ್ ಕಳುಹಿಸಲಾಗುವುದು ಎಂದು ಕೇರಳ ಕೆಎಸ್‍ಆರ್ ಟಿಸಿ ಎಂಡಿ ಮತ್ತು ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಹೇಳಿದ್ದಾರೆ.

ಕಾನೂನು ಮೊರೆ ಹೋಗುವ ಬಗ್ಗೆ ಚರ್ಚೆ – ಶಿವಯೋಗಿ ಕಳಸದ್
ಕೆಎಸ್‍ಆರ್‍ಟಿಸಿ ಟ್ರೇಡ್ ಮಾರ್ಕ್ ಕೇರಳ ಮಾತ್ರ ಬಳಸುವಂತೆ ಆದೇಶದ ಆರ್ಡರ್ ಕಾಪಿ ಇನ್ನೂ ನಮ್ಮ ಕೈ ಸೇರಿಲ್ಲ. ಟ್ರೇಡ್ ಮಾರ್ಕ್ ರೀಜನಲ್ ಕಚೇರಿ ಚನ್ನೈನಲ್ಲಿದೆ. ಸತತ ಏಳು ವರ್ಷಗಳಿಂದ ಕರ್ನಾಟಕ ಮತ್ತು ಕೇರಳ ನಡುವೆ ಕೆ ಎಸ್ ಆರ್ ಟಿಸಿ ಟ್ರೇಡ್ ಮಾರ್ಕ್ ಬಳಸುವ ವಿಚಾರ ವಿವಾದವಿತ್ತು.

ಧೀರ್ಘ ಕಾನೂನು ಹೋರಾಟ ಇದರ ಬಗ್ಗೆ ನಡೆದಿದೆ. ಕೇರಳ ಕೆಎಸ್‍ಆರ್ ಟಿಸಿ ಎಂಡಿಯ ನೋಟಿಸ್ ನಮ್ಮ ಕೈ ಸೇರಿಲ್ಲ. ಅಧಿಕೃತ ಆದೇಶದ ಕಾಪಿ ಸಿಕ್ಕ ನಂತ್ರ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುತ್ತೆ. ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾ ದಿಂದ ಆದೇಶ ಕಾಪಿ ಬರಬೇಕಿದೆ ಅಂತಾ ಪಬ್ಲಿಕ್ ಟಿವಿಗೆ ಕೆಎಸ್‍ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ಹೇಳಿಕೆ ನೀಡಿದ್ದಾರೆ.

The post KSRTC ಟ್ರೇಡ್ ಮಾರ್ಕ್ ಕೇರಳಕ್ಕೆ ಸೇರಿದ್ದು – ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾದಿಂದ ಆದೇಶ appeared first on Public TV.

Source: publictv.in

Source link