ರಾಯಚೂರು:  KSRTC ಲೋಗೋ ಹಾಗೂ ಹೆಸರು ಬಳಕೆ ವಿಚಾರವಾಗಿ ಕೇರಳದ ವಿರುದ್ಧ ಕರ್ನಾಟಕಕ್ಕೆ ಹಿನ್ನಡೆಯಾದ ಬಗ್ಗೆ ಇಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ರು.

ರಾಯಚೂರಿನಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ಕರ್ನಾಟಕ ಎರಡೂ ಹೆಸರು K ನಲ್ಲೇ ಬರುತ್ತೆ. ಕೇರಳದವ್ರು ಸೆಂಟ್ರಲ್ ಟ್ರೇಡ್ ಮಾರ್ಕ್ ಟ್ರಿಬುನಲ್​​ನಲ್ಲಿ ವ್ಯಾಜ್ಯ ಹೂಡಿದ್ದರು. ಕೆಎಸ್​​ಆರ್​​ಟಿಸಿ ಹೆಸರು ಅವರ ಪರವಾಗಿ ಆಗಿದೆ ಎಂದರು. ಒಂದು ಹೆಸರಿನ ಸಂಸ್ಥೆ ಎರಡು ಹೆಸರಿನ ಮೇಲೆ ಇರಬಾರದು. ವ್ಯವಹಾರಿಕವಾಗಿ ಹಾಗೂ ಔದ್ಯೋಗಿಕವಾಗಿ ಇರುವ ಸಂಸ್ಥೆಗಳು ಈ ಹೆಸರಿನ ಮೇಲೆ ಇರಬಾರದು. ಎರಡೂ ಸಾರ್ವಜನಿಕರಿಗೆ ಸೇವೆ ಕೊಡುವ ಸಂಸ್ಥೆಗಳು. ಇಲ್ಲಿ ಯಾರ ಹೆಸರಿನ ಮೇಲೆ ಯಾರೂ ಲಾಭ ಪಾಡಯೋಕಾಗಲ್ಲ ಎಂದು ಹೇಳಿದ್ರು.

ಕಾನೂನು ಸಲಹೆ ಪಡೆಯಲು ತೀರ್ಮಾನ
ಇದು ಅನಾವಶ್ಯಕವಾಗಿ ಸೃಷ್ಟಿಯಾಗಿರುವ ಗೊಂದಲ. ಈ ಬಗ್ಗೆ ಅಧಿಕರಿಗಳಿಗೆ ತಿಳಿಸಿ ಅದನ್ನ ಪರಿಶೀಲಿಸಿ, ಮುಂದೆ ಮೇಲ್ಮನವಿ ಸಲ್ಲಿಸಬೇಕಾ ಎಂಬ ಬಗ್ಗೆ ಕಾನೂನು ಸಲಹೆ ಪಡೆದು ನಾವು ಮುಂದುವರೆಯುತ್ತೇವೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ರು.

ಇನ್ನು ಜಿಲ್ಲೆಯಲ್ಲಿಂದು ಲಕ್ಷ್ಮಣ‌ ಸವದಿ, ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಿದ್ರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಹಾಗೂ ತುರ್ತು ಆಮ್ಲಜನಕ ಸಹಾಯ ಘಟಕಕ್ಕೆ ಹಸಿರು ನಿಶಾನೆ ತೋರಿದರು.  ಸಂಸದ ರಾಜಾ ಅಮರೇಶ್ವರ ನಾಯಕ್ ಹಾಗೂ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಈ ವೇಳೆ ಉಪಸ್ಥಿತರಿದ್ದರು.

The post KSRTC ಪದ ಬಳಕೆ ವಿಚಾರ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಏನಂದ್ರು? appeared first on News First Kannada.

Source: newsfirstlive.com

Source link