ಬೆಂಗಳೂರು: KSRTC ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಲಗೇಜ್ಗಳಿಗೆ ಸಾಮಾನ್ಯವಾಗಿ ಅವರೇ ಜವಾಬ್ದಾರರು. ಆದರೇ ಇದೀಗ ಲಗೇಜ್ಗಳು ಮಾಯವಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ KSRTC ತಮ್ಮ ನಿರ್ವಾಹಕರಿಗೆ ವಿಶೇಷ ಸೂಚನೆಗಳನ್ನು ನೀಡಿದೆ.
KSRTCನಲ್ಲಿ ಸಾಮಾನ್ಯವಾಗಿ ಲಾಂಗ್ ಜರ್ನಿ ಇದ್ದರೇ ಪುನಃ ಪುನಃ ಟಿಕೇಟ್ ನೀಡುವ ಅವಶ್ಯಕತೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಲಗೇಜ್ಗಳು ಮಂಗ ಮಾಯವಾಗುತ್ತಿವೆ. ರಾತ್ರಿ ವೇಳೆ ಪ್ರಯಾಣ ನಡೆಸುವ ಪ್ರಯಾಣಿಕರ ಲಗೇಜ್ಗಳ್ಳತನದ ದೂರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ನಿರ್ವಾಹಕರಿಗೆ ಒಂದಷ್ಟು ನಿಯಮಗಳನ್ನು ರೂಪಿಸುವ ಮೂಲಕ ಲಗೇಜ್ ಕಳ್ಳತನವನ್ನು ನಿಯಂತ್ರಿಸುವ ಯೋಜನೆ ರೂಪಿಸಿದೆ.
KSRTC ಸಂಸ್ಥೆ ನಿರ್ವಾಹಕರಿಗೆ ನೀಡಿರುವ ಸೂಚನೆಗಳೇನು..?
- ನಿರ್ವಾಹಕರು ಟಿಕೆಟ್ ವಿತರಣೆ ಜೊತೆಗೆ ಪ್ರಯಾಣಿಕರ ಲಗೇಜ್ ಬಗ್ಗೆಯೂ ಕಾಳಜಿ ವಹಿಸಬೇಕು.
- ರಾತ್ರಿ ವೇಳೆ ಪ್ರಯಾಣಿಕರು ತಮ್ಮ ಬೆಲೆ ಬಾಳುವ ಲಗೇಜ್ಗಳ ಬಗ್ಗೆ ಗಮನ ಹರಿಸುವಂತೆ ಅನೌನ್ಸ್ ಮಾಡಬೇಕು.
- ದೂರದ ಮಾರ್ಗಗಳಿಗೆ ತೆರಳುವ ಬಸ್ ನಿರ್ವಾಹಕರು ಟಿಕೆಟ್ ವಿತರಣೆ ಬಳಿಕ ಲಗೇಜ್ಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು.
- ನಿರ್ದಿಷ್ಟ ಬಸ್ ನಿಲ್ದಾಣಕ್ಕಿಂತ ಮುಂಚಿನ ಸ್ಟಾಪ್ಗಳಲ್ಲಿಯೇ ಇಳಿದು ಹೋಗುವ ಪ್ರಯಾಣಿಕರು ಕೊಂಡೊಯ್ಯುವ ಲಗೇಜ್ಗಳ ಬಗ್ಗೆ ನಿಗಾವಹಿಸಬೇಕು.
ಈ ರೀತಿಯಲ್ಲಿ ನಿರ್ವಾಹಕರಿಗೆ ಸೂಚನೆಗಳನ್ನು ನೀಡುವ ಮೂಲಕ ಸಂಸ್ಥೆಯು ಲಗೇಜ್ ಕಳ್ಳತನವನ್ನು ನಿಗ್ರಹಿಸುವ ಕುರಿತು ಕಾರ್ಯಪ್ರವೃತ್ತವಾಗಿದೆ.