Lahore Blast: ಲಾಹೋರ್​ನ ಅನಾರ್ಕಲಿ ಬಜಾರ್​​ನಲ್ಲಿ ಬಾಂಬ್ ಸ್ಫೋಟ; 3 ಸಾವು, 22ಕ್ಕೂ ಹೆಚ್ಚು ಜನರಿಗೆ ಗಾಯ | At least 3 killed Over 22 injured in blast at Pakistan Lahore famous Anarkali bazar


Lahore Blast: ಲಾಹೋರ್​ನ ಅನಾರ್ಕಲಿ ಬಜಾರ್​​ನಲ್ಲಿ ಬಾಂಬ್ ಸ್ಫೋಟ; 3 ಸಾವು, 22ಕ್ಕೂ ಹೆಚ್ಚು ಜನರಿಗೆ ಗಾಯ

ಅನಾರ್ಕಲಿ ಬಜಾರ್​ನಲ್ಲಿ ನಡೆದ ಸ್ಫೋಟ

ಲಾಹೋರ್: ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಬಜಾರ್ (Anarkali Bazar) ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು 22ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬೈಕ್​ಗೆ ಜೋಡಿಸಲಾದ ಬಾಂಬ್ ಸ್ಫೋಟಗೊಂಡ (Bomb Blast) ಕಾರಣದಿಂದ ಈ ಸ್ಫೋಟ ಸಂಭವಿಸಿದೆ.

ಸಾವು-ನೋವುಗಳು ಮತ್ತು ಗಾಯಗೊಂಡವರ ಸಂಖ್ಯೆಯನ್ನು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ದೃಢಪಡಿಸಿದ್ದಾರೆ. ಈ ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ ಎಂದು ಲಾಹೋರ್ ಕಾರ್ಯಾಚರಣೆಯ ಡಿಐಜಿ ಡಾ. ಮೊಹಮ್ಮದ್ ಅಬಿದ್ ಖಾನ್ ಹೇಳಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.

ಇಂದು ನಡೆದ ಬಾಂಬ್ ಸ್ಫೋಟದಿಂದ ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಸ್ಫೋಟದ ಸ್ಥಳದ ಬಳಿ ನಿಲ್ಲಿಸಲಾಗಿದ್ದ ಹಲವಾರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *