laptops under 30000
ಬಹಳ ದಿನಗಳಿಂದ ನಮ್ಮದೇ ಆದ ಒಂದು ಲ್ಯಾಪ್ಟಾಪ್ (Laptop) ಖರೀದಿ ಮಾಡಬೇಕು, ಅದರಲ್ಲಿ ಒಳ್ಳೆಯ ವೈಶಿಷ್ಟ್ಯಗಳು ಇರಬೇಕು. ಹೆಚ್ಚು ಬ್ಯಾಟರಿ ಬ್ಯಾಕಪ್ ಒಳಗೊಂಡಿರಬೇಕು, ನಮ್ಮ ಕಚೇರಿ ಕೆಲಸಗಳಿಗೆ, ಮನೆಯಲ್ಲಿ ಮಕ್ಕಳಿಗೆ ಆನ್ಲೈನ್ ತರಗತಿಗಳಿಗೆ (Online Class), ಬಿಡುವಿನ ಸಮಯದಲ್ಲಿ ಗೇಮ್ ಆಡುವ ಸಲುವಾಗಿ, ಮೂವಿ ನೋಡಲು ಅನುಕೂಲಕರವಾದ ಒಂದು ಲ್ಯಾಪ್ಟಾಪ್ ಇರಬೇಕು ಎನ್ನುವ ಆಸೆ ಬಹಳಷ್ಟು ಜನರಿಗೆ ಇರುತ್ತದೆ. ಈಗಂತು ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್ಟಾಪ್ ತಯಾರಿಕೆ ಮಾಡುವ ಕಂಪನಿಗಳು ಕೂಡ ಜನರಿಗೆ ಕೈಗೆಟಕುವ ಬೆಲೆಗಳಲ್ಲಿ ತಮ್ಮ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಮಾರಾಟ ಮಾಡುತ್ತಿವೆ. ಹಾಗಾದ್ರೆ 30,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ (Laptops under 30000) ಲಭ್ಯವಾಗುವ ಬೆಸ್ಟ್ ಲ್ಯಾಪ್ಟಾಪ್ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.
ಹೆಚ್ಪಿ ಕ್ರೋಮ್ಬುಕ್ ಎಕ್ಸ್ 360:
ಒಳ್ಳೆಯ ಬ್ಯಾಟರಿ ಬ್ಯಾಕಪ್ ಜೊತೆಗೆ ಕ್ರೋಮ್ ಬುಕ್ x360 ಆಪ್ಷನ್ ಇರುವ ಲ್ಯಾಪ್ಟಾಪ್ ಇದಾಗಿದೆ. ಇದರಲ್ಲಿ 9 ಗಂಟೆಗಳ ಕಾಲ ಬ್ಯಾಟರಿ ಬ್ಯಾಕಪ್ ಸಿಗಲಿದೆ ಎಂದು ಕಂಪನಿ ಹೇಳುತ್ತದೆ. ಇದರ ಉತ್ತಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ 1.1 GHz ಬೇಸ್ ಫ್ರಿಕ್ವೆನ್ಸಿ ಒಳಗೊಂಡಿರುವ Intel Celeron N4020 ಪ್ರೋಸಸರ್ ನೀಡಲಾಗಿದೆ. ಉತ್ತಮ ಶಬ್ದದ ಗುಣಮಟ್ಟ ಹಾಗೂ ಗೂಗಲ್ ಅಸಿಸ್ಟೆಂಟ್ ಒಳಗೊಂಡಿರುವ ಲ್ಯಾಪ್ಟಾಪ್ ಇದಾಗಿದೆ. ಕೇವಲ ಹತ್ತು ಸೆಕೆಂಡ್ ಒಳಗಾಗಿ ಸ್ವಿಚ್ ಆನ್ ಆಗುವ ಮೂಲಕ ಇಡೀ ದಿನದ ಉತ್ತಮ ಹಾಗೂ ವೇಗದ ಕಾರ್ಯ ನಿರ್ವಹಣೆಯಲ್ಲಿ ಅನುಕೂಲವಾಗುವ ಹಾಗೆ ಈ ಲ್ಯಾಪ್ಟಾಪ್ ಕೆಲಸ ಮಾಡಲಿದೆ. ಇದರಲ್ಲಿ ಡಿಜಿಟಲ್ ಮೈಕ್ರೋಫೋನ್ ಜೊತೆಗೆ, HP Truevision HD camera ಕೂಡ ಇರಲಿದ್ದು, ವಿಡಿಯೋ ಕಾಲಿಂಗ್ ಗಾಗಿ ಹೆಚ್ಚು ಅನುಕೂಲವಾಗಿದೆ. ಸುಮಾರು 360 ಡಿಗ್ರಿವರೆಗೆ ಲ್ಯಾಪ್ಟಾಪ್ ತಿರುಗಿಸಬಹುದಾದ ವೈಶಿಷ್ಟ್ಯ ಇದರಲ್ಲಿದೆ. ಇದರ ಬೆಲೆ 29,999 ರೂ. ಆಗಿದೆ.
ಹೆಚ್ಪಿ ಕ್ರೋಮ್ಬುಕ್ 14 ಇಂಚು:
30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳಲ್ಲಿ ಹೆಚ್ಪಿ ಕ್ರೋಮ್ಬುಕ್ 14 ಇಂಚಿನ ಲ್ಯಾಪ್ಟಾಪ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಈ ಲ್ಯಾಪ್ಟಾಪ್ ಅಮೆಜಾನ್ನಲ್ಲಿ 27,990 ರೂ. ಗಳಿಗೆ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ 14 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿರುವ ತೆಳುವಾದ ಮತ್ತು ಹಗುರವಾದ ಲ್ಯಾಪ್ ಟಾಪ್ ಆಗಿದೆ. ಇನ್ನು ಈ ಲ್ಯಾಪ್ಟಾಪ್ ಇಂಟೆಲ್ ಸೆಲೆರಾನ್ ಎನ್ 4020 ಪ್ರೊಸೆಸರ್ ಹೊಂದಿದೆ. ಈ ಲ್ಯಾಪ್ಟಾಪ್ ನಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ವಿಸ್ತರಿಸಬಹುದಾದ 64ಜಿಬಿ ಇಂಟರ್ ಸ್ಟೋರೇಜ್ ಹೊಂದಿದೆ.
ಲೆನೊವೊ V15 AMD 15.6 ಇಂಚು:
ಲೆನೊವೊ V15 ಲ್ಯಾಪ್ಟಾಪ್ 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 15.6 ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ ಎಎಮ್ಡಿ ಅಥ್ಲಾನ್ ಗೋಲ್ಡ್ 3150 ಯು ಪ್ರೊಸೆಸರ್ ಹೊಂದಿದೆ. ಜೊತೆಗೆ ಈ ಲ್ಯಾಪ್ಟಾಪ್ 4GB RAM ಮತ್ತು 1TB HDD ಸ್ಟೋರೇಜ್ ಅನ್ನು ಹೊಂದಿದೆ. ಇದು 5.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಅಮೆಜಾನ್ನಲ್ಲಿ ಈ ಲ್ಯಾಪ್ಟಾಪ್ 29,990 ರೂ. ಗಳಿಗೆ ಲಭ್ಯವಿದೆ.
ಆಸುಸ್ ಕ್ರೋಮ್ ಬುಕ್ ಫ್ಲಿಪ್:
ಆಸುಸ್ ಕ್ರೋಮ್ ಬುಕ್ ಫ್ಲಿಪ್ ಲ್ಯಾಪ್ಟಾಪ್ ಕೂಡ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ ಆಗಿದೆ. ಇದು ಸೆಲೆರಾನ್ ಡ್ಯುಯಲ್-ಕೋರ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ 11.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಜೊತೆಗೆ ಮೈಕ್ರೋ SD ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದು ಅಮೆಜಾನ್ನಲ್ಲಿ 24,999 ರೂ. ಬೆಲೆಯಲ್ಲಿ ಲಭ್ಯವಿದೆ.
ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3:
ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 1366×768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 15.6-ಡಿಸ್ಪ್ಲೇಯನ್ನು ಹೊಂದಿದೆ. ಇದು ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ಅನ್ನು ಬಳಸುತ್ತದೆ. ಇನ್ನು ಈ ಲ್ಯಾಪ್ಟಾಪ್ 4GB RAM ಮತ್ತು 256GB SSD ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಜೊತೆಗೆ ಇದು 35Wh ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 8 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಅಮೆಜಾನ್ನಲ್ಲಿ ಈ ಲ್ಯಾಪ್ಟಾಪ್ 29,990 ರೂ. ಬೆಲೆಯಲ್ಲಿ ಲಭ್ಯವಿದೆ.
Flipkart – Amazon: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಹೊಸ ಮೇಳ: ಸ್ಮಾರ್ಟ್ಫೋನ್ಗಳಿಗೆ ಬಂಪರ್ ಆಫರ್
Infinix Zero 5G: ವ್ಯಾಲಂಟೈನ್ಸ್ ಡೇಯಂದು ರಿಲೀಸ್ ಆಗಿದೆ ಈ ವಿಶೇಷ ಸ್ಮಾರ್ಟ್ಫೋನ್: ಬೆಲೆ ಕೇವಲ …