Legends League Cricket: ಕ್ರಿಕೆಟ್ ಅಖಾಡಕ್ಕೆ ಮತ್ತೆ ಎಂಟ್ರಿಕೊಟ್ಟ ಬಿಜೆಪಿ ಸಂಸದ ಗೌತಮ್ ಗಂಭೀರ್..! | BJP MP Gautam Gambhir Confirms His Participation in Legends League Cricket Season 2


Gautam Gambhir: ಈ ವಿಷಯವನ್ನು ಗಂಭೀರ್ ಖಚಿತಪಡಿಸಿದ್ದು, ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಪ್ರವೇಶಿಸಲು ಕಾತರದಿಂದ ಕಾಯುತ್ತಿದ್ದೇನೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಗೌತಿ ಹೇಳಿದ್ದಾರೆ.

ಗೌತಮ್ ಗಂಭೀರ್ (Gautam Gambhir) ಕ್ರಿಕೆಟಿಗರಾಗಿ ಭಾರತ ತಂಡಕ್ಕೆ ಏಕಾಂಗಿಯಾಗಿ ಹಲವು ವಿಜಯಗಳನ್ನು ನೀಡಿದ್ದಾರೆ. 2007ರ ಟಿ20 ವಿಶ್ವಕಪ್ (T20 World Cup), 2011ರ ಏಕದಿನ ವಿಶ್ವಕಪ್ (2011 World Cup) ಫೈನಲ್‌ನಲ್ಲಿ ಅವರು ಆಡಿದ ಇನ್ನಿಂಗ್ಸ್‌ಗಳನ್ನು ಯಾರೂ ಮರೆಯುವಂತಿಲ್ಲ. ಈ ಎಡಗೈ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ಎರಡು ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ಗೌತಿ 2018 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ನಂತರ ರಾಜಕೀಯ ಪ್ರವೇಶಿಸಿ ಸಂಸದರಾಗಿ ಸಂಸತ್ ಪ್ರವೇಶಿಸಿದರು.

ಈಗ ಮತ್ತೊಮ್ಮೆ ಕ್ರಿಕೆಟ್ ಕ್ಷೇತ್ರಕ್ಕೆ ಗೌತಿ ಕಾಲಿಡಲಿದ್ದು, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಸೀಸನ್‌ನಲ್ಲಿ ಇಂಡಿಯಾ ಮಹರಾಜಸ್ ತಂಡದಲ್ಲಿ ಆಡಲಿದ್ದಾರೆ. ಈ ಲೀಗ್​ನಲ್ಲಿ ಮಾಜಿ ಭಾರತೀಯ ಕೋಚ್ ರವಿಶಾಸ್ತ್ರಿ ಕಮಿಷನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಶುಕ್ರವಾರ ಈ ವಿಷಯವನ್ನು ಗಂಭೀರ್ ಖಚಿತಪಡಿಸಿದ್ದು, ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಪ್ರವೇಶಿಸಲು ಕಾತರದಿಂದ ಕಾಯುತ್ತಿದ್ದೇನೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಗೌತಿ ಹೇಳಿದ್ದಾರೆ.

TV9 Kannada


Leave a Reply

Your email address will not be published.