Liam Livingstone: ಐಪಿಎಲ್ 2022 ಬೆಸ್ಟ್ ಕ್ಯಾಚ್ ಇದೇ ಆಗುತ್ತಾ?: ಲಿವಿಂಗ್​ಸ್ಟೋನ್ ಹಿಡಿದ ರೋಚಕ ಕ್ಯಾಚ್ ನೋಡಿ | Liam Livingstone that sent back Sunrisers Hyderabad batter Abhishek Sharma with Amazing catch


Liam Livingstone Catch, SRH vs PBKS: ಲಿಯಾಮ್ ಲಿವಿಂಗ್​ಸ್ಟೋನ್ (Liam Livingstone) ಮತ್ತೊಂದು ಸ್ಟನ್ನಿಂಗ್ ಕ್ಯಾಚ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು ನಡೆದಿದ್ದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ (SRH vs PBKS) ನಡುವಣ ಪಂದ್ಯದಲ್ಲಿ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುವುದು ಅದ್ಭುತ ಕ್ಯಾಚ್​ಗಳು. ಮೊನ್ನೆಯಷ್ಟೆ ಎವಿನ್ ಲೆವಿಸ್ ಹಿಡಿದ ರೋಚಕ ಕ್ಯಾಚ್ ಲಖನೌ ಸೂಪರ್ ಜೇಂಟ್ಸ್ ತಂಡವನ್ನು ಪ್ಲೇ ಆಫ್​​ಗೆ ಪ್ರವೇಶಿಸುವಂತೆ ಮಾಡಿತು. ಈ ಕ್ಯಾಚ್ ಮರೆಯುವ ಮುನ್ನವೇ ಲಿಯಾಮ್ ಲಿವಿಂಗ್​ಸ್ಟೋನ್ (Liam Livingstone) ಮತ್ತೊಂದು ಸ್ಟನ್ನಿಂಗ್ ಕ್ಯಾಚ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು ನಡೆದಿದ್ದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ (SRH vs PBKS) ನಡುವಣ ಪಂದ್ಯದಲ್ಲಿ. 11ನೇ ಓವರ್​ನ ಹರ್ಪ್ರೀತ್ ಬ್ರಾರ್ ಬೌಲಿಂಗ್​ನಲ್ಲಿ ಎಸ್​ಆರ್​ಹೆಚ್ ಬ್ಯಾಟರ್ ಅಭಿಷೇಕ್ ಶರ್ಮಾ ಸಿಕ್ಸ್​ಗೆಂದು ಚೆಂಡನ್ನು ಲಾಂಗ್ ಆನ್​ನಲ್ಲಿ ಅಟ್ಟಿದರು. ಇದನ್ನು ಗಮನಿಸಿದ ಲಿವಿಂಗ್​ಸ್ಟೋನ್ ಓಡಿ ಬಂದು ಸಿಕ್ಸ್​​ಗೆಂದು ಹೋಗುತ್ತಿದ್ದ ಚೆಂಡನ್ನು ಬೌಂಡರಿ ಲೈನ್ ಬಳಿಕ ಮೇಲಕ್ಕೆ ಜಿಗಿದು ಅದ್ಭುತವಾಗಿ ಹಿಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಪ್ರಿಯಮ್ ಗಾರ್ಗ್(4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮ(43) ತಂಡಕ್ಕೆ ಆಸರೆಯಾದರು. ಉಳಿದಂತೆ ರಾಹುಲ್ ತ್ರಿಪಾಠಿ(20), ಐಡೆನ್ ಮಾರ್ಕ್ರಂ(21) ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದರು. ನಂತರ ಬಂದ ನಿಕೋಲಸ್ ಪೂರನ್(5) ಕೂಡ ತಂಡಕ್ಕೆ ನೆರವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್(25) ಹಾಗೂ ರೊಮಾರಿಯೊ ಶೆಫರ್ಡ್ (26*) ಉಪಯುಕ್ತ ರನ್​ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಉಳಿದಂತೆ ಸುಚಿತ್(0), ಭುವನೇಶ್ವರ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಪರಿಣಾಮ ಹೈದ್ರಾಬಾದ್ 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಪಂಜಾಬ್ ಕಿಂಗ್ಸ್ ಪರ ಬೌಲರ್​ಗಳು ಸಂಘಟಿತ ಪ್ರದರ್ಶನ ನೀಡಿದರು. ಪ್ರಮುಖವಾಗಿ ಹರ್ಪ್ರೀತ್ ಬ್ರಾರ್(3/26) ಹಾಗೂ ನ್ಯಾಥನ್ ಎಲೀಸ್(3/40) ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರೆ, ಕಗೀಸೋ ರಬಾಡ 1 ವಿಕೆಟ್ ಪಡೆದರು.

IND vs SA: ಟಿ20 ಸರಣಿಗೆ ಆಯ್ಕೆಯಾದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ

158 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ 16ನೇ ಓವರ್‌ನ ಮೊದಲ ಎಸೆತದಲ್ಲೇ ದಡ ಸೇರಿತು. ಆರಂಭಿಕ ಶಿಖರ್‌ ಧವನ್‌ ಮತ್ತು ಲಿಯಮ್‌ ಲಿವಿಂಗ್‌ಸ್ಟೋನ್‌ ಅವರ ಉತ್ತಮ ಆಟದಿಂದಾಗಿ ಪಂಜಾಬ್‌ ತಂಡವು 15.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 160 ರನ್‌ ಗಳಿಸಿ ಗೆಲುವು ದಾಖಲಿಸಿತು. ಧವನ್‌ 32 ಎಸೆತಗಳಿಂದ 39 ರನ್‌ ಹೊಡೆದರೆ ಲಿವಿಂಗ್‌ಸ್ಟೋನ್‌ ಭರ್ಜರಿಯಾಗಿ ಆಡಿದರು. ಕೇವಲ 22 ಎಸೆತ ಎದುರಿಸಿದ ಅವರು 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ ನೆರವಿನಿಂದ 49 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈಗಾಗಲೇ ಪ್ಲೇ ಆಫ್ ಹಂತಕ್ಕೆ 4 ತಂಡಗಳು ಪ್ರವೇಶ ಪಡೆದಿರುವುದರಿಂದ ರವಿವಾರದ ಪಂಜಾಬ್‌-ಹೈದರಾಬಾದ್‌ ನಡುವಿನ ಮುಖಾಮುಖಿ ಕೇವಲ ಔಪಚಾರಿಕ ಪಂದ್ಯವಾಗಿತ್ತಷ್ಟೆ.

TV9 Kannada


Leave a Reply

Your email address will not be published. Required fields are marked *