Liger Movie: ಅಹಮದಾಬಾದ್​ನಲ್ಲಿ ವಿಜಯ್​ ದೇವರಕೊಂಡ ನೋಡಲು ಜನಸಾಗರ; ಜೋರಾಗಿದೆ ‘ಲೈಗರ್​’ ಹವಾ | Ananya Panday and Vijay Deverakonda visit Ahmedabad to promote Liger Movie


Ananya Panday | Vijay Deverakonda: ಅಹಮದಾಬಾದ್​ನಲ್ಲಿ ವಿಜಯ್​ ದೇವರಕೊಂಡ ಸಲುವಾಗಿ ಜನ ಸಾಗರವೇ ಹರಿದುಬಂದಿದೆ. ಅಭಿಮಾನಿಗಳು ತೋರುತ್ತಿರುವ ಈ ಪರಿ ಪ್ರೀತಿ ಕಂಡು ‘ಲೈಗರ್’ ತಂಡದವರು ಖುಷಿ ಆಗಿದ್ದಾರೆ.

Liger Movie: ಅಹಮದಾಬಾದ್​ನಲ್ಲಿ ವಿಜಯ್​ ದೇವರಕೊಂಡ ನೋಡಲು ಜನಸಾಗರ; ಜೋರಾಗಿದೆ ‘ಲೈಗರ್​’ ಹವಾ

ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ

ಖ್ಯಾತ ನಟ ವಿಜಯ್​ ದೇವರಕೊಂಡ (Vijay Devarakonda) ಅಭಿನಯದ ‘ಲೈಗರ್​’ ಸಿನಿಮಾ ಬಿಡುಗಡೆಗೂ ಮುನ್ನವೇ ಸಖತ್​ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಎಂಬುದು ವಿಶೇಷ. ಈ ಹಿಂದೆ ವಿಜಯ್ ದೇವರಕೊಂಡ ನಟಿಸಿದ್ದ ‘ಡಿಯರ್​ ಕಾಮ್ರೇಡ್​’ ಚಿತ್ರ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ರಿಲೀಸ್​ ಆಗಿತ್ತಾದರೂ ಈ ಮಟ್ಟಿಗೆ ಹವಾ ಮಾಡಿರಲಿಲ್ಲ. ಆದರೆ ಈಗ ವಿಜಯ್​ ದೇವರಕೊಂಡ ಅವರು ‘ಲೈಗರ್​’ (Liger Movie) ಚಿತ್ರದ ಮೂಲಕ ನೇರವಾಗಿ ಬಾಲಿವುಡ್​ ಗಲ್ಲಾಪೆಟ್ಟಿಗೆ ಮೇಲೆ ಕಣ್ಣಿಟ್ಟಿದ್ದಾರೆ. ದೇಶದ ವಿವಿಧ ನಗರಗಳಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ. ಹೋದಲ್ಲೆಲ್ಲಾ ಅವರಿಗೆ ಜನರಿಂದ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆ. ಚಿತ್ರತಂಡದ ಜೊತೆ ಅವರು ಅಹಮದಾಬಾದ್​ಗೆ (Ahmedabad) ಭೇಟಿ ನೀಡಿದ್ದಾರೆ.

ಯುವ ಜನತೆಗೆ ವಿಜಯ್​ ದೇವರಕೊಂಡ ಎಂದರೆ ಸಖತ್​ ಇಷ್ಟ. ಹಾಗಾಗಿ ಅವರನ್ನು ನೇರವಾಗಿ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ಫ್ಯಾನ್ಸ್​ ಮೀಟ್​ ಮಾಡಿದಾಗ ಜನರು ಕಿಕ್ಕಿರಿದು ಸೇರಿದ್ದರು. ಈಗ ಅಹಮದಾಬಾದ್​ನಲ್ಲೂ ಅದೇ ರೀತಿ ಜನ ಸಾಗರವೇ ಹರಿದುಬಂದಿದೆ. ಅಭಿಮಾನಿಗಳು ತೋರುತ್ತಿರುವ ಈ ಪರಿ ಪ್ರೀತಿ ಕಂಡು ವಿಜಯ್​ ದೇವರಕೊಂಡ ಫಿದಾ ಆಗಿದ್ದಾರೆ.

‘ಲೈಗರ್​’ ಸಿನಿಮಾಗೆ ಪುರಿ ಜಗನ್ನಾಥ್​ ನಿರ್ದೇಶನ ಮಾಡಿದ್ದಾರೆ. ಆ ಕಾರಣದಿಂದಲೂ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಮಾಸ್​ ಸಿನಿಮಾಗಳನ್ನು ಮಾಡುವಲ್ಲಿ ಅವರು ಎತ್ತಿದ ಕೈ. ಈ ಚಿತ್ರದಿಂದ ವಿಜಯ್​ ದೇವರಕೊಂಡ ಅವರಿಗೆ ದೊಡ್ಡ ಯಶಸ್ಸು ಸಿಗುವ ಸಾಧ್ಯತೆ ದಟ್ಟವಾಗಿದೆ. ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಆಗಸ್ಟ್​ 25ರಂದು ವಿಶ್ವಾದ್ಯಂತ ‘ಲೈಗರ್​’ ಬಿಡುಗಡೆ ಆಗಲಿದೆ.

ವಿಶ್ವ ಪ್ರಸಿದ್ಧ ಬಾಕ್ಸರ್​ ಮೈಕ್​ ಟೈಸನ್​ ಅವರು ‘ಲೈಗರ್​’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ವಿಜಯ್​ ದೇವರಕೊಂಡ ಜೊತೆ ಅವರು ಬಾಕ್ಸಿಂಗ್​ ರಿಂಗ್​ನಲ್ಲಿ ಕಾದಾಡಲಿದ್ದಾರೆ. ಈ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ನೋಡುವ ಕಾತರ ಸಿನಿಪ್ರಿಯರಲ್ಲಿ ಮೂಡಿದೆ. ಕರಣ್​ ಜೋಹರ್​, ಚಾರ್ಮಿ ಕೌರ್​, ಪುರಿ ಜಗನ್ನಾಥ್​ ಮುಂತಾದವರು ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಡುಗಳು ಹಿಟ್​ ಆಗಿವೆ. ಟ್ರೇಲರ್​ ಕೂಡ ಧೂಳೆಬ್ಬಿಸಿದೆ. ಮೊದಲ ದಿನ ಈ ಸಿನಿಮಾಗೆ ಭರ್ಜರಿ ಓಪನಿಂಗ್​ ಸಿಗಲಿದೆ.

TV9 Kannada


Leave a Reply

Your email address will not be published. Required fields are marked *