Commercial Gas Cylinder price in Bangalore: ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಸೋಮವಾರದಿಂದ (ಆಗಸ್ಟ್ 1) ₹ 36 ಕಡಿತವಾಗಿದೆ.

ಪ್ರಾತಿನಿಧಿಕ ಚಿತ್ರ
ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ (LPG Commercial Cylinder Price) ಬೆಲೆಯಲ್ಲಿ ಸೋಮವಾರದಿಂದ (ಆಗಸ್ಟ್ 1) ₹ 36 ಕಡಿತವಾಗಿದೆ. ಬೆಂಗಳೂರಿನಲ್ಲಿ ದರ ಪರಿಷ್ಕರಣೆಗೆ ಮೊದಲು 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯು ₹ 2,100ಕ್ಕೆ ಮಾರಾಟವಾಗುತ್ತಿತ್ತು. ಇದೀಗ ₹ 36ರ ದರ ಕಡಿತದ ನಂತರ ₹ 2,063.50ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು 1,976, ಕೊಲ್ಕತ್ತಾದಲ್ಲಿ ₹ 2,095.50, ಮುಂಬೈನಲ್ಲಿ ₹ 1,936.50 ಮತ್ತು ಚೆನ್ನೈನಲ್ಲಿ ₹ 2,141ಕ್ಕೆ ಮಾರಾಟವಾಗಲಿದೆ.
(ಮತ್ತಷ್ಟು ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ)