LPG cylinders: ಇನ್ನು ಕ್ಯುಆರ್​ ಕೋಡ್​ನೊಂದಿಗೆ ಬರಲಿದೆ ಎಲ್​ಪಿಜಿ ಸಿಲಿಂಡರ್! ಪ್ರಯೋಜನಗಳು ಹಲವು – Domestic LPG cylinders to come with QR codes soon said Union petroleum minister Hardeep Singh Puri in Uttar Pradesh Latest business news in Kannada


ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಿಲಿಂಡರ್ ನಿರ್ವಹಣೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

LPG cylinders: ಇನ್ನು ಕ್ಯುಆರ್​ ಕೋಡ್​ನೊಂದಿಗೆ ಬರಲಿದೆ ಎಲ್​ಪಿಜಿ ಸಿಲಿಂಡರ್! ಪ್ರಯೋಜನಗಳು ಹಲವು

ಕ್ಯುಆರ್​ ಕೋಡ್​ನೊಂದಿಗೆ ಎಲ್​ಪಿಜಿ ಸಿಲಿಂಡರ್

ನವದೆಹಲಿ: ಶೀಘ್ರದಲ್ಲೇ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​​ಗಳು (LPG) ಕ್ಯುಆರ್ ಕೋಡ್​ನೊಂದಿಗೆ ಬರಲಿವೆ. ಇದರಿಂದ ಅಡುಗೆ ಅನಿಲ ಸಿಲಿಂಡರ್​ಗಳ ನಿಯಂತ್ರಣಕ್ಕೆ ನೆರವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ (Hardeep Singh Puri) ಸಿಂಗ್ ಪುರಿ ತಿಳಿಸಿದ್ದಾರೆ. ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಿಲಿಂಡರ್ ನಿರ್ವಹಣೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

‘ಟ್ರೇಸಿಂಗ್​ ಇನ್ನು ಸುಲಭ. ಇದೊಂದು ಗಮನಾರ್ಹ ಆವಿಷ್ಕಾರ. ಹೊಸ ಸಿಲಿಂಡರ್​ಗಳಲ್ಲಿ ಕ್ಯುಆರ್ ಕೋಡ್ ಅನ್ನು ವೆಲ್ಡ್ ಮಾಡಿ ಅಂಟಿಸಲಾಗುತ್ತದೆ. ಅದನ್ನು ಆ್ಯಕ್ಟಿವೇಟ್ ಮಾಡಿದ ಕೂಡಲೇ ಅದು ಅನೇಕ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿದೆ. ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಮತ್ತು ಗ್ಯಾಸ್ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಗೆ ಇದು ನೆರವಾಗಲಿದೆ’ ಎಂದು ವಿಡಿಯೊ ಸಹಿತ ಸಚಿವರು ಟ್ವೀಟ್ ಮಾಡಿದ್ದಾರೆ.

ಸದ್ಯದಲ್ಲೇ ಮಾರುಕಟ್ಟೆಗೆ

ಉತ್ತರ ಪ್ರದೇಶದಲ್ಲಿ ‘ವಿಶ್ವ ಎಲ್​​ಪಿಜಿ ವಾರ 2022’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಪುರಿ ಅಧಿಕಾರಿಗಳ ಜತೆ ಕ್ಯುಆರ್ ಕೋಡ್ ತಂತ್ರಜ್ಞಾನ ವಿಚಾರವಾಗಿ ಚರ್ಚಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ವಸ್ತುವಿನ ಕುರಿತ ವಿವರಗಳು ಹಾಗೂ ವಿಸ್ತೃತ ಮಾಹಿತಿಯನ್ನೂ ಕ್ಯುಆರ್ ಕೋಡ್ (Quick Response) ಮೂಲಕ ತಿಳಿಯಬಹುದಾಗಿದೆ.

TV9 Kannada


Leave a Reply

Your email address will not be published.