LSG vs RCB: ಇಂದಿನ ಪಂದ್ಯದಲ್ಲಿ ಏನೇ ಮಾಡಿದ್ರು ಹೊಸ ದಾಖಲೆ..! | IPL 2022, LSG vs RCB: Battle of equals as Lucknow Super Giants take on Royal Challengers Bangalore


LSG vs RCB: ಇಂದಿನ ಪಂದ್ಯದಲ್ಲಿ ಏನೇ ಮಾಡಿದ್ರು ಹೊಸ ದಾಖಲೆ..!

LSG vs RCB

IPL 2022: ಐಪಿಎಲ್​ನ 31ನೇ ಪಂದ್ಯದಲ್ಲಿ ಆರ್​ಸಿಬಿ -ಲಕ್ನೋ ಸೂಪರ್ ಜೈಂಟ್ಸ್ (RCB vs LSG) ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯವು ಉಭಯ ತಂಡಗಳ ಮೊದಲ ಮುಖಾಮುಖಿ. ಹೀಗಾಗಿ ಈ ಪಂದ್ಯದಲ್ಲಿ ಏನೇ ಮಾಡಿದರೂ ಅದು ದಾಖಲೆಯಾಗಲಿದೆ. ಅಂದರೆ ಆರ್​ಸಿಬಿ ವಿರುದ್ದ ಲಕ್ನೋ ತಂಡದ ಯಾರಾದರೂ ಶತಕ ಬಾರಿಸಿದ್ರೆ, ಆರ್​ಸಿಬಿ ವಿರುದ್ದ ಮೊದಲ ಶತಕ ಬಾರಿಸಿದ ಲಕ್ನೋ ಆಟಗಾರ ಎಂಬ ದಾಖಲೆ ಅವರ ಪಾಲಾಗಲಿದೆ. ಹಾಗೆಯೇ ಆರ್​ಸಿಬಿ ತಂಡದ ಯಾವುದಾದರೂ ಆಟಗಾರರು ವಿಶೇಷ ಸಾಧನೆ ಮಾಡಿದ್ರೆ, ಅಂದರೆ ಶತಕ ಬಾರಿಸಿದ್ರೆ ಅಥವಾ ಹ್ಯಾಟ್ರಿಕ್ ವಿಕೆಟ್ ಪಡೆದರೆ ಲಕ್ನೋ ವಿರುದ್ದ ಈ ದಾಖಲೆ ಬರೆದ ಮೊದಲ ಆರ್​ಸಿಬಿ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇರುವುದರಿಂದ ಒಂದಷ್ಟು ದಾಖಲೆಗಳನ್ನು ಎದುರು ನೋಡಬಬಹುದು. ಏಕೆಂದರೆ ಲಕ್ನೋ ತಂಡದ ಸೂಪರ್ ಜೋಡಿಯಾಗಿ ಕ್ವಿಂಟನ್ ಡಿಕಾಕ್ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿ ಐಪಿಎಲ್​ನ ಬೆಸ್ಟ್ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ಆರ್​ಸಿಬಿ ವಿರುದ್ದ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್ ಬ್ಯಾಟ್​ನಿಂದ ಒಂದಷ್ಟು ದಾಖಲೆಗಳನ್ನು ನಿರೀಕ್ಷಿಸಬಹುದು.

ಮತ್ತೊಂದೆಡೆ ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಲಕ್ನೋ ವಿರುದ್ದ ಕೂಡ ಈ ಆಟಗಾರರು ಅಬ್ಬರಿಸುವ ಸಾಧ್ಯತೆಯಿದೆ. ಈ ವೇಳೆ ಒಂದಷ್ಟು ದಾಖಲೆಗಳು ನಿರ್ಮಾಣವಾದರೂ ಅಚ್ಚರಿಪಡಬೇಕಿಲ್ಲ. ಇನ್ನು ಬೌಲಿಂಗ್ ವಿಭಾಗದಲ್ಲಿ ನೋಡುವುದಾದರೆ ಕಳೆದ ಸೀಸನ್​ನಲ್ಲಿನ ಪರ್ಪಲ್ ಕ್ಯಾಪ್ ವಿನ್ನರ್ ಹರ್ಷಲ್ ಪಟೇಲ್ ಆರ್​ಸಿಬಿ ತಂಡದಲ್ಲಿದ್ದರೆ, 2ನೇ ಅತೀ ಹೆಚ್ಚು ವಿಕೆಟ್ ಪಡೆದ ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್​ ತಂಡದಲ್ಲಿದ್ದಾರೆ. ಹಾಗಾಗಿ ಇವರಿಂದ ಕೂಡ ಉತ್ತಮ ಪ್ರದರ್ಶನವನ್ನು ಎದುರು ನೋಡಬಹುದು.

ಹೀಗಾಗಿ ಈ ಪಂದ್ಯದಲ್ಲಿ ಮೂಡಿಬರುವ ಸಣ್ಣ ಪುಟ್ಟ ದಾಖಲೆಗಳು ಕೂಡ ವಿಶೇಷವಾಗಿರಲಿದೆ. ಅದರಂತೆ ಲಕ್ನೋ ವಿರುದ್ದ ಆರ್​ಸಿಬಿ ಪರ ಮೊದಲ ಅರ್ಧಶತಕ ಅಥವಾ ಶತಕ ಬಾರಿಸುವ ಆಟಗಾರ ಯಾರಾಗಲಿದ್ದಾರೆ, ಹಾಗೆಯೇ ಲಕ್ನೋ ತಂಡದಿಂದ ಯಾರು ಮಿಂಚಲಿದ್ದಾರೆ ಎಂದು ಕಾದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಲಕ್ನೋ ಸೂಪರ್ ಜೈಂಟ್ಸ್ (LSG):
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ಆ್ಯಂಡ್ರ್ಯೂ ಟೈ, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಬದೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್.

TV9 Kannada


Leave a Reply

Your email address will not be published.