Mallika Sherawat: ನಟಿ ಹಾಟ್ ಎಂದು ತೋರಿಸಲು ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯದ ವಿಚಿತ್ರ ಐಡಿಯಾ ಹೇಳಿದ್ದ ನಿರ್ಮಾಪಕ | Mallika Sherawat says once a producer wanted to heat Chapatis on her waist for a song


Mallika Sherawat: ನಟಿ ಹಾಟ್ ಎಂದು ತೋರಿಸಲು ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯದ ವಿಚಿತ್ರ ಐಡಿಯಾ ಹೇಳಿದ್ದ ನಿರ್ಮಾಪಕ

ಮಲ್ಲಿಕಾ ಶೆರಾವತ್

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಹೇಳಿಕೆಯೊಂದರಿಂದ ಎಲ್ಲರ ಹುಬ್ಬೇರಿಸಿದ್ದಾರೆ. ‘ದಿ ಲವ್ ಲಾಫ್ ಲೈವ್ ಶೋ’ನಲ್ಲಿ ಭಾಗಿಯಾಗಿದ್ದ ಮಲ್ಲಿಕಾ, ತಮಗೆ ಡಾನ್ಸ್ ಒಂದರಲ್ಲಿ ನೃತ್ಯ ಮಾಡಲು ಬಂದಿದ್ದ ವಿಚಿತ್ರ ಆಹ್ವಾನವೊಂದರ ಕುರಿತು ಮಾತನಾಡಿದ್ದಾರೆ. ಒಮ್ಮೆ ಅವರ ಬಳಿ  ನಿರ್ಮಾಪಕರೊಬ್ಬರು ಬಂದು ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯದ ಕುರಿತು ಹೇಳಿದ್ದರಂತೆ. ಆದರೆ ಅದನ್ನು ತಾನು ಒಪ್ಪಲಿಲ್ಲ. ಅದಾಗ್ಯೂ ಅವರ ಐಡಿಯಾ ಚೆನ್ನಾಗಿತ್ತು ಎಂದು ಮಲ್ಲಿಕಾ ಹೇಳಿದ್ದಾರೆ. ಅಲ್ಲದೇ ಭಾರತದ ಚಿತ್ರಗಳಲ್ಲಿ ‘ಮಾದಕತೆ’ಯನ್ನು ತನಗಿನ್ನೂ ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಶೋನಲ್ಲಿ ಮಾತನಾಡುತ್ತಾ ಮಲ್ಲಿಕಾ ಶೆರಾವತ್, ನಿರ್ಮಾಪಕರೊಬ್ಬರು ಅವರ ಬಳಿ ಬಂದ ಸಂದರ್ಭವನ್ನು ವಿವರಿಸಿದ್ದಾರೆ. ಆ ನಿರ್ಮಾಪಕರ ಆಲೋಚನೆಯ ಪ್ರಕಾರ, ‘‘ಹಾಡು ಬಹಳ ಹಾಟ್ ಆಗಿ ಮೂಡಿಬರಬೇಕು. ಆದರೆ ನೀವು ಹಾಟ್ ಆಗಿದ್ದೀರಿ ಎಂದು ನೋಡುಗರಿಗೆ ಹೇಗೆ ಗೊತ್ತಾಗಬೇಕು? ಅದಕ್ಕೆ ನಿಮ್ಮ ಸೊಂಟದ (ನಡು) ಮೇಲೆ ಚಪಾತಿಯನ್ನು ಒಬ್ಬ ಬೇಯಿಸುತ್ತಾನೆ. ಆಗ ಜನರಿಗೆ ನೀವು ಎಷ್ಟು ಹಾಟ್ ಆಗಿದ್ದೀರೆಂದು ತಿಳಿಯುತ್ತದೆ’’ ಎಂದು ಹೇಳಿದ್ದರಂತೆ. ಬಹಳ ವಿಚಿತ್ರವಾದ ಯೋಚನೆಯದು ಎಂದು ಮಲ್ಲಿಕಾ ನಕ್ಕಿದ್ದಾರೆ.

ನಿರ್ಮಾಪಕರ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ್ದನ್ನೂ ಹೇಳಿಕೊಂಡಿರುವ ಮಲ್ಲಿಕಾ, ‘‘ಇಲ್ಲ, ನಾನು ಅಂಥದ್ದರಲ್ಲಿ ಅಭಿನಯಿಸುವುದಿಲ್ಲ’ ಎಂದು ಹೇಳಿದರಂತೆ. ಆದರೆ ಆ ನಿರ್ಮಾಪಕರ ಯೋಚನೆ ಬಹಳ ಸೃಜನಶೀಲವಾಗಿತ್ತು ಮತ್ತು ಹೊಸ ರೀತಿಯದ್ದಾಗಿತ್ತು ಎಂದೂ ಮಲ್ಲಿಕಾ ಹೇಳಿದ್ದಾರೆ. ಇದೇ ವೇಳೆ ಅವರು, ಭಾರತದಲ್ಲಿ ಮಾದಕತೆ ಎಂಬುದಕ್ಕೆ ಜನ ಯಾವುದನ್ನು ಮಾನದಂಡವಾಗಿಡುತ್ತಾರೆ ಎಂಬುದು ತನಗಿನ್ನೂ ಅರ್ಥವಾಗಿಲ್ಲ ಎಂದಿದ್ದಾರೆ. ‘ಮಹಿಳೆಯರ ಮಾದಕತೆಯ ಕುರಿತು ಬಹಳ ವಿಚಿತ್ರ ಯೋಚನೆಗಳನ್ನು ಜನರು ಹೊಂದಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಲು ತನಗೆ ಸಾಧ್ಯವಾಗಿಲ್ಲ. ವೃತ್ತಿ ಜೀವನದ ಆರಂಭಕ್ಕಿಂತ ಈಗ ಸ್ವಲ್ಪ ಹೆಚ್ಚು ತಿಳುವಳಿಕೆ ಬಂದಿದೆ ಎನ್ನಬಹುದಷ್ಟೇ’’ ಎಂದು ಮಲ್ಲಿಕಾ ಹೇಳಿದ್ದಾರೆ.

‘ಖ್ವಾಹಿಷ್’, ‘ಮರ್ಡರ್’ ಮೊದಲಾದ ಚಿತ್ರಗಳ ಮುಖಾಂತರ ಮಲ್ಲಿಕಾ ಮಾದಕ ನಟಿಯಾಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದರು. ಈ ಹಣೆಪಟ್ಟಿಯಿಂದಾಗಿ ಸೆಟ್​ಗಳಲ್ಲಿ ಕಹಿ ಅನುಭವಗಳೂ ಆಗಿವೆ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ಮಲ್ಲಿಕಾರ ವೃತ್ತಿ ಜೀವನದ ವಿಚಾರಕ್ಕೆ ಬಂದರೆ, ಎಂಎಕ್ಸ್ ಪ್ಲೇಯರ್​ನ ಸೀರೀಸ್ ಒಂದರಲ್ಲಿ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:

‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ

‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

TV9 Kannada


Leave a Reply

Your email address will not be published. Required fields are marked *