Manappuram Finance: ಮಣಪ್ಪುರಂ ಫೈನಾನ್ಸ್​ಗೆ 17.6 ಲಕ್ಷ ರೂಪಾಯಿ ದಂಡ ವಿಧಿಸಿದ ಆರ್​ಬಿಐ | Reserve Bank Of India Imposes Monetary Penalty Of Rs 17.6 Lakhs To Manappuram Finance


Manappuram Finance: ಮಣಪ್ಪುರಂ ಫೈನಾನ್ಸ್​ಗೆ 17.6 ಲಕ್ಷ ರೂಪಾಯಿ ದಂಡ ವಿಧಿಸಿದ ಆರ್​ಬಿಐ

ಸಾಂದರ್ಭಿಕ ಚಿತ್ರ

ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಏಪ್ರಿಲ್ 18ರ ಸೋಮವಾರದಂದು ಮಣಪ್ಪುರಂ ಫೈನಾನ್ಸ್‌ಗೆ 17.6 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಪ್ರಿಪೇಯ್ಡ್ ಪಾವತಿ ಉಪಕರಣಗಳ ವಿತರಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದಂತೆ (PPI) ಹಾಗೂ ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ನಿಯಮಗಳು ಉಲ್ಲಂಘನೆಯಾಗಿದೆ ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ. “ಪಾವತಿ ಮತ್ತು ಸೆಟ್ಲ್‌ಮೆಂಟ್ ಸಿಸ್ಟಮ್ಸ್ ಆಕ್ಟ್, 2007ರ ಸೆಕ್ಷನ್ 30ರ ಅಡಿಯಲ್ಲಿ ಆರ್‌ಬಿಐಗೆ ಇರುವ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು ದಂಡವನ್ನು ವಿಧಿಸಲಾಗಿದೆ,” ಎಂದು ಕೇಂದ್ರ ಬ್ಯಾಂಕ್​ನಿಂದ ಸೇರಿಸಲಾಗಿದೆ.

ಈ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆಯೇ ವಿನಾ ಮತ್ತು ತನ್ನ ಗ್ರಾಹಕರೊಂದಿಗೆ ಮಣಪ್ಪುರಂ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದ ಮೇಲೆ ತೆಗೆದುಕೊಂಡ ಕ್ರಮ ಅಲ್ಲ ಎಂದು ಆರ್‌ಬಿಐ ಹೇಳಿದೆ. KYC ಮತ್ತು ಸಣ್ಣ PPI ಅವಶ್ಯಕತೆಗಳ ಕುರಿತು ಆರ್​ಬಿಐ ಹೊರಡಿಸಿದ ನಿರ್ದೇಶನಗಳನ್ನು ಮಣಪ್ಪುರಂ ಫೈನಾನ್ಸ್ ಅನುಸರಿಸುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ಆರ್​ಬಿಐ ಹೇಳಿದೆ. ಅದರಂತೆ, ಕೇಂದ್ರ ಬ್ಯಾಂಕ್​ನ ನಿರ್ದೇಶನಗಳನ್ನು ಅನುಸರಿಸದಿದ್ದ ಕಾರಣಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ಸಮಜಾಯಿಷಿಯನ್ನು ನೀಡಲು ಸಲಹೆ ನೀಡಿ, ನೋಟಿಸ್ ಕೊಡಲಾಗಿತ್ತು.

ಮಣಪ್ಪುರಂ ಫೈನಾನ್ಸ್ ಪ್ರತಿಕ್ರಿಯೆಯನ್ನು ಪರಿಗಣಿಸಿ ಮತ್ತು ಅದನ್ನು ವೈಯಕ್ತಿಕ ವಿಚಾರಣೆ ನೀಡಿದ ನಂತರ, ಆರ್​ಬಿಐ ನಿರ್ದೇಶನಗಳನ್ನು ಅನುಸರಿಸದಿರುವ ಮೇಲಿನ ಆರೋಪವು ದೃಢೀಕರಿಸಲ್ಪಟ್ಟಿದೆ ಮತ್ತು ವಿತ್ತೀಯ ದಂಡವನ್ನು ವಿಧಿಸಲು ಸಮರ್ಥವಾಗಿದೆ ಎಂದು ತೀರ್ಮಾನಿಸಲಾಗಿದೆ ಎಂದು ಆರ್​ಬಿಐ ಹೇಳಿದೆ.

TV9 Kannada


Leave a Reply

Your email address will not be published. Required fields are marked *