ಮಾಜಿ ಕೈ ಶಾಸಕ ಪಿಎಂ ನರೇಂದ್ರಸ್ವಾಮಿ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಜೆಡಿಎಸ್ ಕಾರ್ಯಕರ್ತರು ಕೆಎಸ್ಆರ್ಟಿಸಿ ಬಸ್ ಚಾಲನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತರಾವ್ ವೃತ್ತದಲ್ಲಿ ನಡೆದಿದೆ.

ಕೆಎಸ್ಆರ್ಟಿಸಿ ಚಾಲಕನಿಗೆ ಥಳಿಸಿದ ಜೆಡಿಎಸ್ ಕಾರ್ಯಕರ್ತರು
ಮಂಡ್ಯ: ಮಾಜಿ ಕೈ ಶಾಸಕ ಪಿಎಂ ನರೇಂದ್ರಸ್ವಾಮಿ (Narendraswamy) ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಜೆಡಿಎಸ್ ಕಾರ್ಯಕರ್ತರು ಕೆಎಸ್ಆರ್ಟಿಸಿ ಬಸ್ ಚಾಲನ ಮೇಲೆ ಹಲ್ಲೆ (JDS Workers Assault On KSRTC Bus Driver) ನಡೆಸಿದ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತರಾವ್ ವೃತ್ತದಲ್ಲಿ ನಡೆದಿದೆ. ಜೆಡಿಎಸ್ ದ ವಿರುದ್ದ ಪುಟಗೋಸಿ ಎಂಬ ಪದ ಬಳಕೆ ಮಾಡಿದ್ದ ಮಾಜಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಆನಂತರಾವ್ ವೃತ್ತದ ಬಳಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಮಾನವ ಸರಪಳಿ ನಡೆಸುವ ಮೂಲಕ ರಸ್ತೆ ತಡೆ ನಡೆಸಲಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಅಸಮಾಧಾನಗೊಂಡಿದ್ದ ಕೆಎಸ್ಆರ್ಟಿಸಿ ಪ್ರಯಾಣಿಕನೊಬ್ಬ ಪ್ರತಿಭಟನೆಯನ್ನು (JDS Protest In Mandya) ನಿಂದಿಸಿದ್ದಾನೆ. ಪ್ರಯಾಣಿಕನು ತಮ್ಮ ಪ್ರತಿಭಟನೆಯನ್ನು ನಿಂದಿಸಿದ್ದಕ್ಕೆ ಆಕ್ರೋಶಗೊಂಡ ಕೆಲವು ಕಾರ್ಯಕರ್ತರು ಸಾರಿಗೆ ಬಸ್ಗೆ ಕೈಯಿಂದ ಹೊಡೆಯಲು ಪ್ರಾರಂಭಿಸಿದ್ದಾರೆ. ಇದನ್ನು ಪ್ರಶ್ನಿಸಿದ ಚಾಲಕ ಬಸ್ಗೆ ಹೊಡೆಯದಂತೆ ಸೂಚಿಸಿದ್ದಾರೆ. ಈ ವೇಳೆ ಉದ್ರಿಕ್ತಗೊಂಡ ಗುಂಪು ಚಾಲಕನನ್ನು ಬಸ್ನಿಂದ ಕೆಳಗೆಳೆದು ಹಲ್ಲೆ ನಡೆಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಟೀಕಾ ಪ್ರಹಾರ, ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಕೆಲವರು ನಾಲಿಗೆ ಹರಿಬಿಡುತ್ತಿದ್ದಾರೆ. ಅದರಂತೆ ಜೆಡಿಎಸ್ ಪಕ್ಷನ್ನು ಟೀಕಿಸುವ ಭರದಲ್ಲಿ ಅದೊಂದು ಪುಟ್ಕೋಸಿ ಪಕ್ಷ ಎಂದು ಕಾಂಗ್ರೆಸ್ ಮಾಜಿ ಶಾಸಕ ನರೇಂದ್ರಸ್ವಾಮಿ ನಾಲಿಗೆ ಹರಿಬಿಟ್ಟಿದ್ದರು.