ಅಪರಿಚಿತ ಮಹಿಳೆಯರಿಬ್ಬರ ಮೃತದೇಹ ಪತ್ತೆ ಪ್ರಕರಣ ಹಿನ್ನೆಲೆ ಶವಗುರುತು ಪತ್ತೆ ಹಚ್ಚಿ ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಈ ಹಿಂದೆ ಮಂಡ್ಯ ಪೊಲೀಸರಿಂದ ಜನರಿಗೆ ಬಂಪರ್ ಆಫರ್ ನೀಡಲಾಗಿತ್ತು.

ಪ್ರಾತಿನಿಧಿಕ ಚಿತ್ರ
ಮಂಡ್ಯ: ಜಿಲ್ಲೆಯಲ್ಲಿ ರುಂಡವಿಲ್ಲದ ಮೃತದೇಹ (Dead Body) ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್ ಸಿಕ್ಕಿದ್ದು, 2 ತಿಂಗಳ ಬಳಿಕ ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ ಬಯಲಾಗಿದೆ. ಸಿಕ್ಕಿದ್ದು 2 ಮೃತದೇಹ ಆದರೆ ಹಂತಕರು ಮಾಡಿದ್ದು 3 ಕೊಲೆ. ವೇಶ್ಯೆ ಪ್ರೀತಿಗೆ ಬಿದ್ದಿದ್ದ ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಪತ್ನಿ ಸಂಬಂಧಿ ಚಂದ್ರಕಲಾ ಜೊತೆ ಲವ್ವಿ ಡವ್ವಿ ನಡೆಸಿದ್ದ. ಪ್ರೇಯಸಿ ಜೊತೆ ವೇಶ್ಯಾವಟಿಕೆ ಲಿಂಕ್ನಲ್ಲಿದ್ದು, ಮಹಿಳೆಯರೇ ಈತನ ಟಾರ್ಗೆಟ್. ಚಂದ್ರಕಲಾಗೆ ಹಣ, ಚಿನ್ನಾಭರಣ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆ ಮಾಡಿದ್ದು, ಜೂ.6 ರಂದು ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಮೃತದೇಹ ಪತ್ತೆಯಾಗಿದ್ದವು. ಸಾವಿರಾರು ನಾಪತ್ತೆ ಪ್ರಕರಣಗಳನ್ನ ಜಾಲಾಡಿದ್ರು ಸುಳಿವು ಸಿಕ್ಕಿರಲಿಲ್ಲ. ಸದ್ಯ ಮಂಡ್ಯದ ಶ್ರೀರಂಗಪಟ್ಟಣ ಪೊಲೀಸರಿಗೆ ಸವಾಲಾಗಿದ್ದ ಪ್ರಕರಣವನ್ನು ಭೇದಿಸಲಾಗಿದೆ.