ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ಮಂಗಳೂರಿನ ಲೈಟ್ ಹೌಸ್ ಬೀಚ್ನಲ್ಲಿ ನಡೆದಿದೆ.

Image Credit source: mdpremier.com
ಮಂಗಳೂರು: ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವಂತಹ (drowned) ಘಟನೆ ಮಂಗಳೂರಿನ ಲೈಟ್ ಹೌಸ್ ಬೀಚ್ನಲ್ಲಿ ನಡೆದಿದೆ. ಸುರತ್ಕಲ್ನ ಕಾನ ಗ್ರಾಮದ ನಿವಾಸಿ ಸತ್ಯಂ(18) ಮೃತ ಯುವಕ. ಸತ್ಯಂ ಸ್ನೇಹಿತ ಪ್ರಭಾಕರನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತ್ಯಂ ಶವಕ್ಕಾಗಿ ಸ್ಥಳೀಯ ಮೀನುಗಾರರಿಂದ ಶೋಧ ಕಾರ್ಯ ಆರಂಭವಾಗಿದೆ. ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಬಕಾರಿ ಪೊಲೀಸರ ಕಾರ್ಯಾಚರಣೆ ಮೂಲಕ ಓರ್ವ ಯುವಕನ ಬಂಧನ ಮಾಡಿದ್ದು, 231 ಗ್ರಾಂ ಗಾಂಜಾವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆ ನಗರದ ಕುಂದವಾಡ ಲಿಂಕ್ ರಸ್ತೆಯ ವಿನಾಯಕ ನಗರದಲ್ಲಿ ಘಟನೆ ನಡೆದಿದೆ. ಸಂಜಯ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ. ಒಣಗಾಂಜಾ ಮತ್ತು ಸೇವನೆ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ಅಬಕಾರಿ ಉಪ ಅಸಯುಕ್ತ ಎಸ್ ಶಿವಪ್ರಸಾದ ನೇತ್ರತ್ವದಲ್ಲಿ ದಾಳಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಓರ್ವ ಸಾವು
ವಿಜಯಪುರ: ವೇಗವಾಗಿ ಚಲಿಸುತ್ತಿದ್ದ ಕಾರು ಮತ್ತು ಬೈಕ್ಗೆ ಹೊಡೆದು ಬಳಿಕ ರಸ್ತೆ ಬದಿಯ ಸೇತುವೆಗೆ ಡಿಕ್ಕಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಕ್ರಾಸ್ ಬಳಿ ನಡೆದಿದೆ. ಬಿ.ಎಸ್ ಪಾಟೀಲ್ (59) ಮೃತಪಟ್ಟ ವ್ಯಕ್ತಿ. ಕಾರಿನಲ್ಲಿದ್ದ ಇತರೆ ಮೂವರು ಮತ್ತು ಬೈಕ್ ಸವಾರ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದವರು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಚನ್ನೂರ ಗ್ರಾಮದವರು ಎಂದು ಹೇಳಲಾಗುತ್ತಿದೆ. ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.