Mangalsutra: ಶತಮಾನಗಳಿಂದ ಮಂಗಳಸೂತ್ರದ ವಿನ್ಯಾಸ ಬದಲಾದ ಬಗೆಯಿದು; ಮಾಂಗಲ್ಯದ ಇತಿಹಾಸ ಹೀಗಿದೆ | Mangal Sutra How the concept of Mangalya has evolved over the centuries Interesting Story


Mangalsutra: ಶತಮಾನಗಳಿಂದ ಮಂಗಳಸೂತ್ರದ ವಿನ್ಯಾಸ ಬದಲಾದ ಬಗೆಯಿದು; ಮಾಂಗಲ್ಯದ ಇತಿಹಾಸ ಹೀಗಿದೆ

ಮಾಂಗಲ್ಯ

ಹಿಂದೂಗಳ ಮದುವೆಯಲ್ಲಿ ಮಾಂಗಲ್ಯ (ತಾಳಿ) ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈಗಂತೂ ಥರಹೇವಾರಿ ಡಿಸೈನ್​ಗಳ ಮಾಂಗಲ್ಯ ಸರಗಳನ್ನು ಧರಿಸುವುದು ಟ್ರೆಂಡ್ ಆಗಿದೆ. ಮೊದಲೆಲ್ಲ ಸಾಂಪ್ರದಾಯಿಕ ಸರವಾಗಿದ್ದ ಮಾಂಗಲ್ಯ ಈಗ ಫ್ಯಾಷನ್ ಆಗಿ ಬದಲಾಗಿದೆ. ನಾನಾ ಡಿಸೈನರ್​ಗಳು ವಿವಿಧ ವಿನ್ಯಾಸದ ಮಂಗಳಸೂತ್ರವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ಮಂಗಳಸೂತ್ರದ ವಿನ್ಯಾಸಗಳು ಬದಲಾದ ಬಗೆ ಹಾಗೂ ಇತಿಹಾಸದ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ. 

ಆಯಾ ಜಾತಿ, ಧರ್ಮ, ಸಮುದಾಯ, ರಾಜ್ಯಗಳ ಆಧಾರದಲ್ಲಿ ಮಂಗಳಸೂತ್ರಗಳ ವಿನ್ಯಾಸಗಳು ಅಸ್ತಿತ್ವದಲ್ಲಿದೆ. ಕರ್ನಾಟಕವೊಂದರಲ್ಲೇ ಗಮನಿಸುವುದಾದರೆ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ಕೊಡಗಿನಲ್ಲಿ ಮಂಗಳಸೂತ್ರದ ವಿನ್ಯಾಸಗಳು ಬದಲಾಗುತ್ತಿರುತ್ತವೆ. ಆಭರಣ ವಿನ್ಯಾಸಕಾರರಾದ ಡಾ. ಉಷಾ ಬಾಲಕೃಷ್ಣನ್ ಪುಸ್ತಕದಲ್ಲಿ ವಿವರಿಸುವಂತೆ, ಮಂಗಳಸೂತ್ರವನ್ನು ಯಾವುದೇ ಧಾರ್ಮಿಕ ಪಠ್ಯದಲ್ಲಿ ‘ಮದುವೆ ಆಭರಣ’ ಎಂದು ಉಲ್ಲೇಖಿಸಲಾಗಿಲ್ಲ. ಸಾಂಪ್ರದಾಯಿಕವಾಗಿ ಮತ್ತು ಇಂದಿಗೂ ಸಹ ಶುಭ ಸಂದರ್ಭಗಳಲ್ಲಿ ಅರಿಶಿನ ಅಥವಾ ಕುಂಕುಮದಲ್ಲಿ ಅದ್ದಿದ ದಾರವನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ.

ವರನು ವಧುವಿನ ಕುತ್ತಿಗೆಗೆ ದಾರವನ್ನು ಕಟ್ಟುವ ಬಗ್ಗೆ ಸಾಹಿತ್ಯಿಕ ಉಲ್ಲೇಖಗಳಲ್ಲಿ ಕೂಡ ತಿಳಿಸಲಾಗಿದೆ. ಇದು ಸಂಗಮ್ ಸಾಹಿತ್ಯದಿಂದ ಮಂಗಳ ಸೂತ್ರದಂತಹವುಗಳ ಉಪಸ್ಥಿತಿಗೆ ಕೆಲವು ಪುರಾವೆಗಳನ್ನು ಒದಗಿಸುತ್ತದೆ. ಮದುವೆಯ ಸಮಯದಲ್ಲಿ ಮಂಗಳ ಸೂತ್ರವನ್ನು ಕಟ್ಟುವ ಅಭ್ಯಾಸವು ಧರ್ಮಕ್ಕಿಂತ ಸಂಪ್ರದಾಯದೊಂದಿಗೆ ಹೆಚ್ಚು ಸಂಬಂಧಿಸಿದೆ ಎಂದು ಉಷಾ ಬಾಲಕೃಷ್ಣನ್ ಮತ್ತು ಕುಮಾರ್ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ.

ಬಾಲಕೃಷ್ಣ ಮತ್ತು ಮೀರಾ ಸುಶೀಲ್ ಕುಮಾರ್ ಮಂಗಳಸೂತ್ರದ ಬಗ್ಗೆ ತಮ್ಮ ಇಂಡಿಯನ್ ಜ್ಯುವೆಲರಿ; ದಿ ಡ್ಯಾನ್ಸ್ ಆಫ್ ದಿ ಪಿಕಾಕ್ ಎಂಬ ಪುಸ್ತಕದಲ್ಲಿ ಮಂಗಳಸೂತ್ರದ ಇತಿಹಾಸದ ಬಗ್ಗೆ ವಿವರಿಸಿದ್ದಾರೆ. ಮಂಗಳ ಸೂತ್ರದ ಲಕ್ಷಣಗಳು ಮತ್ತು ತಯಾರಿಕೆಯು ಜಾತಿ ಮತ್ತು ಸಮುದಾಯಗಳ ನಡುವೆ ವ್ಯತ್ಯಾಸವನ್ನು ಉಂಟುಮಾಡಿದೆ. ಉದಾಹರಣೆಗೆ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ, ಮಂಗಳ ಸೂತ್ರವನ್ನು ತಾಳಿ ಎಂದು ಕರೆಯಲಾಗುತ್ತದೆ. ಇದು ತಾಳೆ ಮರ ಅಥವಾ ತಾಳೆ ತೋಪುಗಳ ಜಾತಿಯನ್ನು ಸೂಚಿಸುತ್ತದೆ. “ಸಾಹಿತ್ಯಿಕ ಪುರಾವೆಗಳು ಪದದ ಮೂಲದ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿಲ್ಲ. ಇಂದಿಗೂ ಗೊಂಡರು, ಸವರರು ಮತ್ತು ಮುಂಡಾ ಬುಡಕಟ್ಟುಗಳಲ್ಲಿ ಮದುಮಗನು ವಧುವಿನ ಕುತ್ತಿಗೆಗೆ ತಾಳೆ ಎಲೆಯಿಂದ ದಾರವನ್ನು ಕಟ್ಟುತ್ತಾನೆ ಎಂದು ಬಾಲಕೃಷ್ಣನ್ ಮತ್ತು ಕುಮಾರ್ ಬರೆದಿದ್ದಾರೆ.

ತಾಳಿಯ ವೈವಿಧ್ಯಗಳು ಸಾಮಾನ್ಯವಾಗಿ ಸಮುದಾಯ ಅಥವಾ ಬುಡಕಟ್ಟಿನಿಂದ ಪೂಜಿಸಲ್ಪಡುವ ನೈಸರ್ಗಿಕ ಅಥವಾ ಅಲೌಕಿಕ ವಿದ್ಯಮಾನವನ್ನು ಸೂಚಿಸುತ್ತವೆ. ಸಾಂಪ್ರದಾಯಿಕ ಎಂ ಆಕಾರದ ನೆಕ್ಲೇಸ್‌ನ ಮಧ್ಯಭಾಗವು ಚಿದಂಬರಂನಲ್ಲಿರುವ ದೇವಾಲಯದ ಚಿಕಣಿ ಪ್ರತಿಕೃತಿಯನ್ನು ಹೊಂದಿದೆ. ಈ ದೇವಾಲಯದ ಒಳಗೆ, ಶಿವ ಮತ್ತು ಅವನ ಪತ್ನಿ ಪಾರ್ವತಿ ತಮ್ಮ ವಾಹನವಾದ ಗೂಳಿಯ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಚೆಟ್ಟಿನಾಡಿನ ವಾಸ್ತುಶೈಲಿಯ ವಿಶಿಷ್ಟವಾದ ಕಲಾತ್ಮಕ ವಿವರಗಳಿಂದ ಎರಡೂ ಬದಿಯಲ್ಲಿರುವ ಪಂಜದಂತಹ ತುಣುಕುಗಳನ್ನು ಅಲಂಕರಿಸಲಾಗಿದೆ.

ಬಂಗಾಳದಲ್ಲಿ, ಶೆಲ್ ಮತ್ತು ಹವಳದ ಬಳೆಗಳು ಅಥವಾ ಶಾಖಾ ಪೋಲಾವನ್ನು ವಿವಾಹದ ಸೂಚಕವಾಗಿ ಧರಿಸಲಾಗುತ್ತದೆ. “ಉದಾಹರಣೆಗೆ ಪೋಲಾ ಮಹಿಳೆಯ ಮೇಲೆ ಬಯಸಿದ ಕಬ್ಬಿಣದ ಶಕ್ತಿಯನ್ನು ಸೂಚಿಸುತ್ತದೆ. ಇದು ಸೀಸವನ್ನು ಸಹ ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಟೋಕನ್‌ಗಳ ರೀಬ್ರಾಂಡ್ ಕುರಿತು ಬರೆದಿರುವ ಬಾಲಕೃಷ್ಣನ್, ಪಶ್ಚಿಮದಲ್ಲಿನ ಮಾರ್ಕೆಟಿಂಗ್ ಕಂಪನಿಗಳು ವಜ್ರದ ಉಂಗುರವನ್ನು ತೆಗೆದುಕೊಂಡು ಅದನ್ನು ಮದುವೆಯನ್ನು ಪವಿತ್ರಗೊಳಿಸಲು ಕಡ್ಡಾಯವಾದ ವಸ್ತುವನ್ನಾಗಿ ಪರಿವರ್ತಿಸಿದವು. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ಆ ಉಂಗುರವನ್ನು ಪುರುಷನ ಪ್ರೀತಿಯ ಸಂಕೇತವೆಂದುಕೊಳ್ಳುತ್ತಿದ್ದಾಳೆ. ಶತಮಾನಗಳ ಮಂಗಳ ಸೂತ್ರದ ವಿಕಾಸವನ್ನು ಕೂಡ ಇದೇ ರೀತಿ ಅರ್ಥೈಸಲಾಗುತ್ತಿದೆ.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *