Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ; ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ | Condition of former Prime Minister Manmohan Singh is stable say AIIMS doctors

Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ; ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ

ಮನಮೋಹನ್ ಸಿಂಗ್

ದೆಹಲಿ: ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ (Manmohan Singh) ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು (AIIMS) ಬುಧವಾರ ಹೇಳಿದರು. 89ರ ಹರೆದ ಸಿಂಗ್ ಅವರಿಗೆ ಜ್ವರ ಬಂದ ಕಾರಣ ಬುಧವಾರ ಏಮ್ಸ್ ಗೆ ದಾಖಲಾಗಿದ್ದರು. ಮಂಗಳವಾರದಿಂದಲೇ ಅವರಿಗೆ ಜ್ವರವಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. “ಎಂಭತ್ತೊಂಬತ್ತು ವರ್ಷದ ಕಾಂಗ್ರೆಸ್ ನಾಯಕ ಜ್ವರದಿಂದ ಬಳಲಿದ್ದು ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ” ಎಂದು ವೈದ್ಯರ ಹೇಳಿಕೆಯನ್ನು ಎಎನ್‌ಐ ಉಲ್ಲೇಖಿಸಿದೆ. ಮಾಜಿ ಪ್ರಧಾನಿ ವೈದ್ಯರ ನಿಗಾದಲ್ಲಿದ್ದಾರೆ. 

“ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ದೇವರು ಅವರಿಗೆ ಉತ್ತಮ ಆರೋಗ್ಯ ನೀಡಲಿ” ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ, ಸಿಂಗ್ ಅವರು ಉತ್ತಮ ಆರೋಗ್ಯ ಹೊಂದಲಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.

ಈ ವರ್ಷ ಏಪ್ರಿಲ್‌ನಲ್ಲಿ ಕೊರೊನಾ ಪಾಸಿಟಿವ್ ಆಗಿದ್ದ ಸಿಂಗ್ ಅವರನ್ನು ಮೊದಲು ಏಮ್ಸ್‌ಗೆ ದಾಖಲಿಸಲಾಗಿತ್ತು. ಕಳೆದ ವರ್ಷವೂ, ಸಿಂಗ್ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದರು.

ಸೆಪ್ಟೆಂಬರ್ 26, 1932 ರಂದು, ಬ್ರಿಟಿಷ್ ಭಾರತದ ಪಂಜಾಬ್‌ನ ಗಾಹ್‌ನಲ್ಲಿ (ಇಂದಿನ ಪಾಕಿಸ್ತಾನದಲ್ಲಿರುವ ಪಂಜಾಬ್) ಜನಿಸಿದ ಸಿಂಗ್, ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪ್ರಮುಖ ಸ್ಥಾನಗಳನ್ನು ಹೊಂದಿದ್ದರು. 1982 ರಿಂದ 1985 ರವರೆಗೆ, ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಆಗಿದ್ದರು ಮತ್ತು 1985 ರಿಂದ 1987 ರವರೆಗೆ ಅವರು ಯೋಜನಾ ಆಯೋಗದ ಉಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1991 ರಲ್ಲಿ ಅವರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸಿಂಗ್ ಅವರ ಪ್ರಧಾನ ಮಂತ್ರಿಯ ಅವಧಿ 2014 ರಲ್ಲಿ ಕೊನೆಗೊಂಡಿತು.

ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯ ವಿಚಾರಿಸಲು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ದೆಹಲಿಯ ಏಮ್ಸ್ ಗೆ ಭೇಟಿ ನೀಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಡಾ ಸಿಂಗ್‌ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ. ” ಡಾ ಮನಮೋಹನ್ ಸಿಂಗ್ ಜಿಯವರ ಉತ್ತಮ ಆರೋಗ್ಯಕ್ಕಾಗಿ ಮತ್ತು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ” ಎಂದು ಪಿಎಂ ಮೋದಿ ಹಾರೆೈಸಿದ್ದಾರೆ.

ಇದನ್ನೂ ಓದಿ: Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

TV9 Kannada

Leave a comment

Your email address will not be published. Required fields are marked *