Mann Ki Baat: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರಿಂದ ಮನ್​ ಕೀ ಬಾತ್​; ಎಲ್ಲೆಲ್ಲಿ ಪ್ರಸಾರಗೊಳ್ಳಿದೆ? ಇಲ್ಲಿದೆ ಮಾಹಿತಿ | PM Narendra Modi to address 83rd edition of Mann Ki Baat here is the information about how to Watch


Mann Ki Baat: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರಿಂದ ಮನ್​ ಕೀ ಬಾತ್​; ಎಲ್ಲೆಲ್ಲಿ ಪ್ರಸಾರಗೊಳ್ಳಿದೆ? ಇಲ್ಲಿದೆ ಮಾಹಿತಿ

ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು ತಿಂಗಳ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್(Mann Ki Baat)​​ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು 83ನೇ ಆವೃತ್ತಿಯ ಮನ್​ ಕೀ ಬಾತ್​ ಪ್ರಸಾರವಾಗಲಿದ್ದು, ಪ್ರಧಾನಿ ಯಾವೆಲ್ಲ ವಿಚಾರಗಳ ಬಗ್ಗೆ ಮಾತನಾಡಬಹುದು ಎಂಬ ಕುತೂಹಲ ಸಹಜವಾಗಿಯೇ ಇದೆ. ಸದ್ಯ ಕೊರೊನಾ ವೈರಸ್​ನ ಹೊಸ ರೂಪಾಂತರ ಒಮಿಕ್ರಾನ್​ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಹಾಂಗ್​ಕಾಂಗ್​, ಇಸ್ರೇಲ್​​ಗೂ ಕಾಲಿಟ್ಟಿದೆ. ಹೀಗಾಗಿ ಈ ಬಗ್ಗೆ ಕೂಡ ಪ್ರಧಾನಿ ಮೋದಿ ಇಂದಿನ ಮನ್​ ಕೀ ಬಾತ್​ನಲ್ಲಿ ಪ್ರಸ್ತಾಪ ಮಾಡಬಹುದು ಎಂದು ಹೇಳಲಾಗಿದೆ. ನಿನ್ನೆ ಟ್ವೀಟ್​ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ನಾಳೆ ಬೆಳಗ್ಗೆ 11ಗಂಟೆಗೆ ಮನ್​ ಕೀ ಬಾತ್​ ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದರು. 

ದೇಶದಲ್ಲಿ ಕೊರೊನಾ ವೈರಸ್ ಪ್ರಮಾಣ ತುಸು ತಗ್ಗಿದ್ದರೂ ಈಗೀಗ ಹೊಸಹೊಸ ರೂಪಾಂತರಗಳ ಆತಂಕ ಮತ್ತೆ ಶುರುವಾಗಿದೆ. ದೇಶದಲ್ಲಿನ ಕೊವಿಡ್​ 19 ಮತ್ತು ಲಸಿಕೆ ಸ್ಥಿತಿಯ ಬಗ್ಗೆ ಚರ್ಚಿಸಲು ನಿನ್ನೆ ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಹಾಗೇ, ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗುವ ಹಿನ್ನೆಲೆಯಲ್ಲಿ ಇಂದು ಅವರು ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ.

ಮನ್​ ಕೀ ಬಾತ್​ ಎಷ್ಟೊತ್ತಿಗೆ?
ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ ಕಾರ್ಯಕ್ರಮ ಬೆಳಗ್ಗೆ 11 ಗಂಟೆಯಿಂದ ಪ್ರಸಾರಗೊಳ್ಳಲಿದೆ. ಆಲ್​ ಇಂಡಿಯಾ ರೇಡಿಯೋ​ (AIR) ಮತ್ತು ದೂರದರ್ಶನದ ಎಲ್ಲ ನೆಟ್ವರ್ಕ್​​ಗಳಲ್ಲೂ ಮನ್​ ಕೀ ಬಾತ್​ ಪ್ರಸಾರವಾಗುತ್ತದೆ. ಇದರೊಂದಿಗೆ ಏರ್​ ಇಂಡಿಯಾ ರೇಡಿಯೋದ ನ್ಯೂಸ್​ ವೆಬ್​ಸೈಟ್​ www.newsonair.com ಮತ್ತು ಮೊಬೈಲ್​ ಆ್ಯಪ್​ newsonair ನಲ್ಲಿಯೂ ಕೇಳಬಹುದು. ಇನ್ನುಳಿದಂತೆ ಆಲ್​ ಇಂಡಿಯಾ ರೇಡಿಯೋ,  ಡಿಡಿ ನ್ಯೂಸ್​, ಪ್ರಧಾನಮಂತ್ರಿ ಕಚೇರಿ (PMO) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್​ ಚಾನಲ್​​ಗಳಲ್ಲಿಯೂ ಮನ್​ ಕೀ ಬಾತ್​ ಭಿತ್ತರಗೊಳ್ಳಲಿದೆ. ಸದ್ಯ 11 ಗಂಟೆಗೆ ಎಲ್ಲ ನೆಟ್ವರ್ಕ್​, ಚಾನಲ್​ಗಳಲ್ಲೂ ಹಿಂದಿಯಲ್ಲೇ ಪ್ರಸಾರಗೊಳ್ಳಲಿದ್ದು, ಸಂಜೆ 8 ಗಂಟೆ ಹೊತ್ತಿಗೆ ಆಯಾ ಸ್ಥಳೀಯ ಭಾಷೆಗಳಲ್ಲಿ ಪ್ರಸಾರಗೊಳ್ಳುತ್ತದೆ.  ಕಳೆದ ತಿಂಗಳ ಮನ್​ ಕೀ ಬಾತ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಇನ್ನಷ್ಟು ದೃಢವಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ: ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *