MEIL -ICOMM ನಲ್ಲಿ ದೇಶೀಯ ಲ್ಯಾಂಡ್ ರಿಗ್‌ನಲ್ಲಿ ಹಾರಾಡಿದ ತ್ರಿವರ್ಣ ಧ್ವಜ! 750 ವಿದ್ಯಾರ್ಥಿಗಳಿಗೆ ತಲಾ 75,000 ರೂ ಆರ್ಥಿಕ ನೆರವು ಘೋಷಿಸಿದ ಕಂಪನಿ ಸಂಸ್ಥಾಪಕ ಪಿ.ಪಿ. ರೆಡ್ಡಿ | Tricolour unfurled on 75th Independence Day at the indigenous land rig at MEIL ICOMM by MEIL Chairman PP Reddy declares financial assistance to students


Azadi Ka Amrit Mahotsav: MEIL ಅಧ್ಯಕ್ಷ ಶ್ರೀ ಪಿಪಿ ರೆಡ್ಡಿ ದೇಶೀಯ ಲ್ಯಾಂಡ್ ರಿಗ್ ವೇದಿಕೆಯಲ್ಲಿ ಭಾರತದ ಧ್ವಜವನ್ನು ಹಾರಿಸಿದರು. ರಿಗ್ ಅನ್ನು ICOMM, ನಗರಮ್‌ನಲ್ಲಿ ತಯಾರಿಸಲಾಗುತ್ತದೆ- ICOMM ಒಂದು MEIL ಸಮೂಹ ಕಂಪನಿಯಾಗಿದೆ-ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಘೋಷಿಸಿದರು

MEIL -ICOMM ನಲ್ಲಿ ದೇಶೀಯ ಲ್ಯಾಂಡ್ ರಿಗ್‌ನಲ್ಲಿ ಹಾರಾಡಿದ ತ್ರಿವರ್ಣ ಧ್ವಜ!  750 ವಿದ್ಯಾರ್ಥಿಗಳಿಗೆ ತಲಾ 75,000 ರೂ ಆರ್ಥಿಕ ನೆರವು ಘೋಷಿಸಿದ ಕಂಪನಿ ಸಂಸ್ಥಾಪಕ ಪಿ.ಪಿ. ರೆಡ್ಡಿ

MEIL -ICOMM ನಲ್ಲಿ ದೇಶೀಯ ಲ್ಯಾಂಡ್ ರಿಗ್‌ನಲ್ಲಿ ಹಾರಾಡಿದ ತ್ರಿವರ್ಣ ಧ್ವಜ! 750 ವಿದ್ಯಾರ್ಥಿಗಳಿಗೆ ತಲಾ 75,000 ರೂ ಆರ್ಥಿಕ ನೆರವು ಘೋಷಿಸಿದ ಕಂಪನಿ ಸಂಸ್ಥಾಪಕ ಪಿ.ಪಿ. ರೆಡ್ಡಿ

ಹೈದರಾಬಾದ್: ಮೊದಲ ಬಾರಿಗೆ MEIL ಸಮೂಹ ಕಂಪನಿಯ ಡ್ರಿಲ್‌ಮೆಕ್ (Drillmec) ತಯಾರಿಸಿದ ICOMM ನಗರದಲ್ಲಿರುವ ದೇಶೀಯ ಲ್ಯಾಂಡ್ ರಿಗ್ ವೇದಿಕೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ (Azadi Ka Amrit Mahotsav) ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಕಂಪನಿ ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಪಿ.ಪಿ. ರೆಡ್ಡಿ (P.P. Reddy) ಧ್ವಜಾರೋಹಣ ಮಾಡಿದರು.

“ಸ್ವಾತಂತ್ರ್ಯ ದಿನದಂದು ಈ ದೇಶೀಯ ರಿಗ್‌ನಲ್ಲಿ ನಿಂತು ರಾಷ್ಟ್ರಧ್ವಜವನ್ನು ಹಾರಿಸುವುದು ನನ್ನ ಕನಸಾಗಿತ್ತು. ನನ್ನ ಆಕಾಂಕ್ಷೆಗಳನ್ನು ಪೂರೈಸಿದ್ದಕ್ಕಾಗಿ ಧನ್ಯವಾದಗಳು” ಎಂದು ಅಧ್ಯಕ್ಷ ಪಿ.ಪಿ. ರೆಡ್ಡಿ ಹೇಳಿದರು. MEIL ಸಂಸ್ಥೆಯ ಪರಿಶ್ರಮದ ಕಾರ್ಯಕಾರಿ ಸಿಬ್ಬಂದಿಗೆ ಧನ್ಯವಾದ ಹೇಳಿದರು. ನವೀನ ತಂತ್ರಜ್ಞಾನದ ಸ್ವದೇಶೀಕರಣದ ಯಶಸ್ಸಿಗೆ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾ ರೆಡ್ಡಿ ಅವರ ಶ್ರಮವೇ ಕಾರಣ ಎಂದ ಅವರು, ಇಂದು ಎಂಇಐಎಲ್ ಸಂಸ್ಥೆ ಅವರ ಸಾರಥ್ಯದಲ್ಲಿ ಕಡಿಮೆ ಅವಧಿಯಲ್ಲಿ ದೇಶದ ಉನ್ನತ ದರ್ಜೆಯ ಮೂಲಸೌಕರ್ಯ ಕಂಪನಿಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಹೇಳಿದರು.

ಹೈಡ್ರೋಕಾರ್ಬನ್‌ಗಳು, ವಿದ್ಯುತ್ ಮತ್ತು ಮೂಲಸೌಕರ್ಯಗಳಂತಹ ಆಯಕಟ್ಟಿನ ವಲಯಗಳಲ್ಲಿ MEIL ನ ಜನ-ಕೇಂದ್ರಿತ ಕೆಲಸವನ್ನು ಪ್ರಸ್ತಾಪಿಸಿದ ಶ್ರೀ ಪಿಪಿ ರೆಡ್ಡಿ, ಕಂಪನಿಯು 75 ನೇ ಸ್ವಾತಂತ್ರ್ಯ ದಿನಾಚರಣೆಯಂದು 6 ರಿಂದ 12 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 750 ವಿದ್ಯಾರ್ಥಿಗಳಿಗೆ ತಲಾ 75,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ವಿಶೇಷ ಸಮಿತಿಯು ಅರ್ಹತಾ ಮಾನದಂಡಗಳನ್ನು ಅಂತಿಮಗೊಳಿಸುತ್ತದೆ. MEIL ಮತ್ತು ICOMM ನ ಉನ್ನತ ಮಟ್ಟದ ಸದಸ್ಯರು ಮತ್ತು ಅಪಾರ ಸಂಖ್ಯೆಯ ಉದ್ಯೋಗಿಗಳು ಈ ಆಚರಣೆಯಲ್ಲಿ ಭಾಗವಹಿಸಿದ್ದರು. ನಿರ್ದೇಶಕ ರವಿ ರೆಡ್ಡಿ ವಂದನಾರ್ಪಣೆ ಮಾಡಿದರು.

2,000 HP ರಿಗ್ ಮೇಲೆ ಧ್ವಜಾರೋಹಣ ಮಾಡಿರುವುದು ONGC ಅಗರ್ತಲಾ ಆಸ್ತಿಗಾಗಿ ಸಮರ್ಪಿಸಲಾಗಿದ್ದು, ಅದು ಸಿಸ್ಟಮ್ ಇಂಟಿಗ್ರೇಷನ್ ಪರೀಕ್ಷೆಯ ಹಂತದಲ್ಲಿದೆ. ರಿಗ್ 6,000 ಮೀಟರ್ ಆಳದ ವರೆಗೂ ಕೊರೆಯಬಲ್ಲದು ಮತ್ತು ಇದು ದೇಶದ ಅತ್ಯಾಧುನಿಕ ಸ್ವದೇಶಿ ನಿರ್ಮಿತ ರಿಗ್‌ಗಳಲ್ಲಿ ಒಂದಾಗಿದೆ. ರಿಗ್ ತಯಾರಿಕೆಯು “ಆತ್ಮನಿರ್ಭರ್ ಭಾರತ್” ಉಪಕ್ರಮದೊಂದಿಗೆ ಹೊಂದಿಕೆಯಾಗುತ್ತದೆ.

ICOMM ಬಗ್ಗೆ…
Tricolour unfurled on 75th Independence Day at the indigenous land rig at MEIL ICOMM

ICOMM Tele Limited – ಇದು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಸಮೂಹ ಕಂಪನಿಯಾಗಿದೆ. ಇದು 120 ಎಕರೆ ವಿಶಾಲ ಪ್ರದೇಶದಲ್ಲಿರುವ ವ್ಯವಸ್ಥೆ/ ಸೌಲಭ್ಯವಾಗಿದೆ. 1989 ರಲ್ಲಿ ಸ್ಥಾಪಿತವಾದ ಇದು ಉತ್ಪನ್ನ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ICOMM ವಿದ್ಯುತ್, ಟೆಲಿಕಾಂ ಮತ್ತು ಮೂಲಸೌಕರ್ಯಗಳಂತಹ ನಿರ್ಣಾಯಕ ಕೈಗಾರಿಕೆಗಳಿಗೆ ಟರ್ನ್‌ಕೀ ಪರಿಹಾರ ಪೂರೈಕೆದಾರ ಕಂಪನಿಯಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *