1/5
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ ದಿನದಿಂದ ದಿನಕ್ಕೆ ವೇಗವಾಗಿ ವಿಸ್ತರಿಸುತ್ತಿದೆ. ಈ ವಿಭಾಗದಲ್ಲಿ ಇ-ಸೈಕಲ್ಗಳು ಕೂಡ ಸೇರ್ಪಡೆಯಾಗುತ್ತಿದೆ. ಇದೀಗ ನೈಂಟಿ ಒನ್ ಸೈಕಲ್ ಕಂಪೆನಿಯು ತನ್ನ ನೂತನ ಎಲೆಕ್ಟ್ರಿಕ್ ಸೈಕಲ್ ಮೆರಾಕಿ S7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
2/5
Meraki S7 ಎಲೆಕ್ಟ್ರಿಕ್ ಸೈಕಲ್ 7 ಸ್ಪೀಡ್ ಗೇರ್ಸೆಟ್ನೊಂದಿಗೆ ಬರುತ್ತದೆ. 5 ಮೋಡ್ ಪೆಡಲ್ ಅಸಿಸ್ಟೆಂಟ್ ನಂತಹ ವೈಶಿಷ್ಟ್ಯಗಳು ಇದರಲ್ಲಿದೆ. ಈ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬೈಸಿಕಲ್ ತನ್ನದೇ ಆದ ಸ್ಮಾರ್ಟ್ ಎಲ್ಸಿಡಿ ಡಿಸ್ಪ್ಲೇಯನ್ನು ಕೂಡ ಹೊಂದಿದೆ.
3/5
Meraki S7 ನ ಇತರೆ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು 160 mm ಡಿಸ್ಕ್ ಬ್ರೇಕ್ ಸಿಸ್ಟಮ್ ಹೊಂದಿದೆ. ಹಾಗೆಯೇ ಇದರಲ್ಲಿ ನೈಲಾನ್ ಟೈರ್ಗಳನ್ನು ನೀಡಲಾಗಿದೆ.