#MeToo ಎಂದಿದ್ದೇ ತಪ್ಪಾಯ್ತು.. ಖ್ಯಾತ ಟೆನ್ನಿಸ್ ಆಟಗರ್ತಿ ಚೀನಾದಲ್ಲಿ ಕಣ್ಮರೆ


ಚೀನಾದಲ್ಲಿ ಇತ್ತೀಚೆಗೆ ಅಲ್ಲಿನ ಜನ ಬದುಕೋದೇ ಕಷ್ಟವಾಗ್ ​ಬಿಟ್ಟಿದೆ.. ಅಲ್ಲಿನ ಸರ್ಕಾರದ ವಿರುದ್ಧ, ಪ್ರಭಾವಿಗಳ ದೌರ್ಜನ್ಯದ ವಿರುದ್ಧ ಯಾರಾದ್ರೂ ಧ್ವನಿ ಎತ್ತಿದ್ರೆ ಅವರ ಕಥೆ ಮುಗೀತು. ಅವ್ರು ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾಗಿದ್ರೂ ಬಿಡಲ್ಲ..ರಾತ್ರೋ ರಾತ್ರಿ ಕಣ್ಮರೆಯಾಗಿ ಬಿಡ್ತಾರೆ..  ಆ ರೀತಿ ಈ ಹಿಂದೆ ಕಣ್ಮರೆಯಾಗಿದ್ದ, ತಾರೆಗಳ ಸಾಲಿಗೆ ಈಗ ಮತ್ತೊಬ್ಬ ದೈತ್ಯ ಸೆಲೆಬ್ರಿಟಿ ಸೇರ್ಪಡೆಯಾಗಿದ್ದಾಳೆ. ಯಾರದು? ಆಕೆಗೇನಾಯ್ತು? ಈ ಸ್ಪೆಷಲ್ ರಿಪೋರ್ಟ್​ ಓದಿ..

ಚೀನಾದ ಖ್ಯಾತ ಟೆನಿಸ್ ಆಟಗಾರ್ತಿ ನಿಗೂಢ ಕಣ್ಮರೆ
ಮೀಟೂ ಆರೋಪ ಮಾಡಿದ್ದ ದೈತ್ಯ ಪ್ರತಿಭೆ ಮಿಸ್ಸಿಂಗ್ 

ಚೀನಾ ಅಂದಾಕ್ಷಣ ನಮಗೆ ನೆನಪಾಗೋದು ಬರೀ ಕಿರಿಕ್.. ವಿಸ್ತಾರವಾದವನ್ನೇ ತನ್ನ ಚಟವನ್ನಾಗಿ ಮಾಡಿಕೊಂಡಿರೋ ಡ್ರ್ಯಾಗನ್ ರಾಷ್ಟ್ರಕ್ಕೆ ಸದಾ ಬೇರೆಯವರ ನೆಲದ ಮೇಲೆ ಕಣ್ಣು ಅನ್ನೋದು ಗೊತ್ತಿರೋ ವಿಚಾರ.. ಹೊರಗಿನವರಿಗೆ ಮನಬಂದಂತೆ ಮಾನಸಿಕ ಹಿಂಸೆ ನೀಡುವ ಚೀನಾ, ಸ್ವತಃ ತನ್ನ ಜನರಿಗೂ ಇನ್ನಿಲ್ಲದ ಟಾರ್ಚರ್ ನೀಡ್ತಿದೆ ಅಂದ್ರೆ ನೀವು ನಂಬ್ಲೇಬೇಕು.. ತನ್ನ ದೇಶದಲ್ಲಿ ಅದೆಷ್ಟೇ ಗೌರವಾನಿತ ವ್ಯಕ್ತಿಯಾಗಿರಲಿ, ಅದೆಷ್ಟೇ ದೊಡ್ಡ ಬ್ಯುಸಿನೆಸ್ ಮ್ಯಾನ್‌ ಆಗಿರಲಿ, ಅದೆಷ್ಟೇ ದೊಡ್ಡ ತಾರೆಯೇ ಆಗಿರಲಿ.. ಅಲ್ಲಿನ ಸರ್ಕಾರ ಹಾಕಿದ ತಾಳಕ್ಕೆ ಕುಣೀಲಿಲ್ಲ ಅಂದ್ರೆ ಅವರ ಕಥೆ ಗೋವಿಂದ..

ಕಮ್ಯೂನಿಸ್ಟ್​ ಪಕ್ಷದ ಮುಖಂಡನ ವಿರುದ್ಧ ಸಿಡಿದಿದ್ದ ಸ್ಟಾರ್ 
‘ಮೀಟೂ’ ಎಂದು ಮುಖವಾಡ ಬಯಲು ಮಾಡಿದ್ದಳು 
ಡ್ರ್ಯಾಗನ್ ದೇಶದಲ್ಲಿಲ್ಲ ಅಲ್ಲಿನ ಸೆಲೆಬ್ರಿಟಿಗಳಿಗೆ ಸೇಫ್ಟಿ

ನಾವು ಕೆಲವು ದಿನಗಳ ಹಿಂದಷ್ಟೇ ನಿಮಗೊಂದು ವಿಚಾರ ಹೇಳಿದ್ವಿ.. ಚೀನಾದ ಸ್ಟಾರ್‌ ಸೆಲೆಬ್ರಿಟಿ ಆಗಿದ್ದ ನಟಿ ಝಾವೋ ವೀ ಅವರನ್ನ ಕ್ಸಿ ಸರ್ಕಾರ ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ಆಕೆಯ ಫೋಟೋ, ವಿಡಿಯೋಗಳೆಲ್ಲವನ್ನ ಇಂಟರ್​ನೆಟ್​ನಿಂದ ತೆಗೆದು ಹಾಕಿತ್ತು. ಆ ನಟಿ ಸಾವಿರಾರು ಕೋಟಿ ಒಡತಿಯಾಗಿದ್ರೂ, ಚೀನಾ ಸರ್ಕಾರ ಕೊಡಬಾರದ ಕಷ್ಟ ಕೊಟ್ಟು ಚಿತ್ರಹಿಂಸೆ ನೀಡಿತ್ತು. ಅದಕ್ಕೆಲ್ಲಾ ಕಾರಣ ಆಕೆ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಇದ್ದಾಳೆ ಅನ್ನೋದಾಗಿತ್ತು. ಅದೇ ರೀತಿ ಕಿರುತರೆ ಮತ್ತು ಸಿನಿಮಾ ನಟಿ ಝೆನ್‌ ಶೇವಾಂಗ್‌ಗೆ ಬರೋಬ್ಬರಿ 338 ಕೋಟಿ ರೂಪಾಯಿ ದಂಡ ಹಾಕಿ ಆಕೆಯ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ನಾವ್ಯಾಕ್​ ಈ ಸುದ್ದಿಯನ್ನ ನಿಮಗೆ ಹೇಳ್ತಾ ಇದ್ದೀವಿ ಅನ್ನೋದಕ್ಕೆ ಒಂದು ಪ್ರಬಲ ಕಾರಣವಿದೆ.. ಚೀನಾದಲ್ಲಿ ಅಂತಹುದ್ದೇ ಮತ್ತೊಂದು ಘಟನೆ ನಡೆದಿದೆ..

ಚೀನಾದ ಖ್ಯಾತ ಟೆನಿಸ್ ಆಟಗಾರ್ತಿ ನಿಗೂಢ ಕಣ್ಮರೆ
ಭಾರೀ ಸಂಚಲನ ಸೃಷ್ಟಿಸಿದ ಪೆಂಗ್ ಶುವಾಯ್ ನಾಪತ್ತೆ

ಯಸ್.. ಟೆನಿಸ್‌ ಅಭಿಮಾನಿಗಳಿಗೆ ಪೆಂಗ್‌ ಶುವಾಯ್‌ ಯಾರು? ಈಕೆಯ ಆಟದ ವೈಖರಿ ಹೇಗಿದೆ? ಕೋರ್ಟ್‌ನಲ್ಲಿ ಅದೇಗೆ ಜಿಂಕೆಯ ಮರಿಯಂತೆ ಚಂಗನೇ ಜಿಗಿಯುತ್ತಾ ರಾಕೆಟ್ ಬೀಸುತ್ತಾಳೆ ಅನ್ನೋದು ಚೆನ್ನಾಗಿ ಗೊತ್ತಿರುತ್ತೆ.. ಕೋರ್ಟ್​ಗೆ ಎಂಟ್ರಿಯಾದ್ರೆ ಸಾಕು ಆಕ್ರಮಣಕಾರಿ ಆಟ ಪ್ರದರ್ಶಿಸುವ ಈಕೆ ವರ್ಲ್ಡ್​ ಫೇಮಸ್​ ಅಂದ್ರೆ ತಪ್ಪಾಗಲ್ಲ. ಡಬಲ್ಸ್‌ನಲ್ಲಿ ವಿಶ್ವ ಱಂಕಿಂಗ್‌ ನಂಬರ್‌ ಒನ್‌ವನ್ನು ಪಟ್ಟವನ್ನು ಏರಿದವಳು. 2013 ರಲ್ಲಿ ನಡೆದ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನ ಡಬಲ್ಸ್‌ ವಿಭಾದಲ್ಲಿ ಚಾಂಪಿಯನ್‌, 2014 ರಲ್ಲಿ ನಡೆದ ವಿಂಬಲ್ಡನ್‌ ಓಪನ್‌ ಡಬಲ್ಸ್‌ನಲ್ಲಿ ಚಾಂಪಿಯನ್‌ ಗಿರೀಟ ಪಡೆದು ಚೀನಾಗೆ ಕೀರ್ತಿ ತಂದವಳು. ಅನೇಕ ಎಟಿಪಿ ಟೂರ್ನಿಯಲ್ಲಿ ಚಾಂಪಿಯನ್‌ಶಿಪ್‌ ಪಡೆದ ಈಕೆ ಈಗ ನಿಗೂಢ ಕಣ್ಮರೆಯಾಗಿದ್ದಾಳೆ

 ಅಕ್ಟೋಬರ್‌ 2ರಿಂದ ಪತ್ತೆಯೇ ಇಲ್ಲ ಪೆಂಗ್​ ಶುವಾಯ್

ಇದೇ ನೋಡಿ ಹೃದಯ ಕಂಪಿಸುವ ಸುದ್ದಿ. ಅದು ಅಕ್ಟೋಬರ್‌ 2 ರಂದು ಪೆಂಗ್‌ ಶುವಾಯ್‌ ಕಾಣಿಸಿಕೊಂಡಿದ್ದೇ ಕೊನೆ. ಅನಂತರ ಆಕೆ ನಿಗೂಢವಾಗಿ ಕಣ್ಮರೆಯಾಗಿ ಬಿಟ್ಟಿದ್ದಾಳೆ. ಆಕೆ ಎಲ್ಲಿದ್ದಾಳೆ? ಹೇಗಿದ್ದಾಳೆ? ಆಕೆಗೇನಾದ್ರೂ ಆಗಿದೆಯಾ ಅನ್ನೋದು ಇನ್ನೂ ಯಾರಿಗೂ ಗೊತ್ತಿಲ್ಲ.. ಇಂತಹ ಯಾವುದೇ ಪ್ರಶ್ನೆಗಳಿಗೆ ಉತ್ತರವಿಲ್ಲ. ಆಕೆಯ ಕುಟುಂಬಕ್ಕೆ, ಸ್ನೇಹಿತರಿಗೂ ಆಕೆ ಎಲ್ಲಿದ್ದಾಳೆ? ದಿಢೀರ್‌ ನಾಪತ್ತೆಯಾಗಿದ್ದು ಯಾಕೆ? ಅನ್ನೋದರ ಬಗ್ಗೆ ಅರಿವಿಲ್ಲ. ಕುಟುಂಬದವರು ಸ್ನೇಹಿತರಿಂದ ಹುಡುಕಾಟದ ಪ್ರಯತ್ನ ನಡೆಯುತ್ತಲೇ ಇದೆ. ಆದ್ರೆ, ಒಂದೇ ಒಂದು ಚಿಕ್ಕ ಸುಳಿವೂ ಸಿಗುತ್ತಿಲ್ಲ. ಹಾಗಾದ್ರೆ ಆಕೆ ಮಾಡಿದ್ದಾದರೂ ಏನು? ನಿಗೂಢವಾಗಿ ನಾಪತ್ತೆಯಾಗಲು ಏನಾದರೂ ಕಾರಣ ಇದೆಯಾ? ಅನ್ನೋದನ್ನು ಜಾಲಾಡುತ್ತಾ ಹೋದ್ರೆ ಬೊಟ್ಟು ಹೋಗುವುದೇ ಚೀನಾ ಸರ್ಕಾರದ ವಿರುದ್ಧ

ಮೀಟೂ ಆರೋಪ ಮಾಡಿದ್ದ ಆಟಗಾರ್ತಿ ಪೆಂಗ್‌ ಶುವಾಯ್‌
ಕಮ್ಯುನಿಸ್ಟ್‌ ಮುಖಂಡನ ಮುಖವಾಡ ಕಳಚಿದ್ದ ಟೆನಿಸ್‌ ತಾರೆ

ಸದ್ಯ ಚೀನಾದಲ್ಲಿ ಕಣ್ಮರೆಯಾಗಿರುವ ಪೆಂಗ್ ಶುವಾಯ್, ಈ ಹಿಂದೆ ಮೀಟೂ ಆರೋಪ ಮಾಡಿದ್ದರು. ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಎಳೆ ಎಳೆಯಾಗಿ ತೆರಿದಿಟ್ಟಿದ್ಲು. ತನ್ನ ಮೇಲೆ ಹೇಗೆ ಶೋಷಣೆಯಾಗಿದೆ. ಯಾವ ರೀತಿಯ ದೌರ್ಜನ್ಯ ಮಾಡಲಾಗಿದೆ ಅನ್ನೋದನ್ನು ನೇರವಾಗಿಯೇ ಆರೋಪ ಮಾಡಿದ್ಲು. ಅದೂ ಆಕೆ ಆರೋಪ ಮಾಡಿದ್ದು ಯಾರ ವಿರುದ್ಧ ಗೊತ್ತಾ? ಚೀನಾದಲ್ಲಿ ಆಡಳಿತ ನಡೆಸ್ತಿರೋ, ಕಮ್ಯೂನಿಸ್ಟ್​ ಪಕ್ಷದ ಮಾಜಿ ಮುಖಂಡನ ವಿರುದ್ಧ

ಹೀಗೆ ಇಂಗು ತಿಂದ ಮಂಗನಂತೆ ಕಾಣ್ತಿರೋ ಈ ವಯಸ್ಸಾದ ಆಸಾಮಿಯ ವಿರುದ್ಧವೇ ಟೆನಿಸ್ ಆಟಗಾರ್ತಿ, ಪೆಂಗ್ ಶುವಾಯ್ ತಿರುಬಿಬಿದ್ದಿದ್ದಳು.. ಚೀನಾದ ಕಮ್ಯೂನಿಸ್ಟ್​ ಪಕ್ಷದ ಪ್ರಭಾವಿ ಮುಖಂಡನಾಗಿರುವ ಈತ ತನ್ನನ್ನ ಹೇಗೆ ತಿಂದು ಮುಗಿಸಿದ್ದ ಅನ್ನೋ ಬಗ್ಗೆ ಅವಲತ್ತುಕೊಂಡಿದ್ದಳು.. ಅಲ್ಲದೇ, ಬಲವಂತವಾಗಿ ತನ್ನ ಮೇಲೆ ಹಲವು ಬಾರಿ ನಡೆದ ದೌರ್ಜನ್ಯದ ವಿರುದ್ಧ ಬರೆದುಕೊಂಡಿದ್ದಳು.

ಪೆಂಗ್‌ ಶುವಾಯ್‌ ಎಲ್ಲ ಪೋಸ್ಟ್‌ಗಳು ಡಿಲೀಟ್‌
ಒಂದೇ ಒಂದು ಮಾಹಿತಿ ಸಿಗದಂತೆ ಮಾಡಿದ ಚೀನಾ

ಚೀನಾದಲ್ಲಿ ಹಂಗೇ, ಅಲ್ಲಿಯ ಸರ್ಕಾರ ಏನು ಆದೇಶ ನೀಡುತ್ತೋ ಅದನ್ನು ಅಲ್ಲಿಯ ಜನ ಪಾಲನೆ ಮಾಡಬೇಕು. ಹೇಳಿ ಕೇಳಿ ಟೆನಿಸ್‌ ತಾರೆ ಮೀ ಟೂ ಆರೋಪ ಮಾಡಿದ್ದು ಒಬ್ಬ ಪ್ರಭಾವಿ ಕಮ್ಯುನಿಸ್ಟ್‌ ಮುಖಂಡನ ವಿರುದ್ಧ. ಆಕೆ ಇಂಟರನ್‌ ನೆಟ್‌ನಲ್ಲಿ ಏನೇನು ಆರೋಪ ಮಾಡಿದ್ಲೋ ಅ ಎಲ್ಲಾ ಪೋಸ್ಟ್​​ಗಳನ್ನೂ ಚೀನಾ ಸರ್ಕಾರ ಡಿಲೀಟ್​ ಮಾಡಿಸಿದೆ. ಅಲ್ಲದೇ, ಚೀನಾದ ಪ್ರಭಾವಶಾಲಿ ಸಾಮಾಜಿಕ ಜಾಲತಾಣವಾಗಿರೋ ‘ವೀಬೊ’ದಲ್ಲಿ ಟೆನಿಸ್‌ ತಾರೆ ಹೊಂದಿದ್ದ ಖಾತೆಯನ್ನೂ ಕಿತ್ತೊಗೆಯಲಾಗಿದೆ.

VO : ಪೆಂಗ್ ಶುವಾಯ್ ನಾಪತ್ತೆಯಾಗಿ, ಬರೋಬ್ಬರಿ 15 ದಿನಗಳೇ. ಅವಳ ಇರುವಿಕೆ ಬಗ್ಗೆ ಒಂದೇ ಒಂದು ಸುಳಿವೂ ಇನ್ನೂ ಸಿಕ್ಕಿಲ್ಲ. ಈ ವಿಚಾರ ಅಲ್ಲಿನ ಸರ್ಕಾರಕ್ಕೂ ಗೊತ್ತು. ಆಕೆಯ ಕುಟುಂಬದವರು ದೂರು ಕೂಡ ನೀಡಿದ್ದಾರೆ.  ಆದ್ರೆ, ಕ್ಸಿ ಜಿನ್​ಪಿಂಗ್ ನೇತೃತ್ವದ ಕಮ್ಯುನಿಸ್ಟ್​ ಸರ್ಕಾರ ಈ ವಿಚಾರದಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದೊಂದು ರೀತಿಯಲ್ಲಿ ಚೀನಾ ಜನತೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಅಲ್ಲಿನ ಸರ್ಕಾರದ ವಿರುದ್ಧ ಧ್ವನಿ ಎತ್ತಿ ಜೀವನ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

 

ಪೆಂಗ್ ಬಗ್ಗೆ ಮಾಹಿತಿ ಕೇಳಿದ ಟೆನಿಸ್‌ ಫೆಡರೇಷನ್‌
ವೇರ್‌ ಈಸ್‌ ಪೆಂಗ್‌ ಶುವಾಯ್‌’ ಅಭಿಯಾನ ಶುರು

ಇನ್ನು, ಪೆಂಗ್​ ಶುವಾಯ್ ನಾಪತ್ತೆಯಾಗಿರೋದನ್ನ ವರ್ಲ್ಡ್​ ಟೆನಿಸ್​ ಫೆಡರೇಷನ್ ಕೂಡ ಖಂಡಿಸಿದೆ. ಆಕೆಯ ಬಗ್ಗೆ ಮಾಹಿತಿ ನೀಡುವಂತೆ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್‌ ಫೆಡರೇಷನ್‌ ಚೀನಾ ಸರ್ಕಾರಕ್ಕೆ ಕೇಳಿದೆ. ಇನ್ನು, ಖ್ಯಾತನಾಮಳಾಗಿದ್ದ ಆಟಗಾರ್ತಿಯ ನಿಗೂಢ ಕಣ್ಮರೆಯ ಬಗ್ಗೆ ಅಗ್ರಶ್ರೇಹಯಾಂಕಿತ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ

ಪೆಂಗ್​​ ಶುವಾಯ್ ಮಿಸ್​ ಆಗಿರೋದು ನಿಜಕ್ಕೂ ಶಾಕಿಂಗ್. ಟೆನಿಸ್​ ಟೂರ್ನಿಗಳಲ್ಲಿ ಕೆಲ ವರ್ಷಗಳಿಂದ ನಾನು ಅವರನ್ನ ಭೇಟಿಯಾಗಿದ್ದೇನೆ. ಜಾಸ್ತಿ ಏನೂ ಹೇಳೋಕ್ಕಾಗಲ್ಲ. ಎಲ್ಲೇ ಇದ್ದರೂ ಅವರು ಸುರಕ್ಷಿತವಾಗಿ ವಾಪಾಸ್ ಆಗಲಿ ಎಂಬುದೇ ನಮ್ಮ ಆಶಯ. ಪೆಂಗ್​​ ಶುವಾಯ್ ಕಾಣೆಯಾಗಿದ್ದಾರೆ ಎಂಬ ವಿಚಾರ ಅವರ ಕುಟುಂಬಸ್ಥರಿಗೆ ಎಷ್ಟು ನೋವು ತಂದಿರಬಹುದು ಎಂಬುದನ್ನ ನೆನಸಿಕೊಳ್ಳೋದಕ್ಕೂ ಸಾಧ್ಯವಾಗಲ್ಲ – ನೊವಾಕ್ ಜೋಕೋವಿಕ್, ಟೆನಿಸ್‌ ಆಟಗಾರ 

ಇದೆಲ್ಲದರ ಜೊತೆಗೆ ಟ್ವಿಟರ್​ನಲ್ಲೀಗ ವೇರ್​ ಈಸ್​ ಪೆಂಗ್ ಶುವಾಯ್ ಅಭಿಯಾನ ಶುರುವಾಗಿದೆ. ಖ್ಯಾತ ಟೆನಿಸ್‌ ತಾರೆಯರು, ಟೆನಿಸ್‌ ಅಭಿಮಾನಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಚೀನಾ ಸರ್ಕಾರವನ್ನು ಪ್ರಶ್ನೆ ಮಾಡುತ್ತಾ ಇದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಮಾನ ಪದೇ ಪದೇ ಹರಾಜಾಗುತ್ತಿದೆ.

News First Live Kannada


Leave a Reply

Your email address will not be published. Required fields are marked *