Mi Clearance sale: ಕೇವಲ 3,999 ರೂ. ಗೆ ಖರೀದಿಸಿ ರೆಡ್ಮಿಯ ಈ ಸ್ಮಾರ್ಟ್​ಫೋನ್ – Mi clearance sale get smartphones for as low as Rs 3999 and most phones under Rs 6000 in India


Xiaomi Sale: ರೆಡ್ಮಿ 6A ಸ್ಮಾರ್ಟ್​ಫೋನ್​ನ ಮೂಲಬೆಲೆ 2GB RAM + 16GB ಸ್ಟೋರೇಜ್ ಸಾಮರ್ಥ್ಯಕ್ಕೆ 6,999 ರೂ. ಇದೆ. ಆದರೀಗ ಎಮ್​ಐ ಕ್ಲೀಯರೆನ್ಸ್ ಸೇಲ್​ನಲ್ಲಿ ಈ ಫೋನನ್ನು ನೀವು ಕೇವಲ 3999 ರೂ. ಗೆ ಪಡೆದುಕೊಳ್ಳಬಹುದು.

ಕೇವಲ 5000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್ ಸಿಗುತ್ತದೆ ಎಂದರೆ ನಂಬುತ್ತೀರಾ, ನಂಬಲೇಬೇಕು. ಯಾಕೆಂದರೆ ಶವೋಮಿ ಕಂಪನಿ ಎಮ್​ಐ ಕ್ಲೀಯರೆನ್ಸ್ ಸೇಲ್ (Mi clearance sale) ಎಂಬ ಹೊಸ ಮೇಳವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಅತ್ಯಂತ ಕಡಿಮೆ ಬೆಲೆಗೆ ರೆಡ್ಮಿ ಮೊಬೈಲ್​ಗಳು ಮಾರಾಟ ಆಗುತ್ತಿದೆ. ಈ ಸೇಲ್​ನಲ್ಲಿ ರೆಡ್ಮಿಯ ಕೆಲ ಸ್ಮಾರ್ಟ್​ಫೋನ್​ಗಳು (Smartphone) ಅರ್ಧ ಬೆಲೆಗೆ ಖರೀದಿಸಬಹುದು. ಮುಖ್ಯವಾಗಗಿ ರೆಡ್ಮಿ 6 ಎ (Redmi 6A) ಸ್ಮಾರ್ಟ್​ಫೋನನ್ನು ನೀವು ಕೇವಲ 3,999 ರೂ. ಗೆ ಖರೀದಿ ಮಾಡಬಹುದು.

ರೆಡ್ಮಿ 6A ಸ್ಮಾರ್ಟ್​ಫೋನ್​ನ ಮೂಲಬೆಲೆ 2GB RAM + 16GB ಸ್ಟೋರೇಜ್ ಸಾಮರ್ಥ್ಯಕ್ಕೆ 6,999 ರೂ. ಇದೆ. ಆದರೀಗ ಎಮ್​ಐ ಕ್ಲೀಯರೆನ್ಸ್ ಸೇಲ್​ನಲ್ಲಿ ಈ ಫೋನನ್ನು ನೀವು ಕೇವಲ 3999 ರೂ. ಗೆ ಪಡೆದುಕೊಳ್ಳಬಹುದು. ಇದರ ಜೊತೆಗೆ ರೆಡ್ಮಿ ನೋಟ್ 4, ರೆಡ್ಮಿ Y1 ಲೈಟ್ ಹಾಗೂ ರೆಡ್ಮಿ Y2 ಸ್ಮಾರ್ಟ್​ಫೋನ್​ಗಳು 5000 ರೂ. ಒಳಗಡೆ ಮಾರಾಟ ಆಗುತ್ತಿದೆ.

ಅಂತೆಯೆ 8999 ರೂ. ಬೆಲೆಯ ರೆಡ್ಮಿ A1 ಸ್ಮಾರ್ಟ್​ಫೋನ್ ಕೇವಲ 6,499 ರೂ. ಗೆ ಸೇಲ್ ಆಗುತ್ತಿದೆ. ಇದು ಇದು 1600*720 ಪಿಕ್ಸೆಲ್ ರೆಸಲೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್‌ ಡಾಟ್ ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಡಾರ್ಕ್ ಮೋಡ್ ಮತ್ತು ನೈಟ್ ಮೋಡ್ ಆಯ್ಕೆ ನೀಡಲಾಗಿದೆ. ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದುಕೊಂಡಿದೆ. 1TB ವರೆಗೆ ಮೈಕ್ರೊ ಎಸ್​ಡಿ ಕಾರ್ಡ್ ಅನ್ನು ವಿಸ್ತರಿಸಬಹುದಾಗಿದೆ.

ಈ ಸ್ಮಾರ್ಟ್‌ಫೋನ್​ನಲ್ಲಿ 8 ಮೆಗಾಫಿಕ್ಸೆಲ್​ನ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಇದೆ. ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಮುಂಭಾಗ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್​ನೊಂದಿಗೆ ಬರುತ್ತದೆ. 30 ದಿನಗಳ ಸ್ಟ್ಯಾಂಡ್​ ಬೈ ಟೈಮ್ ಎಂದು ಕಂಪನಿ ಹೇಳಿಕೊಂಡಿದೆ.

TV9 Kannada


Leave a Reply

Your email address will not be published.