
ರೋಹಿತ್, ಪಂತ್
MI vs DC Prediction Playing XI IPL 2022: ಕಳೆದ ಪಂದ್ಯಗಳಲ್ಲಿ ಕೀರನ್ ಪೊಲಾರ್ಡ್ ಅವರನ್ನು ಹೊರಗಿಟ್ಟು ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ದರು. ಹೀಗಿರುವಾಗ ರೋಹಿತ್ ಕೊನೆಯ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ನ 15 ನೇ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡವನ್ನು ಎದುರಿಸಲಿದೆ. ಮುಂಬೈ ಈಗಾಗಲೇ ಈ ಋತುವಿನ ಪ್ಲೇಆಫ್ ರೇಸ್ನಿಂದ ಹೊರಗುಳಿದಿದೆ ಆದರೆ ದೆಹಲಿ ತಂಡ ಇನ್ನೂ ರೇಸ್ನಲ್ಲಿದೆ. ಐಪಿಎಲ್-2022 (IPL 2022) ರ ಪ್ಲೇಆಫ್ಗೆ ಡೆಲ್ಲಿ ಪ್ರವೇಶ ಪಡೆಯಬೇಕಾದರೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲಬೇಕು, ಆಗ ಮಾತ್ರ ಪ್ಲೇಆಫ್ಗೆ ಹೋಗಬಹುದು. ಡೆಲ್ಲಿ ಸದ್ಯ 13 ಪಂದ್ಯಗಳಿಂದ 14 ಅಂಕ ಹೊಂದಿದೆ. ಇದು ಅವರ ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅವರು ಒಟ್ಟು 16 ಅಂಕಗಳನ್ನು ಸಂಪಾಧಿಸಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಕೂಡ 16 ಅಂಕಗಳನ್ನು ಹೊಂದಿದೆ, ಆದರೆ ದೆಹಲಿಯ ನಿವ್ವಳ ರನ್ ರೇಟ್ ಬೆಂಗಳೂರಿಗಿಂತ ಉತ್ತಮವಾಗಿದೆ.
ಡೆಲ್ಲಿ ತಂಡಕ್ಕೆ ಈ ಸೀಸನ್ ಅಷ್ಟಾಗಿ ಉತ್ತಮವಾಗಿರಲಿಲ್ಲ. ಆರಂಭದಲ್ಲಿ ಈ ತಂಡ ಪ್ಲೇಆಫ್ ರೇಸ್ನಿಂದ ಹೊರಗುಳಿಯುವಂತೆ ತೋರುತ್ತಿತ್ತು. ಆದರೆ ಅವರು ತನ್ನ ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ರೇಸ್ನಲ್ಲಿ ತನ್ನನ್ನು ತಾನೇ ಉಳಿಸಿಕೊಂಡರು. ಕೊನೆಯ ಎರಡು ಪಂದ್ಯಗಳಲ್ಲಿ ಡೆಲ್ಲಿ, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಮುಂಬೈ ವಿರುದ್ಧ ದೆಹಲಿಯ ಪ್ರಯತ್ನ ತನ್ನ ಗೆಲುವಿನ ಓಟವನ್ನು ಮುಂದುವರಿಸುವುದಾಗಿದೆ. ಮತ್ತೊಂದೆಡೆ, ನಾವು ಮುಂಬೈ ಬಗ್ಗೆ ಮಾತನಾಡಿದರೆ, ಅದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದ ತಂಡವು ಗೆಲುವಿನೊಂದಿಗೆ ಈ ಋತುವನ್ನು ಕೊನೆಗೊಳಿಸಬೇಕಾಗಿದೆ, ಅದು ಯಶಸ್ವಿಯಾದರೆ ಡೆಲ್ಲಿ ಸಂಕಷ್ಟಕ್ಕೆ ಸಿಲುಕುತ್ತದೆ.