Microsoft Office: ಮೈಕ್ರೋಸಾಫ್ಟ್ ಆಫೀಸ್ ಮೇಲೆ ಹ್ಯಾಕರ್​ಗಳ ಕಣ್ಣು: ನಿಮ್ಮ ಪಿಸಿಯನ್ನು ತಕ್ಷಣವೇ ಹೀಗೆ ಮಾಡಿ | Follina Hackers Can Take Control Of Your PC Through Microsoft Office check How To Avoid It


ಈ ವೈರಸ್ (Virus) ಆವರಿಸಿಕೊಂಡ ನಂತರ ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ ಅನ್ನು ಬಳಸಿಕೊಂಡು, ಹ್ಯಾಕರ್‌ಗಳು “ಫೋಲಿನಾ” (Follina) ಎಂಬ ದುರ್ಬಲತೆಯ ಮೂಲಕ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಎಂದು ಹೇಳಿದೆ.

ಮೈಕ್ರೋಸಾಫ್ಟ್ ಆಫೀಸ್​ನ (Microsoft Office) ದುರ್ಬಲತೆಯ ಲಾಭವನ್ನು ಹೊಸ ಹ್ಯಾಕಿಂಗ್ ಗುಂಪೊಂದು ಪಡೆಯುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ nao_sec ಎಂಬ ಸಂಶೋಧನಾ ಗುಂಪು ಮಾಹಿತಿ ನೀಡದ್ದು ಹೊಸ ಹೊಸ ನ್ಯೂನ್ಯತೆಯನ್ನು ಗುರುತಿಸಿದೆ. ಅಲ್ಲದೆ ಇದರ ಬಗ್ಗೆ ಮೈಕ್ರೋಸಾಫ್ಟ್ ಅಥವಾ ಯಾವುದೇ ಆಂಟಿ-ವೈರಸ್ ಮಾರಾಟಗಾರರಿಗೆ ತಿಳಿದಿರಲಿಲ್ಲ ಎಂದು ಹೇಳಿದೆ. ಈ ವೈರಸ್ (Virus) ಆವರಿಸಿಕೊಂಡ ನಂತರ ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ ಅನ್ನು ಬಳಸಿಕೊಂಡು, ಹ್ಯಾಕರ್‌ಗಳು “ಫೋಲಿನಾ” (Follina) ಎಂಬ ದುರ್ಬಲತೆಯ ಮೂಲಕ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಎಂದು ಹೇಳಿದೆ. ನೀವು ಕಳೆದ ಕೆಲವು ದಿನಗಳಲ್ಲಿ ದುರುದ್ದೇಶಪೂರಿತ ವರ್ಡ್ ಡಾಕ್ಯುಮೆಂಟ್ ಅನ್ನು ತೆರೆದಿದ್ದರೆ ಫೋಲಿನಾ ವೈರಸ್ ಆಟೆಕ್ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ.

ಫೋಲಿನಾ ಎಷ್ಟು ಅಪಾಯಕಾರಿ?:

ಈ ಹೊಸ ವೈರಸ್ ಅಟೋಮೆಟಿಕ್ ಆಗಿ ಕಮಾಂಡ್ಸ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹ್ಯಾಕರ್‌ಗಳು ಪ್ರೋಗ್ರಾಂಗಳನ್ನು ಸ್ಥಾಪಿಸಬಹುದು ಮತ್ತು ಅಳಿಸಬಹುದು ಜೊತೆಗೆ ಡೇಟಾವನ್ನು ವೀಕ್ಷಿಸಬಹುದು ಮತ್ತು ಮಾರ್ಪಡಿಸಬಹುದು ಅಲ್ಲದೆ ನಮ್ಮ ವೈಯಕ್ತಿಕ ಮಾಹಿತಿ ಕಲೆಹಾಕಿ ಹೊಸ ಖಾತೆಗಳನ್ನು ರಚಿಸಬಹುದು ಎಂದು ವರದಿಯಾಗಿದೆ.

ಮೈಕ್ರೋಸಾಫ್ಟ್​ನ ಯಾವ ವರ್ಷನ್ ಮೇಲೆ ಪರಿಣಾಮ ಬೀರುತ್ತವೆ?: ಟೋಕಿಯೋ ಮೂಲದ ಸಂಶೋಧನಾ ಗುಂಪಿನ ಪ್ರಕಾರ, ಮೈಕ್ರೋಸಾಫ್ಟ್ ಆಫೀಸ್ 2013 ಮತ್ತು 2021ರ ಆವೃತ್ತಿ ಫೋಲಿನಾ ದಾಳಿಗೆ ಗುರಿಯಾಗುತ್ತವೆ. Windows 10 ಮತ್ತು 11 ನಲ್ಲಿ Microsoft 365 ನ ಪರವಾನಗಿ ಆವೃತ್ತಿಗಳು ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದೆ.

ಇನ್ನು ಈ ವಿಚಾರವನ್ನು ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ ಕೂಡ. ಆದರೆ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫೋಲಿನಾವನ್ನು ತೊಡೆದುಹಾಕಲು ಯಾವುದೇ ಮಾರ್ಗವಿಲ್ಲ ಎಂಬುದು ಕೆಟ್ಟ ಸುದ್ದಿ. ಫೋಲಿನಾಗೆ ಸಂಭಾವ್ಯ ಡೇಟಾ ನಷ್ಟವನ್ನು ನಿಭಾಯಿಸಲು ಬಳಕೆದಾರರಿಗೆ ಸಹಾಯ ಮಾಡಲು, ಮೈಕ್ರೋಸಾಫ್ಟ್ ನಿಭಾಯಿಸಲು ಮಾರ್ಗಸೂಚಿಗಳ ಗುಂಪನ್ನು ಪೂರೈಸಿದೆ.

ನೀವೇನು ಮಾಡಬೇಕು?:

TV9 Kannada


Leave a Reply

Your email address will not be published.