MK Stalin hailed Rahul Gandhi say his Bharat Jodo Yatra Speeches Creating Tremors In India – ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ


ರಾಹುಲ್ ಅವರ ಭಾಷಣಗಳು ದೇಶದಲ್ಲಿ ನಡುಕ ಹುಟ್ಟಿಸುತ್ತಿವೆ, ಅವರು ಚುನಾವಣಾ ರಾಜಕೀಯ ಅಥವಾ ಪಕ್ಷ ರಾಜಕಾರಣವನ್ನು ಮಾತನಾಡುತ್ತಿಲ್ಲ, ಆದರೆ ಸಿದ್ಧಾಂತದ ರಾಜಕೀಯವನ್ನು ಮಾತನಾಡುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಕೆಲವು ವ್ಯಕ್ತಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ

ಎಂಕೆ ಸ್ಟಾಲಿನ್

ಚೆನ್ನೈ: ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ರಾಹುಲ್ ಗಾಂಧಿ (Rahul Gandhi) ಮಾಡುವ ಭಾಷಣಗಳು ದೇಶದಲ್ಲಿ ನಡುಕ ಹುಟ್ಟಿಸುತ್ತಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಶ್ಲಾಘಿಸಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಹೊಗಳಿದ ಸ್ಟಾಲಿನ್, ದೇಶಕ್ಕೆ ಅವರಂಥ ನಾಯಕ ಮತ್ತು ಜಾತ್ಯಾತೀತ ಮತ್ತು ಸಮಾನತೆ ಮೌಲ್ಯವನ್ನು ಸಾರುವ ಮಹಾತ್ಮಗಾಂಧಿಯವರಂಥ ನಾಯಕರು ಬೇಕು ಎಂದಿದ್ದಾರೆ. ಭಾನುವಾರ ಚೆನ್ನೈನಲ್ಲಿ ಕಾಂಗ್ರೆಸ್​​​ನ ಹಿರಿಯ ನಾಯಕ ಎ ಗೋಪಣ್ಣ ಅವರು ನೆಹರು ಬಗ್ಗೆ ಬರೆದ ಮಾಮನಿತರ್ ನೆಹರು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಟಾಲಿನ್ ಈ ಮಾತು ಹೇಳಿದ್ದಾರೆ. ನೆಹರು ಅವರು “ನಿಜವಾದ ಪ್ರಜಾಪ್ರಭುತ್ವವಾದಿ, ಸಂಸದೀಯ ಪ್ರಜಾಪ್ರಭುತ್ವದ ಸಂಕೇತ. ಆದ್ದರಿಂದಲೇ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಅವರನ್ನು ಅಭಿನಂದಿಸುತ್ತವೆ” ಎಂದು ಸ್ಟಾಲಿನ್ ಹೇಳಿದ್ದಾರೆ.ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಟೀಕಿಸಿದ ಸ್ಟಾಲಿನ್, ಇಂದು ಸಂಸತ್ತಿನಲ್ಲಿ ಪ್ರಧಾನ ವಿಷಯಗಳ ಕುರಿತು ಚರ್ಚೆಯಾಗುತ್ತಿಲ್ಲ. ಆದರೆ ನೆಹರೂ ಅವರು ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಪ್ರೋತ್ಸಾಹಿಸಿದರು.

ಸಾರ್ವಜನಿಕ ವಲಯದ ಉದ್ಯಮಗಳು ಮುಚ್ಚುತ್ತಿರುವಾಗಲೂ ನಮಗೆ ಈಗ ನೆಹರು ನೆನಪಾಗುತ್ತಾರೆ “ಇಂದಿನ ರಾಜಕೀಯ ಪರಿಸ್ಥಿತಿ ನಮಗೆ ನೆಹರು ಅವರ ನಿಜವಾದ ಮೌಲ್ಯವನ್ನು ತೋರಿಸುತ್ತದೆ. ಇಷ್ಟು ವರ್ಷಗಳ ನಂತರ ತಮಿಳುನಾಡಿಗೆ (ಇವಿಆರ್) ಪೆರಿಯಾರ್, ಅಣ್ಣಾ (ಸಿಎನ್ ಅಣ್ಣಾದೊರೈ) ಮತ್ತು ಕಲೈಂಜರ್ (ಎಂ ಕರುಣಾನಿಧಿ) ಅಗತ್ಯವಿರುವಂತೆಯೇ, ಭಾರತಕ್ಕೆ ಒಕ್ಕೂಟ, ಸಮಾನತೆ, ಭ್ರಾತೃತ್ವ, ಸಮಾನತೆ, ಜಾತ್ಯತೀತತೆಯನ್ನು ಸ್ಥಾಪಿಸಲು ಗಾಂಧಿ ಮತ್ತು ನೆಹರು ಅಗತ್ಯವಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

“ಆತ್ಮೀಯ ಸಹೋದರ ರಾಹುಲ್” ಅವರು ದೇಶದಾದ್ಯಂತ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದು, ಕನ್ಯಾಕುಮಾರಿಯಿಂದ ಅದಕ್ಕೆ ಚಾಲನೆ ನೀಡಿದ್ದಕ್ಕೆ ನಾನು ಖುಷಿ ಪಡುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *